ಮತ್ತೊಮ್ಮೆ ಸುದ್ದಿಯಾದ ರಜನಿಕಾಂತ್.. ಬೀದಿಬದಿಯ ವ್ಯಾಪಾರಿಯನ್ನು ಮನೆಗೆ ಕರೆದು ಸನ್ಮಾನಿಸಿದ್ದು ಏಕೆ?

Published : Jan 26, 2026, 12:57 PM IST
Raianikanth

ಸಾರಾಂಶ

ಸಮಾಜಕ್ಕೆ ಒಳಿತು ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ನಟ ರಜನಿಕಾಂತ್ ಅವರಿಗೆ ಸಹಜವಾಗಿಯೇ ಇದೆ. ಇತ್ತೀಚೆಗೆ ನಟ ರಜನಿಕಾಂತ್ ಅವರು ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್ ಎಂಬ ವ್ಯಕ್ತಿಯನ್ನು ಕುಟುಂಬ ಸಮೇತ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ.

ರಜನಿಕಾಂತ್ ಹೊಸ ಸುದ್ದಿ

ಭಾರತದ ಸೂಪರ್‌ಸ್ಟಾ‌ರ್ ರಜನೀಕಾಂತ್ (Rajinikanth) ಕೇವಲ ಸಿನಿಮಾ ತಾರೆ ಮಾತ್ರವಲ್ಲ, ಮಾನವೀಯತೆಯ ಪ್ರತೀಕ ಕೂಡ ಎಂಬುದು ಹಲವು ಬಾರಿ ಸಾಕ್ಷಿ ಸಮೇತ ಪ್ರೂವ್ ಆಗಿದೆ. ಸಮಾಜಕ್ಕೆ ಒಳಿತು ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ನಟ ರಜನಿಕಾಂತ್ ಅವರಿಗೆ ಸಹಜವಾಗಿಯೇ ಇದೆ. ಇತ್ತೀಚೆಗೆ ನಟ ರಜನಿಕಾಂತ್ ಅವರು ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್ ಎಂಬ ವ್ಯಕ್ತಿಯನ್ನು ಕುಟುಂಬ ಸಮೇತ ತಮ್ಮ ಮನೆಗೆ ಕರೆಸಿ, ಭಾವುಕವಾಗಿ ಮಾತನ್ನಾಡಿ ಸನ್ಮಾನಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಧುರೈನಲ್ಲಿ ರಸ್ತೆ ಬದಿ ಹೋಟೆಲ್

ಮಧುರೈನಲ್ಲಿ ರಸ್ತೆ ಬದಿ ಹೋಟೆಲ್ ನಡೆಸುತ್ತಿರುವ ಶೇಖರ್, ಕಳೆದ 15 ವರ್ಷಗಳಿಂದ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಒಂದು ಪರೋಟ ಬೆಲೆ 30ರಿಂದ 50 ರೂಪಾಯಿ ಇದ್ದರೂ, ಶೇಖರ್ ಮಾತ್ರ ತಮ್ಮ ಬೆಲೆಯನ್ನು ಏರಿಸಿಲ್ಲ. ಈ ಅಪರೂಪದ ಸೇವೆಯೇ ರಜನೀಕಾಂತ್ ಅವರ ಗಮನ ಸೆಳೆದಿದೆ. ಅದೂ ಕೂಡ, 15 ವರ್ಷಗಳ ಹಿಂದೆ ಶೇಖರ್ ಅವರು ನಟ ರಜನಿಕಾಂತ್ ಜನ್ಮದಿನದಂದೇ ಈ ಕೆಲಸ ಶುರುಮಾಡಿದ್ದಾರೆ.

ಇತ್ತೀಚೆಗೆ ರಜನೀಕಾಂತ್ ಅವರು ಶೇಖರ್ ಮತ್ತು ಅವರ ಕುಟುಂಬದವರನ್ನೆಲ್ಲ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಮನೆಯಲ್ಲೇ ಆತಿಥ್ಯ ನೀಡಿ, ಶೇಖರ್ ಅವರ ಕೊರಳಿಗೆ ಚಿನ್ನದ ಸರ ಹಾಕಿದ್ದಾರೆ. ಅಷ್ಟೇ ಅಲ್ಲ, ತಮ್ಮಿಷ್ಟದ ಗುರುವಿನ ಫೋಟೋ ಕೂಡ ಅವರಿಗೆ ನೀಡಿ ಗೌರವಿಸಿದ್ದಾರೆ. ಜೊತೆಗೆ ಶೇಖ‌ರ್ ಕುಟುಂಬಕ್ಕೆ ಆರ್ಥಿಕ ಸಹಾಯ ಕೂಡ ನೀಡಲಾಗಿದೆ ಎಂಬ ಮಾಹಿತಿ ಸಹ ಇದೆ.

ರಜನೀಕಾಂತ್ ಅವರ ಅಪ್ಪಟ ಅಭಿಮಾನಿ

ಇನ್ನು ಶೇಖ‌ರ್ ಬಗ್ಗೆ ಹೇಳುವುದಾದರೆ, ಅವರು ನಟ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. 15 ವರ್ಷಗಳ ಹಿಂದೆ ರಜನೀಕಾಂತ್ ಹುಟ್ಟುಹಬ್ಬದ ಪ್ರಯುಕ್ತ 5 ರೂಪಾಯಿಗೆ ಪರೋಟ ಮಾರಾಟ ಆರಂಭಿಸಿದ್ದರು. ಅದನ್ನು ಇಂದಿಗೂ ಮುಂದುವರೆಸುತ್ತಿದ್ದಾರೆ. ತಮ್ಮ ಹೋಟೆಲಿನಲ್ಲಿ ರಜನೀಕಾಂತ್ ಅವರ ಫೋಟೋಗಳು, ಪೋಸ್ಟರ್‌ಗಳು ಹಾಗೂ ಕೈ ಮೇಲೆ ರಜನೀಕಾಂತ್ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.

ಶೇಖರ್ ಹಾಗೂ ರಜನಿಕಾಂತ್ ಅವರಿಬ್ಬರ ಭೇಟಿ ಹಾಗೂ ಸನ್ಮಾನ ಹಾಗೂ ಮಾನವೀಯ ಕ್ಷಣಗಳ ಫೋಟೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಮೊದಲೇ ಸಮಾಜಸೇವೆಗೆ ಹೆಸರುವಾಸಿ ಆಗಿರುವ ನಟ ರಜನಿಕಾಂತ್ ಅವರು ಈಗ ಮತ್ತಷ್ಟು ಗೌರವ ಹೆಚ್ಚಿಸಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Hrithik Roshan: ನನ್ನ ದೇಹದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಆನ್-ಆಫ್ ಬಟನ್ ಇದೆ.. ಏನಾಗಿದೆ ನಟನಿಗೆ?
ಸಾವಿರಾರು ಕೋಟಿ ಒಡೆಯನಾದ್ರೂ ಹೆಂಡ್ತಿ ಹಾಕಿದ ಕಂಡೀಶನ್‌ ಮೀರಲ್ಲ ಪದ್ಮಶ್ರೀ ಪುರಸ್ಕೃತ ಈ ನಟ! ಯಾರದು?