'ರಮ್ಯಾ ಕ್ರಷ್ಣನ್ ಅವರನ್ನು ತಳ್ಳಿಬಿಡಬೇಕು' ಅನ್ನಿಸಿಬಿಟ್ಟಿತ್ತು ಅಂದಿದ್ದ ರಾಣಾ ದಗ್ಗುಬಾಟಿ; ಸೀಕ್ರೆಟ್ ಹೊರಬಿತ್ತು!

Published : Nov 03, 2025, 01:10 PM IST
Rana Daggubati Ramya Krishnan

ಸಾರಾಂಶ

ಬಾಹುಬಲಿ ಸಿನಿಮಾ ಅದೆಷ್ಟು ಸೂಪರ್ ಹಿಟ್ ಆಗಿತ್ತು ಎಂದರೆ, ಆ ಸಮಯದಲ್ಲಿ ಈ ಚಿತ್ರದ ಪಾತ್ರಗಳು ಜನರ ನಾಲಿಗೆಯ ತುದಿಯಲ್ಲಿ ಇದ್ದವು. ಬಾಹುಬಲಿ, ಶಿವಗಾಮಿ, ಕಟ್ಟಪ್ಪ, ಬಲ್ಲಾಳದೇವ ಹೀಗೆ ಸಿನಿಮಾದ ಹೆಚ್ಚಿನ ಪಾತ್ರಗಳು ದಿನನಿತ್ಯ ಚೆರ್ಚೆಯ ಸಂಗತಿಗಳು ಎನ್ನುವಂತಾಗಿದ್ದವು. ಮುಂದೆ ಸ್ಟೋರಿ ನೋಡಿ..

ರಾಣಾ ದಗ್ಗುಬಾಟಿ ಮಾತೀಗ ವೈರಲ್!

ಎಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶನದ 'ಬಾಹುಬಲಿ 1' ಹಾಗೂ 'ಬಾಹುಬಲಿ 2' ಸಿನಿಮಾಗಳು ಸೂಪರ್ ಹಿಟ್ ಆಗಿರೋದು ಗೊತ್ತೇ ಇದೆ. ಇದೀಗ ಇವೆರಡೂ ಸಿನಿಮಾಗಳನ್ನು ಒಟ್ಟುಗೂಡಿಸಿ ಟ್ರಿಮ್ ಮಾಡಿ 'ಬಾಹುಬಲಿ- ದಿ ಎಪಿಕ್' ಹೆಸರಿನಲ್ಲಿ ಪ್ರಪಂಚದಾದ್ಯಂತ ಮತ್ತೆ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಕೂಡ ಸದ್ಯ ಜಾಗತಿಕ ಮಟ್ಟದಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಮಯದಲ್ಲಿ ನಟ ರಾಣಾ ದಗ್ಗುಬಾಟಿ ಅವರು ತಮಾಷೆಗಾಗಿ ಪ್ರಭಾಸ್ ಬಳಿ ಹೇಳಿದ್ದ ಮಾತೊಂದು ವೈರಲ್ ಆಗುತ್ತಿದೆ.

ಬಾಹುಬಲಿ ಸಿನಿಮಾ ಅದೆಷ್ಟು ಸೂಪರ್ ಹಿಟ್ ಆಗಿತ್ತು ಎಂದರೆ, ಆ ಸಮಯದಲ್ಲಿ ಈ ಚಿತ್ರದ ಪಾತ್ರಗಳು ಜನರ ನಾಲಿಗೆಯ ತುದಿಯಲ್ಲಿ ಇದ್ದವು. ಬಾಹುಬಲಿ, ಶಿವಗಾಮಿ, ಕಟ್ಟಪ್ಪ, ಬಲ್ಲಾಳದೇವ ಹೀಗೆ ಸಿನಿಮಾದ ಹೆಚ್ಚಿನ ಪಾತ್ರಗಳು ದಿನನಿತ್ಯ ಚೆರ್ಚೆಯ ಸಂಗತಿಗಳು ಎನ್ನುವಂತಾಗಿದ್ದವು. ಇಡೀ ಜಗತ್ತು ಈ ತೆಲುಗು ಸಿನಿಮಾದ ಸೆಳೆತಕ್ಕೆ ಸಿಲುಕಿ ರೋಮಾಂಚನ ಹೊಂದಿತ್ತು. ಇದೀಗ ಈ ಎರಡು ಸಿನಿಮಾವನ್ನು ಸೇರಿಸಿ ಮಾಡಿರುವ 'ಬಾಹುಬಲಿ- ದಿ ಎಪಿಕ್' ಸಿನಿಮಾ ತೆರೆಗೆ ಬಂದಿದ್ದು, ಜನರು ಈ ಬಗ್ಗೆ ಮತ್ತೆ ಮಾತನ್ನಾಡತೊಗಿದ್ದಾರೆ. ಈ ಬಗ್ಗೆ ನಟ ರಾಣಾ ದಗ್ಗುಬಾಟಿ (Rana Daggubati) ಹೇಳಿರುವ ಮಾತೊಂದು ಸಖತ್ ವೈರಲ್ ಆಗುತ್ತಿದೆ.

ಶಿವಗಾಮಿ ಬಗ್ಗೆ ರಾಣಾ ಹೇಳಿದ್ದೇನು?

ಮುಂದೆ ನೋಡಿ.. 'ಸಿನಿಮಾ ಚಿತ್ರೀಕರಣದ ವೇಳೆ ಬಲ್ಲಾಳದೇವನ ಪ್ರತಿಮೆ ನಿಲ್ಲಿಸುವ ಸನ್ನಿವೇಶ ಮಾತ್ರ ಚಿತ್ರೀಕರಿಸಲಾಗಿತ್ತು. ಅಲ್ಲಿ ಶಿವಗಾಮಿ ಪ್ರತಿಮೆ ಇರಲಿಲ್ಲ. ಆದರೆ, ಬಳಿಕ ಗ್ರಾಫಿಕ್ಸ್‌ನಲ್ಲಿ ಎರಡು ಪ್ರತಿಮೆ ನಿಲ್ಲುವಂತೆ ಮಾಡಲಾಗಿತ್ತು. ಈ ಬಗ್ಗೆ ನಟ ರಾಣಾ ನನ್ನ ಬಳಿ ಹೇಳಿಕೊಂಡಿದ್ದ. ನಾವಿಬ್ಬರೂ ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ, ನನಗೆ ನಮ್ಮಿಬ್ಬರ ಪ್ರತಿಮೆ ನಿಲ್ಲಿಸಿದ ಈ ದೃಶ್ಯ ಇಷ್ಟವಾಗಲಿಲ್ಲ' ಎಂದಿದ್ದ ರಾಣಾ. ಟನ ರಾಣಾ ಈ ಬಗ್ಗೆ ತಮಾಷೆಗಾಗಿ ಹೇಳಿಕೊಂಡು ನಕ್ಕಿದ್ದನ್ನು ನಟ ಪ್ರಭಾಸ್ ಹೇಳಿಕೊಂಡು ನಕ್ಕಿದ್ದರು.

ಮಹೇಂದ್ರ ಬಾಹುಬಲಿ ಎತ್ತಿ ಹಿಡಿದಿದ್ದು!

ಅಷ್ಟೇ ಅಲ್ಲ, ಶಿವಗಾಮಿ ಮಗುವನ್ನು ಎತ್ತಿ ಹಿಡಿದು 'ಮಹೇಂದ್ರ ಬಾಹುಬಲಿ' ಎಂದು ಕೂಗುವ ಸನ್ನಿವೇಶ ಇದೆಯಲ್ಲ, ಅದಕ್ಕೂ ಮೊದಲು ಅದರೊಳಗೆ ಒಂದಷ್ಟು ಡ್ರಾಮಾ ಇದೆ, ಅದು ನಡೆಯುತ್ತೆ. ಕೊನೆಗೆ, ಶಿವಗಾಮಿ ಹೋಗಿ ಮಗುವನ್ನು ಎತ್ತಿ ಹಿಡಿದಿದ್ದು ನೋಡಿ, ಅಲ್ಲಿಗೆ ಹೋಗಿ ತಳ್ಳಿಬಿಡಬೇಕು ಎಂದು ಅನ್ನಿಸಿತ್ತು' ಎಂದಿದ್ದಾರೆ ನಟ ರಾಣಾ. ಅದನ್ನು ನಟ ಪ್ರಭಾಸ್ ಹೇಳಿದ್ದು ಇದೀಗ ವೈರಲ್ ಆಗಿದೆ. ಆದರೆ, ಅದ್ಯಾವದೂ ಕೂಡ ಸೀರಿಯಸ್ ಆಗಿ ಅಲ್ಲ, ತಮಾಷೆಗೆ ಎಂಬುದು ಗಮನದಲ್ಲಿರಲಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?