ಬಿಗ್‌ಬಾಸ್ ಮನೆಗೆ ಬಂದು ಡ್ರಾಮಾ ಮಾಡ್ತಿರೋ ನಟಿ ರಾಖಿ ಸಾವಂತ್ ಇದ್ದಕ್ಕಿದ್ದಂತೆ ಎಮೋಷನಲ್ ಆಗಿದ್ದಾರೆ. ನನ್ನ ಸ್ನೇಹಿತನೇ ಕಾರಿನೊಳಗೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದ ಎಂದು ಕಣ್ಣೀರಾಗಿದ್ದಾರೆ.

ಈ ಹಿಂದೆ ತಾನು ಮದುವೆಯಾಗದಿದ್ದರೆ ನನ್ನನ್ನು ಪ್ರಭಾವಿ ವ್ಯಕ್ತಿಯೊಬ್ಬರು ಕಿಡ್ನಾಪ್ ಮಾಡುವವರಿದ್ದರು ಎಂದಿದ್ದ ರಾಖಿಸ ಸಾವಂತ್ ಈಗ ತನ್ನ ಮೇಲೆ ನಡೆದ ದೌರ್ಜನ್ಯವನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ.

ಅಭಿನವ್ ಚಡ್ಡಿ ಎಳೆದ ರಾಖಿ ಸಾವಂತ್‌ಗೆ ಸಲ್ಮಾನ್ ಖಾನ್ ಸಪೋರ್ಟ್

ನನ್ನ ಮೇಲೆ ಸ್ನೇಹಿತನೇ ದೌರ್ಜನ್ಯ ಮಾಡಿದ, ಮದುವೆಯಾಗಿದ್ದರೂ ಪತಿ ನನ್ನ ಜೊತೆಗಿಲ್ಲ ಎಂದು ಬಿಗ್‌ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ಜೊತೆ ಹೇಳಿಕೊಂಡು ಅತ್ತಿದ್ದಾರೆ ರಾಖಿ ಸಾವಂತ್.

ನನ್ನ ಪತಿಗೆ ಈಗಾಗಲೇ ಮದುವೆಯಾಗಿದೆ. ಆತನಿಗೆ ಮಗು ಇದೆ. ಈಗ ಡಿವೋರ್ಸ್ ಕೊಡುವುದಾಗಿ ನನ್ನನ್ನು ಬೆದರಿಸುತ್ತಿದ್ದಾನೆ ಎಂದಿದ್ದಾರೆ ರಾಖಿ ಸಾವಂತ್. ಹೀಗೆ ನೋವು ಹೇಳಿಕೊಂಡು ರಾಹುಲ್ ವೈದ್ಯನ ತೋಳಲ್ಲಿ ಅತ್ತಿದ್ದಾರೆ ರಾಖಿ.