Coolie Movie Twitter Review: ನಿರೀಕ್ಷೆಗೆ ತಕ್ಕಂತಿಲ್ಲವಾ ರಜನಿಕಾಂತ್‌ ಕೂಲಿ ಸಿನಿಮಾ? ವೀಕ್ಷಕರು ಕೊಟ್ಟ ರೇಟಿಂಗ್‌ ಎಷ್ಟು?

Published : Aug 14, 2025, 09:28 AM IST
rajinikanth lokesh kanagaraj coolie movie twitter review

ಸಾರಾಂಶ

Rajinikanth coolie Movie Twitter Review: ರಜನಿಕಾಂತ್‌ ಹಾಗೂ ಲೋಕೇಶ್‌ ಕನಕರಾಜ್‌, ಉಪೇಂದ್ರ, ಆಮಿರ್‌ ಖಾನ್‌, ನಾಗಾರ್ಜುನ ಕಾಂಬಿನೇಶನ್‌ನಲ್ಲಿ ಮೂಡಿಬಂದ ʼಕೂಲಿʼ ಸಿನಿಮಾ ಹೇಗಿದೆ? 

ಅಂತೂ ಇಂತೂ ಕೂಲಿ ಸಿನಿಮಾ ರಿಲೀಸ್‌ ಆಗಿದೆ. ರಜನಿಕಾಂತ್‌ರ ಬಹುನಿರೀಕ್ಷಿತ 2025ರ ದೊಡ್ಡ ಚಿತ್ರಗಳಲ್ಲಿ ಒಂದಾದ ʼಕೂಲಿʼ ಸಿನಿಮಾ ಇಂದು (ಆಗಸ್ಟ್ 14) ಥಿಯೇಟರ್‌ನಲ್ಲಿ ರಿಲೀಸ್‌ ಆಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ, ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ನಲ್ಲಿ 100 ಕೋಟಿ ರೂಪಾಯಿಗಳನ್ನು ಗಳಿಸಿದೆ. ಲೋಕೇಶ್ ಕನಗರಾಜ್‌ರ ನಿರ್ದೇಶನದ ಈ ಸಿನಿಮಾವು ಅಭಿಮಾನಿಗಳ ಹೃದಯವನ್ನು ಗೆದ್ದಿದೆ ಎಂದಾಯ್ತು.

ವೀಕ್ಷಕರಿಂದ ವಿಮರ್ಶೆ!

ನಟ ರಜನಿಕಾಂತ್ ಈ ಸಿನಿಮಾದಲ್ಲಿ ಖಡಕ್‌ ಆಗಿ ನಟಿಸಿದ್ದಾರೆ. ಓರ್ವ ಅಭಿಮಾನಿಯು ಈ ಸಿನಿಮಾವನ್ನು ವೀಕ್ಷಿಸಿದ ನಂತರ ಅವರ "ವಿಂಟೇಜ್ ಸ್ಟೈಲ್, ಆಕ್ಷನ್ ಶ್ಲಾಘಿಸಿದ್ದಾರೆ. ಕೂಲಿ ಸಿನಿಮಾವು ಲೋಕೇಶ್ ಕನಗರಾಜ್‌ರಿಂದ ನಿರ್ದೇಶಿತವಾದ ಪೂರ್ಣ ಪ್ರಮಾಣದ ಮನರಂಜನೆಯ ಚಿತ್ರವಾಗಿದೆ, ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್‌ ಮಾಡ್ತಾರೆ ಎಂದಿದ್ದಾರೆ.

 

 

ರಜನಿಕಾಂತ್‌ರ ಅಭಿನಯಕ್ಕೆ ಅನೇಕರು ಮಾರುಹೋಗಿದ್ದಾರೆ, ಕೆಲವರು ನಟ ಆಮಿರ್ ಖಾನ್‌ರ ಅತಿಥಿ ಪಾತ್ರವನನು ಹೊಗಳಿದ್ದಾರೆ. “ಆಕ್ಷನ್ ದೃಶ್ಯಗಳು ಸ್ವಲ್ಪ ಅಷ್ಟು ಚೆನ್ನಾಗಿಲ್ಲ, ಆದರೂ ಸ್ವೀಕಾರ ಮಾಡಬಹುದು ಎಂದಿದ್ದಾರೆ. ಸ್ಕ್ರೀನ್‌ಪ್ಲೇ ಸರಳವಾಗಿದ್ದರೂ ಆಕರ್ಷಕವಾಗಿದೆ, ಅಭಿನಯವು ಚೆನ್ನಾಗಿದ್ದರೂ ಕೂಡ ಅಷ್ಟು ಪ್ರಭಾವಶಾಲಿಯಲ್ಲ ಎಂದು ತಿಳಿಸಿದ್ದಾರೆ. ಸಿನಿಮಾವು ಮೊದಲ 40 ನಿಮಿಷಗಳ ನಂತರ ಆಸಕ್ತಿದಾಯಕವಾಗಿದೆ. ಕೊನೆಯ ಟೈಮ್‌ನಲ್ಲಿ ಒಂದು ಗಮನಾರ್ಹ ದೃಶ್ಯವಿದೆ ಎಂದಿದ್ದಲ್ಲದೆ, ಒಟ್ಟಾರೆ 3.5/5 ರೇಟಿಂಗ್ ನೀಡಿದ್ದಾರೆ.

 

 

ಇನ್ನೋರ್ವ ಅಭಿಮಾನಿಯು “ಲೋಕೇಶ್ ಕನಗರಾಜ್ ಟೀಂ ಬ್ಲಾಕ್‌ಬಸ್ಟರ್ ಸಿನಿಮಾವನ್ನು ನೀಡಿದೆ. ಮೊದಲಾರ್ಧ - ಮಾಸ್, ಟ್ವಿಸ್ಟ್‌ನ ಒಳ್ಳೆಯ ಮಿಶ್ರಣ , ಎರಡನೇ ಅರ್ಧದ ಮಾಸ್ ದೃಶ್ಯಗಳು ಸಖತ್‌ ಆಗಿದೆ.ರಜನಿಕಾಂತ್ ಸರ್ ಸಂಭವಂ" ಎಂದು ಬರೆದಿದ್ದಾರೆ.

 

 

 

 

 

 

ಕೂಲಿ ಒನ್‌ ಮ್ಯಾನ್‌ ಶೋ ಎಂದಿದ್ದಾರೆ. ನಾಗಾರ್ಜುನ ವಿಲನ್ ಆಗಿ ರೋಮಾಂಚನ ಆಗುವಂತೆ ಮಾಡ್ತಾರೆ, ಆಮಿರ್‌ಖಾನ್ ಶಕ್ತಿಶಾಲಿ ಅತಿಥಿ ಪಾತ್ರ ಮಾಡ್ತಾರೆ, ಅನಿರುಧ್‌ರ ಬಿಜಿಎಂ ಚೆನ್ನಾಗಿದೆ, ಕಾಲಿವುಡ್‌ನ ಮೊದಲ 1000 ಕೋಟಿ ಸಿನಿಮಾವಿದು. ಲೋಕೇಶ್‌ ಕನಗರಾಜ್ ಅತ್ಯುತ್ತಮ ನಿರ್ದೇಶನದ ಸಿನಿಮಾವಿದು. ನೆಗೆಟಿವ್‌ ಪಾಯಿಂಟ್ಸ್‌ ಏನೂ ಇಲ್ಲ. ⅘ ರೇಟಿಂಗ್‌ ಎಂದಿದ್ದಾರೆ.

ನೆಗೆಟಿವ್‌ ವಿಷಯಗಳು ಯಾವುವು?

ಮೊದಲಾರ್ಧವು ಕೆಲವು ಭರವಸೆ ಕೊಟ್ಟು, ವಿಶೇಷವಾಗಿ ನಾಗಾರ್ಜುನರ ಸ್ಕ್ರೀನ್‌ ಪ್ರೆಸೆನ್ಸ್ ಮತ್ತು ಆಕರ್ಷಕವಾದ ಇಂಟರ್ವಲ್ ಸಖತ್‌ ಆಗಿದೆ, ಆದರೆ ಸೌಬಿನ್‌ರ ಅಭಿನಯ ಸಾಧಾರಣವಾಗಿತ್ತು. ಆದಾಗ್ಯೂ, ಎರಡನೇ ಅರ್ಧವು ಲ್ಯಾಗ್‌ ಆಗಿದೆ, ಕ್ಲೈಮ್ಯಾಕ್ಸ್‌ ಏನು ಎಂದು ಊಹಿಸಬಹುದು. ಆಮಿರ್ ಖಾನ್‌ರ ಅತಿಥಿ ಪಾತ್ರ ಅಷ್ಟು ಸಿನಿಮಾಕ್ಕೆ ಪೂರಕವಿಲ್ಲ. ಎರಡನೇ ಭಾಗದಲ್ಲಿ ಪೂಜಾ ಹೆಗಡೆ ಅವರ ಮೋನಿಕಾ ಡ್ಯಾನ್ಸ್‌ ಗಮನ ಸೆಳೆಯುತ್ತದೆ. ಒಟ್ಟಾರೆ, ಚಿತ್ರಕ್ಕೆ 1.5/5 ರೇಟಿಂಗ್ ನೀಡಲಾಗಿದೆ. ಇದನ್ನು ಸರಾಸರಿಗಿಂತ ಕೆಳಗಿನ ಚಿತ್ರವೆಂದು ಪರಿಗಣಿಸಲಾಗಿದೆ.

ಕೂಲಿ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್‌ನಿಂದ A (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ಸಿಕ್ಕಿದೆ. ಇದು ರಜನಿಕಾಂತ್‌ರ ಬಹು ವರ್ಷಗಳ ಬಳಿಕ ಮೊದಲ A-ರೇಟೆಡ್ ಚಿತ್ರವಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ