Chiranjeevi ಹುಟ್ಟುಹಬ್ಬ; ಮಗಳ ಫೋಟೋ ರಿವೀಲ್ ಮಾಡಿದ ರಾಮ್ ಚರಣ್!

Published : Aug 23, 2023, 11:41 AM ISTUpdated : Aug 23, 2023, 11:43 AM IST
 Chiranjeevi ಹುಟ್ಟುಹಬ್ಬ; ಮಗಳ ಫೋಟೋ ರಿವೀಲ್ ಮಾಡಿದ ರಾಮ್ ಚರಣ್!

ಸಾರಾಂಶ

68ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೆಗಾ ಸ್ಟಾರ್. ಮೊಮ್ಮಗಳನ್ನು ಹಿಡಿದುಕೊಂಡು ಖುಷಿ ಪಟ್ಟ ತಾತ.....

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಆಗಸ್ಟ್‌ 22ರಂದು 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 1955ರಲ್ಲಿ ಹುಟ್ಟಿದ್ದ ಕೊನಿಡೆಲಾ ಶಿವಶಂಕರ ವರಪ್ರಸಾದ್‌ ಈಗ ಮೆಗಾ ಸ್ಟಾರ್ ಆಗಿ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ವರ್ಷ ವರ್ಷವೂ ಸ್ಟಾರ್ ನಟನ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಮನೆ ಬಾಗಿಲಿಗೆ ಅಭಿಮಾನಿಗಳು ಕೇಕ್ ಮತ್ತು ಹೂ ಹಿಡಿದುಕೊಂಡು ಬರುತ್ತಾರೆ. ಆದರೆ ಈ ವರ್ಷ ವೈರಲ್ ಆಗುತ್ತಿರುವುದು ಪುತ್ರ ರಾಮ್ ಚರಣ್ ವಿಶ್...

ರಾಮ್ ಚರಣ್ ಟ್ವೀಟ್:

'ಹ್ಯಾಪಿಯಸ್‌ ಬರ್ತಡೇ ನಮ್ಮ ನೆಚ್ಚಿನ ಚಿರುತಾ (ಚಿರಂಜೀವಿ ತಾತ). ನಮ್ಮಂದ ನಿಮ್ಮ ಮೇಲೆ ತುಂಬಾ ಪ್ರೀತಿ ಕೊಡುತ್ತಿರುವ ಕೊನಿಡೆಲಾ ಕುಟುಂಬದ ಪುಟ್ಟ ಕಂದಮ್ಮ' ಎಂದು ರಾಮ್ ಚರಣ್ ಬರೆದುಕೊಂಡಿದ್ದಾರೆ.

ಇನ್ನಿತ್ತರ ಟಾಲಿವುಡ್ ಸ್ಟಾರ್ ನಟನರು ಚಿರಂಜೀವಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. 

NEW YORK ಟೈಮ್ಸ್‌ ಸ್ವ್ಕೇರ್‌ನಲ್ಲಿ ಡಾಲಿ ಧನಂಜಯ್; ಇಂದು ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಭೇಟಿ ಮಾಡಿ ಊಟ ಮಾಡಿ!

ಮೊಮ್ಮಗಳ ಬಗ್ಗೆ ಪೋಸ್ಟ್‌:

'ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸುಸ್ವಾಗತ. ನಿನ್ನ ಆಗಮನ ಲಕ್ಷಾಂತರ ಮೆಗಾ ಕುಟುಂಬದಲ್ಲಿ ಉತ್ಸಾಹ ತುಂಬಿದ್ದಿಯಾ. ನೀನು ಪೋಷಕರಾದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಮತ್ತು ನಾವು ಅಜ್ಜ-ಅಜ್ಜಿಯರಿಗೆ ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡಿದ್ದೀಯಾ' ಎಂದು ಬರೆದುಕೊಂಡಿದ್ದರು.

GSTಯಲ್ಲಿ ನಿವೇದಿತಾ ಗೌಡ; ಸೃಜನ್ ಲೋಕೇಶ್‌ ಪುತ್ರ ಸುಕೃತ್ ಎಂಟ್ರಿ!

ಕಾರು ಖರೀದಿಸಿದ ಚಿರಂಜೀವಿ: ಈಗ ಮೆಗಾ ಸ್ಟಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. 1.22 ಆನ್‌ ರೂಡ್‌ ಬೆಲೆ ತೋರಿಸುತ್ತಿರುವ ಕಪ್ಪು ಬಣ್ಣದ ಯೋಯೋಟಾ ವೆಲ್‌ಫೈರ್‌ ಕಾರನ್ನು ಇಂದು ಬರ ಮಾಡಿಕೊಂಡಿದ್ದಾರೆ. ಕಾರಿಗೆ 1111 ಎನ್ನುವ ನಂಬರ್‌ ಬೋರ್ಡ್‌ನ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ನಂಬರ್‌ ಬೋರ್ಡ್‌ಗೆ 5 ಲಕ್ಷ ರೂಪಾಯಿ ಎನ್ನಲಾಗಿದೆ. ದೂರು ಪ್ರಯಾಣ ಮಾಡಲು ಟೋಯೋಟಾ ವೆಲ್‌ಫೈರ್ ಅತ್ಯುತ್ತಮ ಕಾರಾಗಿದೆ. ಪ್ರಯಾಣದ ನಡುವೆ ವಿಶ್ರಾಂತಿ ಪಡೆಯಲು ಸಾಧ್ಯವಿದೆ. ಏಷ್ಟು ದೂರ ಪ್ರಯಾಣಿಸಿದರೂ ಯಾವುದೇ ಆಯಾಸವಾಗಲ್ಲ. ಪವರ್ ಸ್ಲೈಡಿಂಗ್ ಡೂರ್, ಎರಡು  ಸನ್‌ರೂಫ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, 10.2 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?