
ಕೊರೊನಾವೈರಸ್‌ನ ಎರಡನೇ ಅಲೆಯ ಮಧ್ಯೆ ನಟ ಸಲ್ಮಾನ್ ಖಾನ್ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ಟಾರ್ ಸೆಲೆಬ್ರಿಟಿಗಳು ತಮ್ಮಿಂದಾದಷ್ಟು ನೆರವು ನೀಡುತ್ತಿದ್ದಾರೆ.
ಈ ಮಧ್ಯೆ ಸಲ್ಮಾನ್ ಖಾನ್ ಹಿಂದಿ ಚಲನಚಿತ್ರೋದ್ಯಮದ 25 ಸಾವಿರ ಕಾರ್ಮಿಕರಿಗೆ ತಲಾ 1,500 ನೆರವು ನೀಡಲಿದ್ದಾರೆ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್‌ವೈಸಿಇ) ಅಧ್ಯಕ್ಷ ಬಿ.ಎನ್. ತಿವಾರಿ ಇಟಿಮ್ಸ್ ಗೆ ದೃಢಪಡಿಸಿದ್ದಾರೆ
ಕೊರೋನಾದಿಂದ ತಂದೆಯನ್ನು ಕಳ್ಕೊಂಡ ಬೆಂಗಳೂರಿನ ಬಾಲಕನಿಗೆ ಸಲ್ಮಾನ್ ನೆರವು
ಚಲನಚಿತ್ರೋದ್ಯಮ ಕಾರ್ಮಿಕರ ಸಂಘವು ನಟನಿಗೆ ಹೆಸರುಗಳ ಪಟ್ಟಿಯನ್ನು ಕಳುಹಿಸಿದೆ ಮತ್ತು ಹಣವನ್ನು ಜಮಾ ಮಾಡಲು ಒಪ್ಪಿದೆ ಎಂದು ಹೇಳಿದ್ದಾರೆ. ಸುಮಾರು 25 ಸಾವಿರ ಜನರಿಗೆ 1500 ರೂಪಾಯಿಯಂತೆ 3 ಕೋಟಿಗೂ ಹೆಚ್ಚು ನೆರವು ನೀಡುತ್ತಿದ್ದಾರೆ.
ನಟಿ ರಾಕುಲ್‌ಗೆ ಇನ್ನು ಕಾಂಡೋಮ್ ಟೆಸ್ಟ್ ಮಾಡೋ ಕೆಲ್ಸ
ಡಿಫರೆಂಟ್ ಪಾತ್ರಗಳನ್ನು ಮಾಡೋ ನಟಿ ರಾಕುಲ್‌ಪ್ರೀತ್ ಸಿಂಗ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಟಾಲಿವುಡ್‌ನಲ್ಲಾಗಿದ್ರೂ ಮಿಂಚುತ್ತಿರೋದು ಬಾಲಿವುಡ್‌ನಲ್ಲಿ. ಇದೀಗ ನಟಿಗೆ ಹೊಸ ಕೆಲಸ ಸಿಕ್ಕಿದೆ. ಇದು ನಟಿಯ ನೆಕ್ಸ್ಟ್ ಪ್ರಾಜೆಕ್ಟ್. ಕೆಲಸ ಕಾಂಡೋಮ್ ಟೆಸ್ಟ್ ಮಾಡೋದು.
ತೇಜಸ್ ಡಿಯೋಸ್ಕರ್ ನಿರ್ದೇಶಿಸಲಿರುವ ಮುಂಬರುವ ಈ ಹೊಸ ಸಿನಿಮಾದಲ್ಲಿ ಟಾಪ್ ನಟಿಯರಲ್ಲೊಬ್ಬರಾದ ರಾಕುಲ್ ಪ್ರೀತ್ ಸಿಂಗ್ ಅವರು ಕಾಂಡೋಮ್ ಪರೀಕ್ಷಕಿಯ ಪಾತ್ರವನ್ನು ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.