RRR ನಟರಾದ ಜೂನಿಯರ್ ಎನ್‌ಟಿಆರ್ (Jr.NTR), ರಾಮ್ ಚರಣ್ ಹಾಗೂ ಆಲಿಯಾ ಭಟ್(Alia Bhatt) ಮತ್ತು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಬಿಗ್‌ಬಾಸ್(Bigg boss 15) ಸೀಸನ್ 15ರ ವೀಕೆಂಡ್ ಎಪಿಸೋಡ್‌ನಲ್ಲಿ ಸಿನಿಮಾ ಪ್ರಮೋಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಆರ್‌ಆರ್‌ಆರ್ ಸಿನಿಮಾದ ನಾಚೊ ನಾಚೊ ಸಾಂಗ್‌ಗೆ ಹೆಜ್ಜೆ ಹಾಕಲು ಜೊತೆಯಾಗಿರುವುದನ್ನು ಇಲ್ಲಿ ನೋಡಬಹುದು. ಕಲರ್ಸ್ ಟಿವಿ ವೀಕೆಂಡ್ ಕಾ ವಾರ್ ಶೋ ಪ್ರೋಮೋ ಹಂಚಿಕೊಂಡಿದೆ.
ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್ ಹಾಗೂ ಸಲ್ಮಾನ್ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ನಾಚೊ ನಾಚೊ ಡ್ಯಾನ್ಸ್ ಮಾಡಿದ್ದಾರೆ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಸೂಪರ್ ಆಗಿ ವೈರಲ್ ಡ್ಯಾನ್ಸ್ ಸ್ಟೆಪ್ ಹಾಕಿದ್ದು, ಸಲ್ಮಾನ್ ಖಾನ್ ತಡಬಡಾಯಿಸಿದ್ದಾರೆ. ನಟರಿಬ್ಬರು ಅಲ್ಲುಗೆ ಡ್ಯಾನ್ಸ್ ಕಲಿಸಲು ಹೊರಟಾಗ ಅವರನ್ನು ತಡೆದ ಸಲ್ಮಾನ್ ಖಾನ್ ಸಾಕು ನಿಲ್ಲಿಸಿ ಪ್ಲೀಸ್ ಎಂದು ಆಲಿಯಾ ನಾನು ಇವರಂತೆ ಖಂಡಿತಾ ಡ್ಯಾನ್ಸ್ ಮಾಡ್ತೀನಿ ಪ್ರಾಮಿಸ್ ಎಂದಿದ್ದಾರೆ.
ಫಾರ್ಮ್‌ಹೌಸಲ್ಲಿದ್ದ ಸಲ್ಮಾನ್ ಖಾನ್ ಅಪಾಯದಿಂದ ಪಾರು
ಪ್ರೊಮೋ ವಿಡಿಯೋದಲ್ಲಿ ಭಾರೀ ಡ್ಯಾನ್ಸ್ ನಂತರ ಸಲ್ಮಾನ್ ಖಾನ್ ಅವರ ಶರ್ಟ್ ಗುಂಡಿ ಬಿಚ್ಚಿಕೊಂಡಿದೆ. ಇದರಿಂದ ನಟನ ಎದೆಯ ಭಾಗ ಸ್ವಲ್ಪ ಕಾಣಿಸಿಕೊಂಡಿದ್ದು ಸಲ್ಮಾನ್ ಆಲಿಯಾ ಬಳಿ ಬಂದು ನನ್ನ ಎದೆ ಸ್ವಲ್ಪ ಕಾಣುತ್ತಿದೆ ಎಂದಿದ್ದಾರೆ. ಆಲಿಯಾ ನಟನ ಶರ್ಟ್ ಬಟನ್ ಹಾಕಿದ್ದು ಇದಕ್ಕೆ ನಟ ಯಾ ಥಾಂಕ್ಯೂ ಎಂದಿದ್ದಾರೆ.
ಜೂನಿಯರ್ ಎನ್‌ಟಿಆರ್ ಬ್ಲಾಕ್ ಕಾಶುವಲ್ಸ್ ಧರಿಸಿದ್ದರೆ, ಆಲಿಯಾ ಕೆಂಪು ಹಾಗೂ ಹಳದಿ ಕಾಂಬಿನೇಷನ್ ಸೀರೆ ಉಟ್ಟಿದ್ದರು. ಕೂದಲನ್ನು ಬಾಚಿ ಬನ್ ಮಾಡಿದ್ದರು.
ಸಲ್ಮಾನ್ ಡಿಸೆಂಬರ್ 27 ರಂದು ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿರುವ ಕಾರಣ RRR ತಂಡದ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಸಮಾರಂಭವನ್ನು ಸಹ ಮಾಡಿದರು. RRR 20 ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಒಂದು ಕಾಲ್ಪನಿಕ ಕಥೆಯನ್ನು ವಿವರಿಸುತ್ತದೆ - ಅಲ್ಲೂರಿ ಸೀತಾರಾಮ ರಾಜು, ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ನಿರ್ವಹಿಸಿದ ಕೊಮರಂ ಭೀಮ್. ಈ ಚಿತ್ರದಲ್ಲಿ ನಟರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸೆಟ್‌ನಲ್ಲಿ ಆಲಿಯಾ ಕಡೆಗೆ ನಿರ್ಲಕ್ಷ್ಯ
ಇತ್ತೀಚೆಗೆ ಚಿತ್ರದ ಶೂಟಿಂಗ್‌ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ತನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ನಾಯಕಿ ಆಲಿಯಾ ಭಟ್ ಬಹಿರಂಗಪಡಿಸಿದ್ದಾರೆ. ರಾಮ್ ಚರಣ್ ತನ್ನನ್ನು ನಿರ್ಲಕ್ಷಿಸಿದ್ದಾರೆ. ಅವರು ಸೆಟ್‌ಗಳಲ್ಲಿ ತಮ್ಮೊಂದಿಗೆ ಅಷ್ಟೇನೂ ಮಾತನಾಡಲಿಲ್ಲ ಎಂದು ಆಲಿಯಾ ಭಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್ ಚರಣ್, ನೀವು ತುಂಬಾ ಸುಂದರವಾಗಿದ್ದೀರಿ ಅಂತ ನಾಚಿಕೆ ಆಗ್ತಿತ್ತು ಎಂದಿದ್ದಾರೆ. ರಾಮ್ ಚರಣ್(Ram charan) ಮತ್ತು ಜೂನಿಯರ್ ಎನ್‌ಟಿಆರ್ ಹೇಗೆ ಸಂಪೂರ್ಣವಾಗಿ ವಿಭಿನ್ನವಾಗಿವೆ ಆದರೆ ಯಾವಾಗಲೂ ಒಂದೇ ರೀತಿ ಮುಂದುವರಿಯುತ್ತಾರೆ ಎಂಬುದನ್ನು ನಟಿ ಹೇಳಿದ್ದಾರೆ. ಅವರು ಪರಸ್ಪರ ಕಾಲೆಳೆಯುತ್ತಾರೆ ಅಷ್ಟೆ ಎಂದು ಆಲಿಯಾ ಹೇಳಿದ್ದಾರೆ.