ನಟಿ ಪರಿಣಿತಿ ಚೋಪ್ರಾ ಭಾವಿ ಪತಿಗೆ ಮೂಗಿನ ಸರ್ಜರಿ, ಏನಿದರ ಗುಟ್ಟು?

By Suvarna NewsFirst Published May 28, 2023, 5:26 PM IST
Highlights

ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಅವರ ನಿಶ್ಚಿತಾರ್ಥದ ಸಮಯದಲ್ಲಿ ಮೂಗಿನ ಬಗ್ಗೆ ಮಾತುಕತೆಯಾಗಿದೆ. ಏನಿದರ ಮರ್ಮ? 
 

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಅವರು ಇದೇ  13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥದ 15 ದಿನಗಳ ನಂತರ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ನಿಶ್ಚಿತಾರ್ಥದ ಸಮಯದ ಮೋಜು-ಮಸ್ತಿಯನ್ನು ನೋಡಬಹುದಾಗಿದ್ದು, ವಿಡಿಯೋ ಮಾತ್ರ ಯಾಕೋ ಡಿಲೀಟ್​  ಮಾಡಲಾಗಿದೆ. ಈ ವಿಡಿಯೋದಲ್ಲಿ ರಾಘವ್ (Raghav Chadda) ಅವರು ಪರಿಣಿತಿಯನ್ನು ಮದುವೆಯಾಗಲು ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪರಿಣಿತಿ ಮತ್ತು ರಾಘವ್ ಅವರ ನಿಶ್ಚಿತಾರ್ಥವನ್ನು ಚಿತ್ರೀಕರಿಸಿದ ಛಾಯಾಗ್ರಾಹಕ ಈ ವಿಡಿಯೋವನ್ನು ಅವರೇ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಪರಿಣಿತಿ ಜೊತೆ ರಾಘವ್ ಸ್ಟೇಜ್ ಮೇಲೆ ನಿಂತಿದ್ದಾರೆ. 

ಈ ಸಮಯದಲ್ಲಿ, ಒಬ್ಬ ಮಹಿಳೆ ಹುಡುಗನ ಮುಖ ಏಕೋ ಬದಲಾದ ಹಾಗೆ ಕಾಣಿಸುತ್ತಿದೆಯಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಕಾರಣ ರಾಘವ್​ ಅವರು ಮೂಗನ್ನು ಮುಚ್ಚಿಕೊಂಡಿದ್ದರು. ಅದಕ್ಕೆ ಮಹಿಳೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕೂಡಲೇ ರಾಘವ್​,  'ಹೌದು, ನಾನು ಮೂಗಿನ ಶಸ್ತ್ರಚಿಕಿತ್ಸೆಗೆ (Operation) ಒಳಗಾಗಿದ್ದೇನೆ. ಏಕೆಂದರೆ ನನ್ನ ಮೂಗು ಸರಿಯಿರಲಿಲ್ಲ.  ಅದಕ್ಕಾಗಿಯೇ ನಾನು ಅದನ್ನು  ಸರಿಪಡಿಸಬೇಕಾಗಿತ್ತು ಎಂದಿದ್ದಾರೆ.  'ನಾನು ಸ್ವಲ್ಪ ಮೂಗಿನ ಕೆಲಸವನ್ನು ಮಾಡಿದೆ. ಏಕೆಂದರೆ, ನನ್ನ  ಮೂಗು ನನ್ನ ತಾಯಿಯಂತೆ ಇದೆ,  ಆದ್ದರಿಂದ ನಾನು ಅದನ್ನು ಸರಿಪಡಿಸಬೇಕಾಗಿತ್ತು. ನನ್ನ ಮೂಗನ್ನು ತಂದೆಯಂತೆಯೇ ಕಾಣುವಂತೆ ಮಾಡಬೇಕಾಗಿತ್ತು. ಅದಕ್ಕಾಗಿ ಶಸ್ತ್ರಚಿಕಿತ್ಸೆ  ಮಾಡಿಸಿಕೊಂಡೆ ಎಂದಿದ್ದಾರೆ. ನಂತರ ರಾಘವ್‌ಗೆ ಪರಿಣಿತಿ ಅಡ್ಡಿಪಡಿಸಿದ್ದಾರೆ, ಅವರು ಮಾತನಾಡುವುದನ್ನು ನಿಲ್ಲಿಸುವಂತೆ ವಿನಂತಿಸುತ್ತಾರೆ.

Parineeti Chopra Engaged: ಗುಸುಗುಸುಗೆ ಕೊನೆಗೂ ತೆರೆ- ಪ್ರೇಮಪಕ್ಷಿಗಳ ಎಂಗೇಜ್​ಮೆಂಟ್

 ಇನ್ನು ಏನನ್ನೋ ಹೇಳಲು ಅವರು ಹೊರಟಿದ್ದಾರೆ. ಆಗ ಕೂಡಲೇ ರಾಘವ್ ಅವರನ್ನು ನಿಲ್ಲಿಸಿದ ಪರಿಣಿತಿ,  ಸುತ್ತಲೂ ಕ್ಯಾಮೆರಾಗಳಿವೆ ಮತ್ತು ಎಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತಿದೆ ಎಂದು ಹೇಳಿದ ತಕ್ಷಣ ರಾಘವ್​ ಅದನ್ನು ನಿಲ್ಲಿಸಿದ್ದಾರೆ. ಇದರ ಬಗ್ಗೆ ವೈರಲ್​ ಆಗುತ್ತಲೇ ಇದನ್ನು ತಾವು ತಮಾಷೆಗೆ ಹೇಳಿರುವುದಾಗಿ ರಾಘವ್​ ಹೇಳಿದ್ದಾರೆ.   

ಆದರೆ ಇದೀಗ  ರಾಘವ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ (Social media) ಸಖತ್ ವೈರಲ್ ಆಗುತ್ತಿದೆ. ರಾಘವ್ ಅವರ ಮೂಗಿನ ಶಸ್ತ್ರಚಿಕಿತ್ಸೆಯ ಬಗ್ಗೆ ಜನರು ಆಘಾತಕ್ಕೊಳಗಾಗಿದ್ದಾರೆ ಮತ್ತು ಅದಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅದೇ ಸಮಯದಲ್ಲಿ, ರಾಘವ್ ಅವರ ಈ ತಪ್ಪೊಪ್ಪಿಗೆ ನಿಜವೋ ಅಲ್ಲವೋ ಎಂದು ಜನರು ಹೇಳಲು ಪ್ರಾರಂಭಿಸಿದ್ದಾರೆ. ಇಷ್ಟಾಗುತ್ತಿದ್ದಂತೆಯೇ  ಫೋಟೋಗ್ರಾಫರ್ ಅದನ್ನು ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದ್ದಾರೆ.

 ಇನ್ನು ರಾಘವ್​ ಮತ್ತು  ಪರಿಣಿತಿ ಮತ್ತು ರಾಘವ್ ಅವರ ಡೇಟಿಂಗ್​ ವಿಷಯಕ್ಕೆ ಬರುವುದಾದರೆ, ಇವರಿಬ್ಬರೂ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರೂ ಇಂಗ್ಲೆಂಡ್‌ನಲ್ಲಿ ಒಟ್ಟಿಗೆ ಓದಿದವರು. ಪರಿಣಿತಿ ಮತ್ತು ರಾಘವ್ ಅವರಿಗೆ ಇಂಗ್ಲೆಂಡ್‌ನಲ್ಲಿ ಇಂಡಿಯಾ ಯುಕೆ ಅತ್ಯುತ್ತಮ ಸಾಧಕರ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿದೆ.  ಈ ಸಂದರ್ಭದಲ್ಲಿ ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.

ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ರು ಪರಿಣಿತಿ!

ಪಂಜಾಬಿ ಶೈಲಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್‌ (Engagement) ನಡೆದಿತ್ತು.  ಪ್ರಿಯಾಂಕಾ ಚೋಪ್ರಾ ಕೂಡ  ಸೇರಿ ಎರಡೂ ಕುಟುಂಬದ ಹಲವರು ಈ ಖುಷಿಯ ಕ್ಷಣದ ಭಾಗವಾಗಿದ್ದರು. ಆಯ್ದ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೇರಿ ರಾಜಕೀಯ ಗಣ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  150ಕ್ಕೂ ಅಧಿಕ ಅತಿಥಿಗಳ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಳ್ಳುವ ಮೂಲಕ ಪ್ರೀತಿಯಲ್ಲಿದ್ದ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲು ಅಧಿಕೃತ ಮುದ್ರೆಯೊತ್ತಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತುಂಬಾ ರೊಮ್ಯಾಂಟಿಕ್ ಆಗಿ ಕಾಣುತ್ತಿದ್ದರು.  

click me!