'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ 'ಲಾಯರ್ ಚಂದ್ರು' ಖ್ಯಾತಿಯ ಕಾರ್ತಿಕ್ ಔಟ್; ಹೊಸ ನಟ ಎಂಟ್ರಿ

Published : May 28, 2022, 12:02 PM ISTUpdated : May 28, 2022, 12:06 PM IST
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ 'ಲಾಯರ್ ಚಂದ್ರು' ಖ್ಯಾತಿಯ ಕಾರ್ತಿಕ್ ಔಟ್; ಹೊಸ ನಟ ಎಂಟ್ರಿ

ಸಾರಾಂಶ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ನಟ ಕಾರ್ತಿಕ್(Karthik) ಧಾರಾವಾಹಿಯಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಧಾರಾವಾಹಿಯಲ್ಲಿ ಕಾರ್ತಿಕ್, ಚಂದ್ರು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪುಟ್ಟಕ್ಕನ ಮಕ್ಕಳು(Puttakkana Makkalu), ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಒಂದು. ಜೀ ಕನ್ನಡ ವಾಹಿನಿಯಲ್ಲಿ ಬರ್ತಿರುವ ಈ ಧಾರಾವಾಹಿ ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಸ್ಯಾಂಡಲ್ ವುಡ್‌ನ ಹಿರಿಯ ನಟಿ ಉಮಾಶ್ರೀ(Umashree) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದೆ. ಅಂದಹಾಗೆ ಈ ಧಾರಾವಾಹಿಯಿಂದ ಇದೀಗ ಪ್ರಮುಖ ಸುದ್ದಿ ಹೊರಬಿದ್ದಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ನಟ ಕಾರ್ತಿಕ್(Karthik) ಧಾರಾವಾಹಿಯಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಈ ಧಾರಾವಾಹಿಯಲ್ಲಿ ಕಾರ್ತಿಕ್, ಚಂದ್ರು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಂದ್ರು ಲಾಯರ್ ಪಾತ್ರವನ್ನು ನಿಭಾಯಿಸುತ್ತಿದ್ದರು. ಧಾರಾವಾಹಿಯ ನಾಯಕಿ ಸ್ನೇಹಾಗೆ ತುಂಬಾ ಹತ್ತಿರವಾದ ಪಾತ್ರ ಇದಾಗಿತ್ತು. ಸ್ನೇಹಾ, ಲಾಯರ್ ಚಂದ್ರುನನ್ನು ಸಹೋದರ ಎಂದೇ ಕರೆಯುತ್ತಿದ್ದರು. ಇನ್ನೊಂದೆಡೆ ಚಂದ್ರು ಬಂಗಾರಮ್ಮನ ಅಳಿಯ ಕೂಡ ಹೌದು. ಮಗಳು ಮದುವೆಯಾಗಿದ್ದರೂ ಅಳಿಯನನ್ನು ದೂರ ಮಾಡಿ ಮಗಳನ್ನು ಮನೆಯಲ್ಲೇ ಇಟ್ಟಿಕೊಂಡಿದ್ದಾರೆ ಬಂಗಾರಮ್ಮ. ಇದೀಗ ಚಂದ್ರು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಕಾರ್ತಿಕ್ ಧಾರಾವಾಹಿಯಿಂದ ಹೊರನಡೆದಿದ್ದಾರೆ. 

ಅಮುಲ್‌ ಬೇಬಿ- ರೌಡಿ ಬೇಬಿ ರಿಯಲ್‌ ಲೈಫ್‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್‌ ವಿಚಾರಗಳು

ಚಂದ್ರು ಜಾಗಕ್ಕೆ ಮತ್ತೋರ್ವ ನಟನ ಎಂಟ್ರಿಯಾಗಿದೆ. ಈ ಬಗ್ಗೆ ಧಾರಾವಾಹಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಅಂದಹಾಗೆ ಕಾರ್ತಿಕ್ ಜಾಗಕ್ಕೆ ಮತ್ತೋರ್ವ ನಟ ನಂದೀಶ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ನಂದೀಶ್ ಈಗಾಗಲೇ ಧಾರಾವಾಹಿ ತಂಡ ಸೇರಿಕೊಂಡಿದ್ದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ನಂದೀಶ್ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಕಿರುತರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ನಟ ನಂದೀಶ್ ಈಗಾಗಲೇ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿರಾಮ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಾಯಕಿ ಮಹತಿ ಅಣ್ಣಮ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹ ಅಣ್ಣನಾಗಿ ನಟಿಸಲಿದ್ದಾರೆ.

ಚಂದ್ರು ಪಾತ್ರದಲ್ಲಿ ಈ ಧಾರಾವಾಹಿಯಲ್ಲಿ ಬಂಗಾರಮ್ಮನ ಅಳಿಯ. ಚಂದ್ರು ತಾಯಿ ಮತ್ತು ಬಂಗಾರಮ್ಮನಿಗೂ ಆಗಲ್ಲ. ಇಬ್ಬರು ಒಬ್ಬರಿಗೊಬ್ಬರು ಕಂಡರೆ ಉರಿದು ಬೀಳುತ್ತಾರೆ. ಆದರೆ ಚಂದ್ರು ಬಂಗಾರಮ್ಮನ ಮಗಳನ್ನು ತುಂಬಾ ಪ್ರೀತಿಸುತ್ತಾರೆ. ಬಂಗಾರಮ್ಮನಿಗೆ ಗೊತ್ತಾಗದೆ ಕದ್ದು ಮುಚ್ಚಿ ಹೆಂಡತಿಯನ್ನು ಭೇಟಿಯಾಗುತ್ತಾನೆ. ಚಂದ್ರುಗೆ ನಾಯಕಿ ಸ್ನೇಹ ಸಹಾಯ ಮಾಡುತ್ತಾಳೆ. ಇತ್ತ ಸ್ನೇಹಾ ಬಂಗಾರಮ್ಮನ ಮಗ ಎಂದು ಗೊತ್ತಿಲ್ಲದೆ ಕಂಠಿ ಜೊತೆ ಸ್ನೇಹ ಮಾಡಿದ್ದಾಳೆ. ಇದೀಗ ಕಂಠಿ ವಿರುದ್ಧವೇ ಹೊರಾಟಕ್ಕೆ ನಿಂತಿದ್ದಾಳೆ.

Maldivesನಲ್ಲಿ ಕಿರುತೆರೆಯ ಫೇಮಸ್‌ ನಟಿ Disha Parmar, ಹಾಟ್‌ ಲುಕ್‌‌ಗೆ ಪಡ್ಡೆ ಹುಡುಗ್ರು ಫುಲ್ ಫಿದಾ!

ಪುಟ್ಟಕ್ಕನ ಮಕ್ಕಳು ಮೂರು ಹೆಣ್ಣು ಮಕ್ಕಳ ಕಥೆ. ಮೂರು ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಪುಟ್ಟಕ್ಕನ ಗಂಡ ಹೆಂಡತಿಯನ್ನೇ ಬಿಟ್ಟು ಹೋಗಿ ಮತ್ತೋರ್ವ ಹೆಂಡತಿಯ ಜೊತೆ ಸಂಸಾರ ಮಾಡುತ್ತಿದ್ದಾನೆ. ಒಂಟಿ ಹೆಣ್ಣು ಪುಟ್ಟಕ್ಕ ಮೂವರು ಹೆಣ್ಣು ಮಕ್ಕಳನ್ನು ಸಾಕುವ ಕಥೆಯೇ ಪುಟ್ಟಕ್ಕನ ಮಕ್ಕಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?