ರಣಬೀರ್‌ಗೆ ಕಂಟಕವಾದ ಗೋಮಾಂಸ ಹೇಳಿಕೆ; ಉಜ್ಜಯಿನಿ ದೇವಸ್ಥಾನ ಪ್ರವೇಶಿಸದಂತೆ ತಡೆದ ಬಜರಂಗದಳ ಕಾರ್ಯಕರ್ತರು

By Shruiti G Krishna  |  First Published Sep 7, 2022, 11:05 AM IST

ಗೋಮಾಂಸ ತುಂಬಾ ಇಷ್ಟ ಎಂದು ಹೇಳಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಪ್ರವೇಶಿಸದಂತೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಬಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. 


ಗೋಮಾಂಸ ತುಂಬಾ ಇಷ್ಟ ಎಂದು ಹೇಳಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಪ್ರವೇಶಿಸದಂತೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಬಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ರಣಬೀರ್ ಮತ್ತು ಅಲಿಯಾ ಸದ್ಯ ಬ್ರಹ್ಮಾಸ್ತ್ರ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಇಬ್ಬರು ಉಜ್ಜಯಿನಿಗೆ ಭೇಟಿ ನೀಡಿದ್ದರು. ಆದರೆ ಬಜರಂಗ ದಳ ಕಾರ್ಯಕರ್ತರು ಅವರು ತಡೆದು ನಿಲ್ಲಿಸಿದ್ದಾರೆ. ರಣಬೀರ್ ಕಪೂರ್ ಈ ಹಿಂದೆ ಗೋಮಾಂಸ ಸೇವನೆ ಕುರಿತು ನೀಡಿದ್ದ ಹೇಳಿಕೆಯಿಂದ ದೇವಸ್ಥಾನ ಪ್ರವೇಶ ಮಾಡದಂತೆ ತಡೆಯಲಾಗಿದೆ. ರಣಬೀರ್ ಮತ್ತು ಆಲಿಯಾ ಎಂಟ್ರಿ ಕೊಡುತ್ತಿದ್ದಂತೆ ಪ್ರತಿಭಟನಾಕಾರರು ಸ್ಟಾರ್ ದಂಪತಿಯನ್ನು ತಡೆದು ಗದ್ದಲ ಮಾಡಿದರು. 

ಬಳಿಕ ಪೊಲೀಸರು ಪ್ರತಿಭಟನಾಕಾರರ ಪೋಲೀಸ್ ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಣ್ಣಗಾಗಿಸಿದರು. ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ವೈರಲ್ ಆಗಿದೆ. 'ಕೆಲವು ವಿಐಪಿಗಳು ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಕಾರಣ ನಾವು ವ್ಯವಸ್ಥೆ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಕೆಲವರು ಅವರ ವಿರುದ್ಧ ಪ್ರತಿಭಟಿಸಲು ಇಲ್ಲಿ ಸೇರಲು ಪ್ರಾರಂಭಿಸಿದರು. ಪ್ರತಿಭಟನಾಕಾರರೊಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ ಜಗಳವಾಡಲು ಪ್ರಾರಂಭಿಸಿದರು' ಎಂದು ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 ಅಡಿಯಲ್ಲಿ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Tap to resize

Latest Videos

ವೈರಲ್ ಆಗಿರುವ ವಿಡಿಯೋದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಬೇಕಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರಿಗೆ ಕಪ್ಪು ಬಾವುಟವನ್ನು ಮಾತ್ರ ತೋರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಆದರೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಲು ಪ್ರಾರಂಭಿಸಿದರು ಎಂದು ಬಜರಂಗದಳದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ, 'ನಾವು ರಣಬೀರ್ ಕಪೂರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ಅವರನ್ನು ಮಹಾಕಾಳೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಗೋಮಾತೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವುದು ಒಳ್ಳೆಯದು ಎಂದು ಅವರು ಹೇಳಿದ್ದರು' ಎಂದು ಆಕ್ರೋಶ ಹೊರಹಾಕಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿತ್ತ ಆಲಿಯಾ ಮತ್ತು ರಣಬೀರ್ ಅರನ್ನು ದೇವಸ್ಥಾನಕ್ಕೆ ಹೋಗದಂತೆ ತಡೆದರು. 

ಇಷ್ಟವಿಲ್ಲ ಎಂದರೆ ನನ್ನನ್ನ ನೋಡ್ಬೇಡಿ; ಬಾಯ್ಕಟ್‌ಗೆ ಉತ್ತರಿಸಿದ ಆಲಿಯಾ ಭಟ್ ಸಖತ್ ಟ್ರೋಲ್

ರಣಬೀರ್ ಕಪೂರ್ ಹೇಳಿದ್ದೇನು?

2012ರ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್, 'ನಮ್ಮ ಮನೆಯಲ್ಲಿ ಬೆಳಿಗ್ಗೆಯ ಉಪಹಾರಕ್ಕೆ ಹೆಚ್ಚಾಗಿ ಮಾಂಸಹಾರ ಸೇವಿಸುತ್ತೇವೆ. ಅದು ತುಂಬಾ ಕಷ್ಟ. ನಮ್ಮ ಕುಟುಂಬ ಪೇಶಾವರದಿಂದ ಬಂದಿರುವುದು. ಪೇಶಾವರಿಗಳು ಆಹಾರಪ್ರೀಯರು. ನಾನು ಕೂಡ ಮಟನ್, ಗೋಮಾಂಸ, ರೆಡ್ ಮೀಟ್ ಪ್ರೀಯ. ನಾನು ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ' ಎಂದು ಹೇಳಿದ್ದರು. 

ಗೋಮಾಂಸ ತುಂಬಾ ಇಷ್ಟ; ರಣಬೀರ್ ಕಪೂರ್ ಹೇಳಿಕೆ ವೈರಲ್, 'ಬ್ರಹ್ಮಾಸ್ತ್ರ' ಬಾಯ್ಕಟ್‌ಗೆ ಒತ್ತಾಯ

ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಹಿಂದೂಗಳೂ ಗೋವನ್ನು ಪವಿತ್ರವೆಂದು ನಂಬಿದ್ದಾರೆ, ಗೋವನ್ನು ಪೂಜಿಸುತ್ತಾರೆ. ಹಾಗಾಗಿ ರಣಬೀರ್ ಕಪೂರ್ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅದರಲ್ಲೂ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಗೋಮಾಂಸ ತಿನ್ನುವ ವ್ಯಕ್ತಿ ದೇವರಾಗಲೂ ಹೇಗೆ ಸಾಧ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಬ್ರಹ್ಮಾಸ್ತ್ರ ಬಾಯ್ಕಟ್‌ ಮಾಡುವಂತೆ ಟ್ರೆಂಡ್ ಮಾಡಲಾಗುತ್ತಿದೆ. 

click me!