ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಬ್ಯೂಸಿ. ಒಂದಾದ್ಮೇಲೆ ಒಂದು ಚಿತ್ರದಲ್ಲಿ ನಟಿಸುತ್ತಿರುವ ನಟಿ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ಈಗ ಫ್ಯಾನ್ಸ್ ಹಾಕಿದ ಪೋಸ್ಟ್ ಗೆ ಕಮೆಂಟ್ ಮಾಡಿ ಸುದ್ದಿ ಮಾಡಿದ್ದಾರೆ.
ಸಿನಿಮಾ ರೀಲ್ ಆದ್ರೂ ಅದ್ರಲ್ಲಿರುವ ಕೆಲ ವಿಷ್ಯಗಳನ್ನು ಅಭಿಮಾನಿಗಳು ರಿಯಲ್ ಲೈಫ್ ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ಸಿನಿಮಾವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ತಾರೆ. ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕಮೆಂಟ್ ಗಳು ಬಂದಿವೆ. ಚಿತ್ರದಲ್ಲಿ ಹುಡುಗಿಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಅನೇಕರು ಅನಿಮಲ್ ಚಿತ್ರದ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು. ಈಗ ಇನ್ನೊಬ್ಬ ಮಹಿಳೆ ಚಿತ್ರದ ಬಗ್ಗೆ ಕಮೆಂಟ್ ಮಾಡಿದ್ದಾಳೆ. ಎಕ್ಸ್ ಖಾತೆಯಲ್ಲಿ ಸಿನಿಮಾ ದೃಶ್ಯವೊಂದನ್ನು ಹಾಕಿದ್ದು, ಹುಡುಗರನ್ನು ನಂಬಬಾರದು ಎಂಬ ಶೀರ್ಷಿಕೆ ಹಾಕಿದ್ದಾರೆ. ಅವರ ಈ ಎಕ್ಸ್ ಪೋಸ್ಟ್ ಗೆ ನಟಿ ರಶ್ಮಿಕಾ ಮಂದಣ್ಣ ಕಮೆಂಟ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿರುವ ವಿಷ್ಯವನ್ನು ಕರೆಕ್ಷನ್ ಮಾಡಿದ್ದಾರೆ.
ರಣಬೀರ್ ಕಪೂರ್ (Ranbir Kapoor) ಮತ್ತು ಬಾಬಿ ಡಿಯೋಲ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ಅನಿಮಲ್ (Animal) ನಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಂಡಿದ್ದರು. ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ರಣಬೀರ್ ಕಪೂರ್, ಪತ್ನಿ ಗೀತಾಂಜಲಿಗೆ ಮೋಸ ಮಾಡೋದಿಲ್ಲ ಎನ್ನುವ ಪ್ರಮಾಣ ಮಾಡ್ತಾರೆ. ಆದ್ರೆ ಇನ್ನೊಬ್ಬ ಹುಡುಗಿ ಜೊತೆ ಸಂಬಂಧ ಬೆಳೆಸುತ್ತಾರೆ. ಎಷ್ಟೋ ದಿನಗಳ ನಂತ್ರ ಮನೆಗೆ ವಾಪಸ್ ಬಂದ ರಣಬೀರ್, ಈ ವಿಷ್ಯವನ್ನು ಗೀತಾಂಜಲಿಗೆ ಹೇಳಿದಾಗ ಆ ನೋವು ಸಹಿಸೋದು ಗೀತಾಂಜಲಿಗೆ ಕಷ್ಟವಾಗುತ್ತದೆ. ಸಿನಿಮಾದ ಕೆಲ ದೃಶ್ಯಗಳನ್ನು ಎಡಿಟ್ ಮಾಡಿ ಮಹಿಳೆ ಪೋಸ್ಟ್ ಹಾಕಿದ್ದಾಳೆ.
ಅಹಂ ಭಾವ ಹಠ ಬೇಕಂದ್ರೆ ಹಾಡುವುದರಲ್ಲಿ ತೋರಿಸಿ; ರಿಯಾಲಿಟಿ ಶೋ ಗಾಯಕಿರುವ ಸುಮಾ ಶಾಸ್ತ್ರಿ ಬುದ್ಧಿ ಮಾತು
ಫೆಲೆನಾ (Falena) ಹೆಸರಿನ ಎಕ್ಸ್ ಖಾತೆಯಲ್ಲಿ ಮಹಿಳೆ ಪೋಸ್ಟ್ ಹಂಚಿಕೊಂಡಿದ್ದಾಳೆ. ದೃಶ್ಯದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅವರಿಗೆ ಪ್ರಮಾಣ ಮಾಡೋದು, ನಂತ್ರ ಇನ್ನೊಬ್ಬಳ ಜೊತೆ ಸಂಬಂಧ ಬೆಳೆಸೋದು ಹಾಗೂ ಕೊನೆಯಲ್ಲಿ ಅದನ್ನು ರಶ್ಮಿಕಾ ಮಂದಣ್ಣ ಅವರಿಗೆ ಹೇಳೋದನ್ನು ಕೇಳ್ಬಹುದು. ಕೊನೆಯಲ್ಲಿ ರಶ್ಮಿಕಾ ಕಣ್ಣೀರು ಹಾಕೋದನ್ನು ನೀವು ನೋಡ್ಬಹುದು. ಅದಕ್ಕೆ ಮಹಿಳೆ ಒಬ್ಬ ಪುರುಷನನ್ನು ನಂಬುವುದಕ್ಕಿಂತ ಅಪಾಯಕಾರಿ ಇನ್ನೊಂದಿಲ್ಲ ಎಂದು ಶೀರ್ಷಿಕೆ ಹಾಕಿದ್ದಾಳೆ.
ಆಕೆ ಈ ಪೋಸ್ಟ್ ಎಕ್ಸ್ ನಲ್ಲಿ ವೈರಲ್ ಆಗಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಪೋಸ್ಟ್ ನಲ್ಲಿ ಹಾಕಿರೋ ಶೀರ್ಷಿಕೆಗೆ ಕರೆಕ್ಷನ್ ಹಾಕಿದ್ದಾರೆ. 'ತಿದ್ದುಪಡಿ, ಮೂರ್ಖ ಮನುಷ್ಯನನ್ನು ನಂಬುವುದು = ಅಪಾಯಕಾರಿ. ಇಲ್ಲಿ ಇನ್ನೂ ಅನೇಕ ಒಳ್ಳೆಯ ಜನರಿದ್ದಾರೆ, ಅವರನ್ನು ನಂಬಿರಿ, ಅಂತಹವರನ್ನು ನಂಬಿರಿ = ವಿಶೇಷ ಎಂದು ರಶ್ಮಿಕಾ ಮಂದಣ್ಣ ಕಮೆಂಟ್ ಮಾಡಿದ್ದಾರೆ.
ರಶ್ಮಿಕಾ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಪುರುಷರ ಮೇಲೆ ಭರವಸೆ ವ್ಯಕ್ತಪಡಿಸಿದ ರಶ್ಮಿಕಾಗೆ ಅನೇಕ ಪುರುಷರು ಧನ್ಯವಾದ ಹೇಳಿದ್ದಾರೆ. ಅನೇಕರು ಥ್ಯಾಂಕ್ಸ್ ರಶ್ಮಿಕಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಮಹಿಳೆ ಪೋಸ್ಟ್ ಗೆ ಕೂಡ ಸಾವಿರಾರು ಕಮೆಂಟ್ ಬಂದಿದೆ. ಎಲ್ಲ ಪುರುಷರು ಮಹಿಳೆ ಪೋಸ್ಟ್ ವಿರೋಧಿಸಿದ್ರೆ ಕೆಲ ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ.
ಮುಂದುವರಿದ ವಿಚಾರಣೆ, ದರ್ಶನ್ ಮೌನ: ಆದರೆ ಕೃತ್ಯಗಳ ಬಗ್ಗೆ ಬಾಯಿ ಬಿಡುತ್ತಿರುವ ನಟನ ಆಪ್ತರು
ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಕ್ರೂರಿಯಂತೆ ವರ್ತಿಸಿದ್ರೆ ತುಂಬಾ ಬುದ್ಧಿವಂತ, ಶಾಂತ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಅವರ ಪಾತ್ರವನ್ನು ಜನರು ಇಷ್ಟಪಟ್ಟಿದ್ದರು. ರಶ್ಮಿಕಾ ಬಿಟ್ಟರೆ ಬೇರೆ ಯಾವ ನಟಿಯೂ ಈ ಪಾತ್ರವನ್ನು ಇಷ್ಟು ಸುಂದರವಾಗಿ ನಿಭಾಯಿಸಲು ಸಾಧ್ಯವಿಲ್ಲ ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ. ರಶ್ಮಿಕಾ ಸದ್ಯ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿ ಇರುವ ನಟಿ. ದಿ ಗರ್ಲ್‌ಫ್ರೆಂಡ್, ಡಿ-51 ಮತ್ತು ಪುಷ್ಪ 2 - ದಿ ರೂಲ್ ಚಿತ್ರದಲ್ಲಿ ನಟಿಸ್ತಿದ್ದಾರೆ.
Remember nothing is scarier than trusting a man..
pic.twitter.com/DEAw6Dxhlf