
ಬಿಗ್‌ಬಾಸ್14ರಲ್ಲಿ ರಾಖಿ ಸಾವಂತ್ ಜಿಪುಣೆಯಾಗಿ ಕಂಡರೂ ಅದೇ ಸಂದರ್ಭ ರಾಖಿಯ ತಾಯಿ ಕ್ಯಾನ್ಸರ್ ಚಿಕಿತ್ಸೆಗೆ ಐಸಿಯುವಿನಲ್ಲಿ ದಾಖಲಾಗಿರುವುದಾಗಿ ಅವರ ತಮ್ಮ ರಾಕೇಶ್ ತಿಳಿಸಿದ್ದಾರೆ.
ರಾಖಿಯ ತಾಯಿ ಜಯಾ ಅವರ ಪಿತ್ತಕೋಶದಲ್ಲಿ ಗಡ್ಡೆಯಾಗಿದ್ದು, ಇದು ಕ್ಯಾನ್ಸರ್ ಆಗಿ ಗಂಭೀರವಾಗಿ ಹರಡುತ್ತಿದೆ. ವೈದ್ಯರು ಕಿಮಿಯೋಥೆರಪಿ ಆರಂಭಿಸುವುದರಲ್ಲಿದ್ದಾರೆ.
ಸಹ ಸ್ಪರ್ಧಿಗಳ ಅಂಡರ್‌ವೇರ್ ವಾಶ್‌ಮಾಡಿದರೆ ನನಗೆ ತೃಪ್ತಿ ಸಿಗುತ್ತೆ: ರಾಖಿ ಸಾವಂತ್!
ಫ್ಯಾಮಿಲಿ ಸಂದರ್ಭ ಜಯಾ ಅವರು ಆಸ್ಪತ್ರೆಯಿಂದಲೇ ರಾಖಿಯಲ್ಲಿ ಮಾತನಾಡಿದ್ದರು. ವಿಡಿಯೋ ಕಾಲ್ ಮೂಲಕ ಮಗಳ ಜೊತೆ ಮಾತನಾಡಿದ್ದರು. ತಾನು ಬಿಗ್‌ಬಾಸ್ ಮನೆಯಿಂದ ಹೊರಬರುವ ತನಕ ನೀವು ಸ್ಟ್ರಾಂಗ್ ಆಗಿರಿ ಎಂದು ಅಮ್ಮನಿಗೆ ಧೈರ್ಯ ತುಂಬಿದ್ದರು ರಾಖಿ.
ಇದೀಗ ರಾಖಿ ಇನ್‌ಸ್ಟಗ್ರಾಂನಲ್ಲಿ ಪೋಸ್ಟ್ ಹಾಕಿ ಅಮ್ಮ ಕ್ಯಾನ್ಸರ್ ಚಿಕಿತ್ಸೆಗೊಳಗಾಗುತ್ತಿದ್ದು, ಎಲ್ಲರೂ ಅವರಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ. ಈ ಹಿಂದೆ ಜಯಾ ಸಾವಂತ್ ರಾಖಿಯ ಪತಿ ಚಿಕಿತ್ಸೆ ವೆಚ್ಚ ಭರಿಸುತ್ತಿರುವುದಾಗಿ ಹೇಳಿದ್ದರು.
ಕಾರ್ ಒಳಗೆ ಗೆಳೆಯನಿಂದಲೇ ಅತ್ಯಾಚಾರ: ಬಿಗ್‌ಬಾಸ್ ಮನೆಯಲ್ಲಿ ಸತ್ಯ ಬಿಚ್ಚಿಟ್ಟ ರಾಖಿ
ಭಾನುವಾರ ರಾಖಿ ಸಾವಂತ್ 14 ರುಪಾಯಿಯೊಂದಿಗೆ ಬಿಗ್‌ಬಾಸ್ 14 ಮನೆಯಿಂದ ಹೊರ ಬಮದಿದ್ದರು. ಇತ್ತೀಚಿನ ದಿನಗಳಲ್ಲಿ ನನ್ನ ಕೆರಿಯರ್ ಡೌನ್ ಆಗಿದ್ದು, ಕಂ ಬ್ಯಾಕ್ ಮಾಡುವುದಕ್ಕಾಗಿ ನಾನು ಶೋಗೆ ಬಂದೆ ಎಂದಿದ್ದಾರೆ ರಾಖಿ.
ನನಗೆ ಸಿರೀಸ್ ಮಾಡಲು ಇಷ್ಟವಿದೆ, ನನಗೆ ಸಿಗುವ ಯಾವ ಕೆಲಸವಾದರೂ ಒಪ್ಪಿಕೊಂಡು ಮಾಡುತ್ತೇನೆ. ಅದಕ್ಕಾಗಿಯೇ ಬಿಗ್‌ಬಾಸ್‌ಗೆ ಬಂದೆ ಎಮದಿದ್ದಾರೆ. ಹಾಗಾಗಿ ಹೊರಗೆ ಬಂದು ಹಣ ಸಂಪಾದಿಸಿ ನನ್ನಮ್ಮನನ್ನು ನಾನು ನೋಡಿಕೊಳ್ಳಬಹುದು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.