
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸೊಸೆ, ರಾಮ್ ಚರಣ್ ಪತ್ನಿ, ಸಿರಿವಂತನ ಪುತ್ರಿ ಉಪಾಸನಾ ಇದೀಗ ಆಸ್ತಿ ವಿಚಾರವಾಗಿ ದೊಡ್ಡ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಆಸ್ತಿ ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು ಇಷ್ಟೊಂದು ಹಣ ಎಲ್ಲಿದೆ ನಿಮಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಯುವರ್‌ಲೈಫ್‌ನಲ್ಲಿ ವೆಬ್‌ಸ್ಟೈಟ್‌ಗೆ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿ!
ನಟಿ ಜೀವಿತಾ ರಾಜಶೇಖರ್ ತಮ್ಮ 200 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಮಾರಲು ಮುಂದಾಗಿದ್ದಾರೆ. ಮಾರಲು ಚದರ ಅಡಿಗೆ 15,000 ರೂಪಾಯಿ ಎಂದು ಬೆಲೆ ಕಟ್ಟಿದ್ದಾರೆ. ಆದರೆ ಫೀನಿಕ್ಸ್ ಗ್ರೂಪ್ ಕೂಡ ಈ ಆಸ್ತಿಯಲ್ಲಿ ಶೇರ್ ಹೊಂದಿದೆ. ಹೀಗಾಗಿ ಯಾರು ಖರೀದಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಆಸ್ತಿ ಪಕ್ಕದಲ್ಲಿ ಫೀನಿಕ್ಸ್ ಅವರ ಕಟ್ಟಡವೂ ಇದೆ. ಆಸ್ತಿ ಮಾರಬೇಕೆಂದರೆ ಅಲ್ಲಿ ಬಾಡಿಗೆ ಇರುವವರು ಮೊದಲು ಖಾಲಿ ಮಾಡಬೇಕು ಆನಂತರ ಸಾಕಷ್ಟು ವ್ಯವಹಾರಗಳು ಮುಗಿಯಬೇಕಿದೆ.
ಮೆಗಾ ಸ್ಟಾರ್ ಚಿರಂಜಿಬಿ ಸೊಸೆ ಸಗಣಿ ಬಾಚೋ ವೀಡಿಯೋ ವೈರಲ್!
ಉಪಾಸನಾ ಬಳಿ ಅಷ್ಟೊಂದು ಹಣ ಇದ್ಯಾ?
ಅಪೋಲೋ ಆಸ್ಪತ್ರೆಯ ಒಡೆಯರಾಗಿರುವ ಅನಿಲ್ ಕಾಮೆನೇನಿ ಅವರ ಪುತ್ರಿ ಉಪಾಸನಾ. ಲಂಡನ್ ವಿಶ್ವವಿದ್ಯಾಲಯದ ಪದವೀಧರೆ. ವಿದ್ಯಾಭ್ಯಾಸದ ನಂತರ ಅಫೋಲೋ ಆಸ್ಪತ್ರೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿರಂಜೀವಿ ಪುತ್ರ ರಾಮ್ ಚರಣ್ ಜೊತೆ ವಿವಾಹವಾದ ಬಳಿ ಸಿನಿಮಾ ಕ್ಷೇತ್ರದಲ್ಲಿ ತೊಡಿಗಿಸಿಕೊಂಡರು. ಸೆಲೆಬ್ರಿಟಿಗಳ ಜೊತೆ ಕೆಲವು ಅಡುಗೆ, ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡುತ್ತಾರೆ. ಬಿ ಪಾಸಿಟಿವ್ ಮ್ಯಾಗಜೀನ್ ಸಂಪಾದಕಿಯೂ ಆಗಿದ್ದಾರೆ. ಸುಮಾರು 50 ಮಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.