ಕೊನೆಗೂ ಬಹಿರಂಗವಾಯ್ತು ರಣಬೀರ್ - ಅಲಿಯಾ ಮದುವೆ ದಿನಾಂಕ

By Shruiti G Krishna  |  First Published Apr 5, 2022, 4:35 PM IST

ಮತ್ತೊಂದು ಅದ್ದೂರಿ ಮದುವೆಗೆ ಬಾಲಿವುಡ್ ಸಿದ್ಧವಾಗಿದೆ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಏಪ್ರಿಲ್ ತಿಂಗಳಲ್ಲಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಮದುವೆ ದಿನಾಂಕ ಬಹಿರಂಗವಾಗಿರಲಿಲ್ಲ.ಇದೀಗ ಅಲಿಯಾ-ರಣಬೀರ್ ವಿವಾಹ ದಿನಾಂಕ ರಿವೀಲ್ ಆಗಿದ್ದು, ಏಪ್ರಿಲ್ 13 ರಿಂದ 17ರ ವರೆಗೂ ಮದುವೆ ಸಮಾರಂಭ ನಡೆಯಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.


ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಗ್ರ್ಯಾಂಡ್ ಮದುವೆ ಬಳಿಕ ಮತ್ತೊಂದು ತಾರಾಜೋಡಿಯ ಮದುವೆಗೆ ಬಾಲಿವುಡ್ ಸಿದ್ಧವಾಗುತ್ತಿದೆ. ಅದು ಮತ್ಯಾರು ಅಲ್ಲ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್(Ranbir Kapoor and Alia Bhatt). ಇಬ್ಬರ ಮದುವೆ ವಿಚಾರ ಅನೇಕ ತಿಂಗಳಿಂದ ಸದ್ದು ಮಾಡುತ್ತಿದೆ. ಸ್ಟಾರ್ ಜೋಡಿ ಕಳೆದ ವರ್ಷವೇ ಹಸೆಮಣೆ ಏರಲಿದೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಮದುವೆ ಮುಂದೂಡಿದ್ದರು. ಇದೀಗ ಮದುವೆಗೆ ಸಮಯ ಕೂಡಿ ಬಂದಿದೆ. ಈಗಾಗಲೇ ಅಲಿಯಾ ಮತ್ತು ರಣಬೀರ್ ಇಬ್ಬರು ಇದೆ ತಿಂಗಳು ಏಪ್ರಿಲ್ ನಲ್ಲಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಆದರೆ ದಿನಾಂಕ ಬಹಿರಂಗವಾಗಿರಲಿಲ್ಲ. ಇದೀಗ ಅಲಿಯಾ ಮದುವೆ ದಿನಾಂಕ ರಿವೀಲ್ ಆಗಿದೆ.

ಪಿಂಕ್ ವಿಲ್ಲ ವರದಿ ಮಾಡಿರುವ ಪ್ರಕಾರ ಅಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಸಂಭ್ರಮ ಏಪ್ರಿಲ್ 13 ರಿಂದ 17ರ ವರೆಗೆ ನಡೆಯಲಿದೆ (Ranbir Kapoor and Alia Bhatt wedding date). ಸಂಗೀತ, ಮೆಹಂದಿ ಸಮಾರಂಭಗಳು ಈಗಾಗಲೇ ನಿಗದಿಯಾಗಿದೆ. ಈ ಸಮಯದಲ್ಲಿ ತಮ್ಮನ್ನು ಸ್ವಾತಂತ್ರ್ಯವಾಗಿ ಬಿಡುವಂತೆ ಅಲಿಯಾ ಮತ್ತು ರಣಬೀರ್ ಕುಟುಂಬದವರು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ಮದುವೆ ಸಮಾರಂಭದಲ್ಲಿ ತೀರ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Tap to resize

Latest Videos

ಅಲಿಯಾ ಭಟ್ ತನ್ನ ಮದುವೆ ಡ್ರೆಸ್ ಅನ್ನು ಮನೀಶ್ ಮಲ್ಹೋತ್ರಾ ಮತ್ತು ಸಬ್ಯಸಾಚಿ(Alia will wear Manish Malhotra and Sabyasachi outfits) ಅವರ ಬಳಿ ಡಿಸೈನ್ ಮಾಡಿಸಿದ್ದಾರೆ. ಈಗಾಗಲೇ ಅಲಿಯಾ ಡ್ರೆಸ್ ತಯಾರಾಗಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಅಂದಹಾಗೆ ಈ ತಾರಾ ಜೋಡಿ ಮದುವೆ ಬಳಿಕ ಚಿತ್ರರಂಗದ ಸ್ನೇಹಿತರಿಗಾಗಿ ಏಪ್ರಿಲ್ ಕೊನೆಯ ವಾರದಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಿದ್ದಾರಂತೆ.

ಪೂರ್ವಜರ ಮನೆಯಲ್ಲಿ ರಣಬೀರ್-ಅಲಿಯಾ ಮದುವೆ; 450 ಜನರಿಗೆ ಮಾತ್ರ ಆಹ್ವಾನ

ಅಂದಹಾಗೆ ರಣಬೀರ್ ಮತ್ತ ಅಲಿಯಾ ಇಬ್ಬರು ಪೂರ್ವಜರ ಮನೆಯಲ್ಲಿ ಹಸೆಮಣೆ ಏರುತ್ತಿದ್ದಾರೆ. ಪೂರ್ವಜರ ಮನೆ ಎಂದರೆ ರಣಬೀರ್ ಕಪೂರ್ ಪೂರ್ವಜರು ಬದುಕಿ ಬಾಳಿದ ಆರ್ ಕೆ ಮನೆ. ವಿಶೇಷ ಎಂದರೆ ಇದೆ ಮನೆಯಲ್ಲಿ ರಣಬೀರ್ ತಂದೆ-ತಾಯಿ ಅಂದರೆ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಯಾಗಿದ್ದರು. ಹಾಗಾಗಿ ಅದೇ ಹಳೆಯ ಮನೆಯಲ್ಲಿ ರಣಬೀರ್ ಕೂಡ ಅಲಿಯಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಇಬ್ಬರ ಮದುವೆ ಬರುವ ಅತಿಥಿಗಳ ಲಿಸ್ಟ್ ಕೂಡ ಈಗಾಗಲೇ ರೆಡಿಯಾಗಿದೆ. ಕೇವಲ 450 ಜನ ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಲಿಯಾ ಮತ್ತು ರಣಬೀರ್ ಮದುವೆ ಏಪ್ರಿಲ್ ಕೊನೆಯಲ್ಲಿ ನಿಗದಿಯಾಗಿತ್ತಂತೆ. ಆದರೆ ಅಲಿಯಾ ಭಟ್ ಕುಟುಂಬದ ಹಿರಿಯರೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ ಮುಂಚಿತವಾಗಿಯೇ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಮದುವೆ ಬಗ್ಗೆ ಅಲಿಯಾ ಮತ್ತು ರಣಬೀರ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

5 ವರ್ಷಗಳ ಬಳಿಕ 'ಬ್ರಹ್ಮಾಸ್ತ್ರ' ಶೂಟಿಂಗ್ ಮುಗಿಸಿದ ರಣಬೀರ್-ಅಲಿಯಾ

ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಅಲಿಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಲಿಯಾ ಇತ್ತೀಚಿಗಷ್ಟೆ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸುಮಾರು 5 ವರ್ಷಗಳಿಂದ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಮೊನ್ನೆಯಷ್ಟೆ ಚಿತ್ರೀಕರಣ ಮುಗಿಸಿ ಸಂತಸ ಪಟ್ಟಿದೆ. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಭಟ್ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಚಿತ್ರೀಕರಣ ವೇಳೆಯೇ ಇಬ್ಬರಿಗೂ ಲವ್ ಆಗಿದ್ದು, ಇದೀಗ ಮದುವೆ ವರೆಗೂ ಬಂದಿದೆ. ಈ ಸಿನಿಮಾ ಜೊತೆಗೆ ಅಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸುತ್ತಿದ್ದಾರೆ. ಇನ್ನು ರಣಬೀರ್ ಕಪೂರ್ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

click me!