'ಸಮಂತಾ-ರಾಜ್' ಮದುವೆಗೆ ವಿಶ್ ಮಾಡಿದ ನಟಿ ರಮ್ಯಾ, 'ನಿಮ್ಮ ಮದುವೆ ಯಾವಾಗ?' ಎನ್ನುತ್ತಿರೋ ಫ್ಯಾನ್ಸ್!

Published : Dec 01, 2025, 03:23 PM IST
Samatha Ruth Prabhu Ramya

ಸಾರಾಂಶ

ವೈಯಕ್ತಿಕ ಜೀವನದ ಹೊರತಾಗಿಯೂ, ಸಮಂತಾ ಮತ್ತು ರಾಜ್ ವೃತ್ತಿಪರವಾಗಿಯೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಸಮಂತಾ ಅವರ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮದಲ್ಲಿ ರಾಜ್ ಮತ್ತು ಸಮಂತಾ ಪರಸ್ಪರ ಅಪ್ಪಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಇದೀಗ ಈ ಜೋಡಿ ಮದುವೆ ಆಗಿದ್ದಾರೆ.

ಸಮಂತಾ ರುತ್ ಪ್ರಭು ಹಾಗೂ ರಾಜ್ ನಿಡಿಮೋರು ಮದುವೆ 

ಟಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವ ಅತಿದೊಡ್ಡ ಬ್ರೇಕಿಂಗ್ ನ್ಯೂಸ್ ಎಂದರೆ ಅದು ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಎರಡನೇ ಮದುವೆಯ ವಿಚಾರ. 'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಇಂದು (01 ಡಿಸೆಂಬರ್ 2025) ಮದುವೆ ಆಗಿದ್ದಾರೆ. ಸದ್ಗುರು ಅವರ ಈಶಾ ಯೋಗ ಕೇಂದ್ರದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಸಮಂತಾ-ರಾಜ್‌ ನಿಡಿಮೋರು ಮದುವೆ ಸರಳವಾಗಿ ನೆರವೇರಿದೆ.

ಸಮಂತಾ ಹಾಗೂ ರಾಜ್ ಪ್ರೇಮ ಸಂಬಂಧದಲ್ಲಿ ಇದ್ದಾರೆ ಎಂಬ ಗುಸುಗುಸು ಪಿಸುಮಾತುಗಳು ಕಳೆದ ಕೆಲವು ತಿಂಗಳುಗಳಿಂದ ಟಾಲಿವುಡ್‌ನಿಂದ ಬಾಲಿವುಡ್‌ವರೆಗೂ ಹರಿದಾಡುತ್ತಲೇ ಇತ್ತು. ಇದೀಗ ಈ ಸುದ್ದಿಗೆ ಮದುವೆ ಅಧಿಕೃತ ಮುದ್ರೆ ಬಿದ್ದಿದೆ. ಈ ಜೋಡಿ ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾಗಿ, ಇದೀಗ ಈಶಾದಲ್ಲಿ ಮದುವೆ ಕಾರ್ಯಕ್ರಮ ನೆರವೇರಿದೆ. ನಟಿ ಸಮಂತಾ ಸ್ವತಃ ಇದನ್ನು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ಸಮಂತಾ ಅವರು ರಾಜ್ ಜೊತೆಗಿನ ತಮ್ಮ ಮದುವೆಯ ಫೋಟೋಗಳನ್ನು ಅಧಿಕೃತವಾಗಿ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಹಲವು ಸೆಲೆಬ್ರಿಟಿಗಳು ಸಮಂತಾ-ರಾಜ್ ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya-Divya Spandana) ಸಮಂತಾಗೆ ವಿಶ್ ಮಾಡಿದ್ದಾರೆ. ಇದೀಗ ರಮ್ಯಾ ಫ್ಯಾನ್ಸ್- 'ಮೇಡಂ.. ನಿಮ್ಮ ಮದುವೆ ಯಾವಾಗ?' ಎಂದು ಕೇಳುತ್ತಿದ್ದಾರೆ. ಅದಕ್ಕೆ ನಟಿ ರಮ್ಯಾ ಏನು ಉತ್ತರ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

ಸಮಂತಾ-ರಾಜ್ ನಿಡಿಮೋರು ಮದುವೆಗೆ ಆಯ್ಕೆಯಾಗಿರುವ ಸ್ಥಳವೂ ಕೂಡ ತುಂಬಾ ಮುಖ್ಯ ಎನ್ನಿಸಿದೆ, ಕಾರಣ, ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುವ ಸಮಂತಾ, ಕೊಯಮತ್ತೂರಿನಲ್ಲಿರುವ ಪ್ರಸಿದ್ಧ 'ಈಶ ಯೋಗ ಕೇಂದ್ರ'ದಲ್ಲಿ (Isha Yoga Centre) ಹಸೆಮಣೆ ಏರಿದ್ದಾರೆ. ಸದ್ಗುರು ಅವರ ಈಶಾ ಯೋಗ ಕೇಂದ್ರಕ್ಕೆ ನಟಿ ಸಮಂತಾ ಆಗಾಗ ಭೇಟಿ ಕೊಡುತ್ತಿದ್ದು, ಅಲ್ಲಿ ಸದ್ಗುರುಗಳ ನಿರ್ದೇಶನದಲ್ಲಿ ಆಧ್ಯಾತ್ಮಸಾಧನೆಯನ್ನೂ ಮಾಡುತ್ತಿದ್ದಾರೆ. ಈಶಾ ಯೋಗ ಕೇಂದ್ರದಲ್ಲಿರುವ 'ಲಿಂಗ ಭೈರವಿ' ದೇವಿಯ ಸಮ್ಮುಖದಲ್ಲಿ ನಿರ್ಧಿಷ್ಟ ಸಂಪ್ರದಾಯದಂತೆ ಈ ಮದುವೆ ನಡೆದಿದೆ.

ಮಾಜಿ ಪತ್ನಿಯ 'ಕ್ರಿಪ್ಟಿಕ್' ಪೋಸ್ಟ್ ಮತ್ತು ಅನುಮಾನ!

ಒಂದೆಡೆ ಸಮಂತಾ ಮದುವೆಯ ಸಂಭ್ರಮದ ಸುದ್ದಿ ವೈರಲ್ ಆಗುತ್ತಿದ್ದರೆ, ಇನ್ನೊಂದೆಡೆ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ (Shhyamali De) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೆಲವು ಸಾಲುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಮದುವೆಯ ವದಂತಿ ಜೋರಾಗುತ್ತಿದ್ದಂತೆಯೇ ಶ್ಯಾಮಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲೇಖಕ ಮೈಕೆಲ್ ಬ್ರೂಕ್ಸ್ ಅವರ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, "ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ" (Desperate people do desperate things) ಎಂದು ಬರೆಯಲಾಗಿದೆ. ನೆಟ್ಟಿಗರು ಈ ಪೋಸ್ಟ್ ಅನ್ನು ರಾಜ್ ಮತ್ತು ಸಮಂತಾ ಅವರ ಮದುವೆಗೆ ಲಿಂಕ್ ಮಾಡುತ್ತಿದ್ದು, ಇದು ಮಾಜಿ ಪತಿಗೆ ನೀಡಿದ ಪರೋಕ್ಷ ಟಾಂಗ್ ಎಂದು ವಿಶ್ಲೇಷಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ, ಕೆಲವು ದಿನಗಳ ಹಿಂದಷ್ಟೇ ಶ್ಯಾಮಲಿ ಅವರು 'ಗತಕಾಲದ ಋಣ' ಅಥವಾ 'ಋಣಾನುಬಂಧ'ದ ಬಗ್ಗೆಯೂ ಒಂದು ನಿಗೂಢ ಪೋಸ್ಟ್ ಹಾಕಿದ್ದರು. "ಹಳೆಯ ಋಣಗಳ ಬಂಧದಿಂದ (ಋಣಾನುಬಂಧ), ಒಬ್ಬ ವ್ಯಕ್ತಿ ಸಾಕುಪ್ರಾಣಿಗಳು, ಸಂಗಾತಿ, ಮಕ್ಕಳು ಮತ್ತು ಮನೆಯೊಂದಿಗೆ ಸಂಪರ್ಕ ಹೊಂದುತ್ತಾನೆ. ಆ ಕರ್ಮದ ಋಣಗಳು ತೀರಿದಾಗ, ಆ ಸಂಬಂಧಗಳು ಕೊನೆಗೊಳ್ಳುತ್ತವೆ ಮತ್ತು ಅದರೊಂದಿಗೆ ಸಂಬಂಧಿಸಿದ ಸುಖ-ದುಃಖಗಳೂ ನಿಲ್ಲುತ್ತವೆ," ಎಂದು ಬರೆದುಕೊಂಡಿದ್ದರು. ಇದೀಗ ಅವರ ಮಾಜಿ ಪತಿ ಸಮಂತಾ ಜೊತೆ ಹಸೆಮಣೆ ಏರಿದ್ದಾರೆ.

ವೃತ್ತಿಜೀವನದಲ್ಲೂ ಒಂದಾದ ಜೋಡಿ

ವೈಯಕ್ತಿಕ ಜೀವನದ ಹೊರತಾಗಿಯೂ, ಸಮಂತಾ ಮತ್ತು ರಾಜ್ ವೃತ್ತಿಪರವಾಗಿಯೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಸಮಂತಾ ಅವರ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮದಲ್ಲಿ ರಾಜ್ ಮತ್ತು ಸಮಂತಾ ಪರಸ್ಪರ ಅಪ್ಪಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಇದನ್ನು ಕಂಡ ಅಭಿಮಾನಿಗಳು ಇವರಿಬ್ಬರು ತಮ್ಮ ಸಂಬಂಧವನ್ನು "ಇನ್ಸ್ಟಾ ಅಫಿಷಿಯಲ್" ಮಾಡಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಅಲ್ಲದೆ, ನಂದಿನಿ ರೆಡ್ಡಿ ನಿರ್ದೇಶನದ ಮುಂಬರುವ ತೆಲುಗು ಆಕ್ಷನ್ ಡ್ರಾಮಾ 'ಮಾ ಇಂಟಿ ಬಂಗಾರಂ' ಚಿತ್ರವನ್ನು ಇಬ್ಬರೂ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!