ಮೈಸೂರಿಗೆ ರಾಖಿ ಸಾವಂತ್​: ಜೆಸಿಬಿ ಮೂಲಕ ಅತ್ತೆ ಮನೆಗೆ ಭರ್ಜರಿ ಎಂಟ್ರಿ! ವಿಡಿಯೋ ವೈರಲ್

By Suvarna News  |  First Published Sep 25, 2023, 8:33 PM IST

ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಈಗ ತಮ್ಮ ಪತಿಯ ತವರು ಮೈಸೂರಿಗೆ ಆಗಮಿಸಿದ್ದಾರೆ. ಜೆಸಿಬಿ ಮೂಲಕ ಸಕಲ ಬಾಜಾ ಬಜಂತ್ರಿಯೊಂದಿಗೆ ಬಂದಿರುವ ಅವರ ಪರಿ ಹೀಗಿದೆ ನೋಡಿ...
 


ಕಳೆದ ಹಲವು ದಿನಗಳಿಂದ ಡ್ರಾಮಾ ಕ್ವೀನ್​ ನಟಿ ರಾಖಿ ಸಾವಂತ್​ (Rakhi Sawant) ಬಹಳ ಸುದ್ದಿಯಲ್ಲಿರುವ ನಟಿ. ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ.

ಅಂದಹಾಗೆ ರಾಖಿ ಸಾವಂತ್‌ ಅವರ ಪತಿ ಆದಿಲ್‌ ಖಾನ್‌ ದುರ್‍ರಾನಿ ಅವರು ಮೈಸೂರಿನವರು. ಇದೀಗ ರಾಖಿ ಪತಿಯಿಂದ ದೂರವಾಗುವ ಪಣತೊಟ್ಟರೂ ಅತ್ತೆ ಮನೆಗೆ ಬಂದಿದ್ದಾರೆ. ಹಾಗೇ ಬಂದಿದ್ದರೆ ಅವರು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅವರು ಬಂದಿರೋದು, ಜೆಸಿಬಿಯಲ್ಲಿ! ಹೌದು. ಜೆಸಿಬಿಯಲ್ಲಿ ಬಾಜಾ ಬಜಂತ್ರಿಯವರ ಜೊತೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ ರಾಖಿ ಸಾವಂತ್‌. ಈ ಧೈರ್ಯ ಮಾಡಲು ರಾಖಿಗೆ ಮಾತ್ರ ಸಾಧ್ಯ ಎನ್ನುವ ಶೀರ್ಷಿಕೆಯಿಂದ ಈ ವಿಡಿಯೋ ವೈರಲ್‌ ಆಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿರುವ ಆದಿಲ್‌ ಅವರ ತಾಯಿ ತನ್ನನ್ನು ಮನೆಯೊಳಕ್ಕೆ ಕರೆದುಕೊಳ್ಳಲಿಲ್ಲ ಎಂದೆಲ್ಲಾ ರಾಖಿ ಆರೋಪ ಮಾಡಿದ್ದರು. ಇದೀಗ ಯಾರ ಆರೋಪ ಮಾಡುತ್ತಾರೋ ಎಂದು ಕಾದು ನೋಡಬೇಕಿದೆ.

Tap to resize

Latest Videos

ನಟಿ ತನುಶ್ರೀ ದತ್ತಾ ಪದೇ ಪದೇ ನನ್ನನ್ನ ರೇಪ್​ ಮಾಡಿದ್ಲು: ರಾಖಿ ಸಾವಂತ್​ ಶಾಕಿಂಗ್​ ವಿಡಿಯೋ

ಇದರ ಮಧ್ಯೆಯೇ ಆದಿಲ್​  ಖಾನ್​ ರಾಖಿ ವಿರುದ್ಧ ಮತ್ತಷ್ಟು ಆರೋಪ ಮಾಡಿದ್ದು, ನಾನು ಈಕೆಗೆ ಆರನೇ ಗಂಡಸಾಗಿ ಪ್ರವೇಶ ಮಾಡಿದೆ. ನನ್ನನ್ನೂ ಬಿಟ್ಟು ಏಳನೆಯವನ ಹುಡುಕಾಟದಲ್ಲಿ ಇದ್ದಾಳೆ. ಅವಳಿಗೆ ಬೇಕಿರುವುದು ಗಂಡಸರಲ್ಲ, ಬದಲಿಗೆ ಅವರ ಹಣ ಎಂದಿದ್ದಾರೆ.  ರಾಖಿ ತನ್ನ ವಿರುದ್ಧ ಎದುರಾದವರಿಗೆ ಸುಪಾರಿ ಕೊಟ್ಟು ಕೊಲ್ಲಿಸಲೂ ಹೇಸುವವಳಲ್ಲ. ಅವಳು ನನ್ನನ್ನೂ ಕೊಲ್ಲಲು ಬಯಸಿದ್ದಳು, ಇದರ ಪುರಾವೆ ಕೂಡ ಕೊಡಬಲ್ಲೆ. ಆಕೆಯ ಮಾಜಿ ಪತಿ ರಿತೇಶ್​ ಅವರನ್ನೂ ಕೊಲ್ಲಲು ಮಾಡಿದ್ದಳು ಎಂದಿದ್ದಾರೆ.  

ಇದಕ್ಕೂ ಮುನ್ನ, ಆದಿಲ್​ ಖಾನ್​ರನ್ನು ಮದ್ವೆಯಾಗಿ ರಾಖಿಯಿಂದ ಫಾತೀಮಾ ಆಗಿರುವುದಾಗಿ ಹೇಳಿಕೊಂಡಿದ್ದ ರಾಖಿ ಮೆಕ್ಕಾ-ಮದೀನಾಕ್ಕೆ ಹೋಗಿ ಉಮ್ರಾ ನೆರವೇರಿಸಿ ವಾಪಸಾಗಿದ್ದಾರೆ. ತಾವು ಪವಿತ್ರರಾಗಿದ್ದು, ಯಾರೂ ಪುರುಷರು ತಮ್ಮನ್ನು ಮುಟ್ಟಬಾರದು ಎಂದು ಹೇಳಿದ್ದಾರೆ. ಇವೆಲ್ಲವುಗಳ ನಡುವೆ ಈಕೆ ಒಬ್ಬ ಸೈಕೋಪಾತ್​, ಮಾನಸಿಕ ತೊಂದರೆಯಿಂದ ಬಳಲುತ್ತಿರುವುದಾಗಿ ಹಲವರು ಹೇಳುತ್ತಿದ್ದಾರೆ. 

ಆರನೇ ಗಂಡಿಗೆ ಬಲೆ ಬೀಸಿದ್ತಾಳೆ ರಾಖಿ, ಹಣ ಪಡೆದು ಕೊಲ್ಲೋದೇ ಪ್ಲ್ಯಾನ್! ಶಾಕಿಂಗ್​ ವಿಷ್ಯ ರಿವೀಲ್​

 

click me!