Chiranjeevi Sarja: 'ಕೇಕ್‌ ಮೇಲೆ CHIRU ಅಂತ ಬರೀಬೇಕಿತ್ತು ಅಮ್ಮಾ!' ಅಪ್ಪನ ಬರ್ತ್‌ ಡೇ ಕೇಕ್ ಕತ್ತರಿಸಿದ ರಾಯನ್

Published : Oct 17, 2026, 02:50 PM IST
Meghana Raj Sarja

ಸಾರಾಂಶ

ನಟ ಚಿರಂಜೀವಿ ಸರ್ಜಾ ಅವರ 42ನೇ ಹುಟ್ಟುಹಬ್ಬವನ್ನು ಪತ್ನಿ ಮೇಘನಾ ರಾಜ್ ಮತ್ತು ಪುತ್ರ ರಾಯನ್ ಆಚರಿಸಿದ್ದಾರೆ. ಅಪ್ಪನ ಬರ್ತ್‌ ಡೇ ಕೇಕ್ ಕಟ್ ಮಾಡುವಾಗ ರಾಯನ್ ಆಡಿದ ಮಾತುಗಳ ವಿಡಿಯೋ ವೈರಲ್ ಆಗಿದೆ. ಮೇಘನಾ ಅವರು ಪತಿಯೊಂದಿಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ಕನ್ನಡ ಚಿತ್ರರಂಗದ ಭರವಸೆಯ ನಟ ಚಿರಂಜೀವಿ ಸರ್ಜಾ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ 42ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ 2020ರ ಜೂನ್‌ 07ರಂದು ತೀವ್ರ ಹೃದಯಾಘಾತದಿಂದ ಚಿರು ನಮ್ಮನ್ನು ಅಗಲಿದ್ದರು. ಚಿರಂಜೀವಿ ಸರ್ಜಾ ಅವರು ನಮ್ಮೊಂದಿಗೆ ಇಲ್ಲ ಎಂದರೂ, ಅವರು ಮಾಡಿರುವ ಸಿನಿಮಾಗಳ ಮೂಲಕ ಇಂದಿಗೂ ನಮ್ಮನ್ನು ರಂಜಿಸುತ್ತಿದ್ದಾರೆ. ಇದರ ನಡುವೆ ಇಂದು ಚಿರಂಜೀವಿ ಸರ್ಜಾರ ಅವರ ಹುಟ್ಟುಹಬ್ಬವನ್ನು ಇಡೀ ಕುಟುಂಬ ಆಚರಣೆ ಮಾಡಿಕೊಂಡಿದೆ.

ಚಿರಂಜೀವಿ ಸರ್ಜಾ 42ನೇ ಹುಟ್ಟುಹಬ್ಬ, ರಾಯನ್ ವಿಡಿಯೋ ವೈರಲ್

ಹೌದು, ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್, ತಮ್ಮ ಮಗನೊಂದಿಗೆ ಪತಿಯ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ಸರ್ಜಾ ಅಪ್ಪನ ಬರ್ತ್‌ ಡೇ ಕೇಕ್ ಕಟ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಕೇಕ್ ಕಟ್ ಮಾಡುವ ಮುನ್ನ ರಾಯನ್, ಕೇಕ್‌ ಮೇಲೆ CHIRU ಅಂತ ಬರಿದಿದೆಯಾ ಇಲ್ಲವೇ ಎಂದು ನೋಡಿ ಅಮ್ಮನೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ.

ಮೇಘನಾ ರಾಜ್ ಅವರು ಕೂಡ ಪತಿಯ ನೆನಪಿನಲ್ಲಿ ಅವರೊಂದಿಗೆ ಕಳೆದ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಬರ್ತ್ ಡೇ ಬಾಯ್, ಮೈ ಫಾರೆವರ್ ಸೂಪರ್ ಸ್ಟಾರ್' ಎಂದು ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮದುವೆ 2014ರ ಮೇ 2ರಂದು ಅದ್ದೂರಿಯಾಗಿ ನಡೆದಿತ್ತು. ಚಿರು ನಿಧನರಾದಾಗ ಮೇಘನಾ ಗರ್ಭಿಣಿಯಾಗಿದ್ದು, ಆ ಬಳಿಕ ರಾಯ್ ರಾಜ್ ಸರ್ಜಾ ಜನಿಸಿದ್ದರು. ಚಿರು ನಿಧನ ಬಳಿಕ ಅವರ ನೆನಪಿನಲ್ಲೇ, ಮಗನನ್ನ ನೋಡಿಕೊಳ್ಳುತ್ತಾ ಮೇಘನಾ ಬದುಕನ್ನು ನಡೆಸುತ್ತಿದ್ದಾರೆ. ಅಭಿಮಾನಿಗಳು ಕೂಡ ರಾಯನ್ ಅವರಲ್ಲಿಯೇ ಚಿರು ಅವರನ್ನು ನೋಡುತ್ತೇವೆ ಎಂದು ಹೇಳುತ್ತಿದ್ದಾರೆ.

ಸಿನಿಮಾ ರಂಗಕ್ಕೆ ಚಿರಂಜೀವಿ ಅವರು ಎಂಟ್ರಿ ಕೊಟ್ಟ ಸಂದರ್ಭದಲ್ಲಿ ನಾಲ್ಕು ವರ್ಷಗಳ ಕಾಲ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಬಳಿಕ 2009ರಲ್ಲಿ ಬಿಡುಗಡೆಯಾದ ವಾಯುಪುತ್ರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿತ್ತು. ಆ ಬಳಿಕ ಚಿರು, ಗಂಡೆದೆ, ವರದನಾಯಕ, ಆಟಗಾರ, ಆಕೆ, ಅಮ್ಮ ಐ ಲವ್ ಯೂ, ಸಿಂಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಚಿರಂಜೀವಿ ಸರ್ಜಾ ಅವರ ನಿಧನದ ಬಳಿಕ ರಾಜಮಾರ್ತಾಂಡ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಚಿರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಅವರು ಅಣ್ಣನ ಪಾತ್ರಕ್ಕೆ ಧ್ವನಿ ನೀಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

AR Rahman Secret: ಎಆರ್ ರೆಹಮಾನ್ ಸೀಕ್ರೆಟ್ ಬಿಚ್ಚಿಟ್ಟ ಯಶ್.. ಬೆಂಗಳೂರಲ್ಲಿ 'ಸಂಗೀತ ಮಾಂತ್ರಿಕ'ನ ಗುಟ್ಟು ರಟ್ಟು!
ಅಣ್ಣಾವ್ರ​ ಜಗಮೆಚ್ಚಿದ ಮಗ ರೀ-ರಿಲೀಸ್​ಗೆ ಖರ್ಚಾಗಿದ್ದೆಷ್ಟು? ಇದೇ ಸಿನಿಮಾನೇ ಆಯ್ಕೆ ಮಾಡಿದ್ಯಾಕೆ? ಉದಯ್​ ಶಂಕರ್​ ಮಾತು