ವೈವಿದ್ಯತೆಯಲ್ಲಿ ಏಕತೆ ಸಾರುವ ದೇಶ ಭಾರತ: ಕಮಲ್ ಹಾಸನ್

Published : May 28, 2022, 09:49 AM IST
ವೈವಿದ್ಯತೆಯಲ್ಲಿ ಏಕತೆ ಸಾರುವ ದೇಶ ಭಾರತ: ಕಮಲ್ ಹಾಸನ್

ಸಾರಾಂಶ

ಸಿನಿಮಾ ನಟ ನಟಿಯರಿಗೆ ಯಾವ ಭಾಷೆಯಲ್ಲಿ(language) ಸಿನಿಮಾ(cinema) ಮಾಡುತ್ತಿದ್ದೇನೆ ಎನ್ನುವುದಷ್ಟೇ ಪ್ರಮುಖವಾಗಿರುತ್ತದೆ. ಹಾಗಾಗಿ ಭಾರತೀಯ(Indian) ಎಂಬ ಭಾವನೆ ಇರಬೇಕೆ ಹೊರತು ಭಾಷೆಯ ತಾರತಮ್ಯ ಇರಬಾರದು ಎಂದು ಹಿರಿಯ ನಟ ಕಮಲ್ ಹಾಸನ್ ಹೇಳಿದ್ದಾರೆ. ಅವರು ತಮ್ಮದೇ ಬ್ಯಾನರ್‌ನಲ್ಲಿ(banner) ಬಿಡುಗಡೆಯಾಗುತ್ತಿರುವ ವಿಕ್ರಮ್ ಸಿನಿಮಾ ಪ್ರಮೋಷನ್‌ನಲ್ಲಿ(promotion) ಅಭಿಪ್ರಾಯ ತಿಳಿಸಿದ್ದಾರೆ.  

ದೇಶಾದ್ಯಂತ ಹಿಂದಿ(hindi) ಹೇರಿಕೆ ಕುರಿತು ಹಲವು ಅಭಿಪ್ರಾಯಗಳು ಕೇಳಿಬರುತ್ತಿದ್ದು, ಹಿರಿಯ ನಟ ಕಮಲ್ ಹಾಸನ್ ಸಹ ತಮ್ಮ ಅಭಿಮತ ತಿಳಿಸಿದ್ದಾರೆ. ನಾನು ಭಾರತದ ಪ್ರಜೆ. ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ. ಹಾಗೆಯೇ ವೈವಿಧ್ಯತೆ(diversity) ನಮ್ಮ ದೇಶದ ಶಕ್ತಿ. ನಮ್ಮ ನೆಲದಲ್ಲಿ ಹಲವು ಭಾಷೆಗಳಿವೆ. ಎಲ್ಲಾ ಭಾಷೆಗಳಿಗೂ ಅದರದೇಯಾದ ಸಂಸ್ಕೃತಿ(culture) ಇದೆ. ಎಲ್ಲಾ ಭಾಷೆಯನ್ನೂ ಗೌರವಿಸಬೇಕೇ ಹೊರತು ಉತ್ತರ ದಕ್ಷಿಣ ಎಂದು ಭಾಷೆಯ ಹೆಸರಲ್ಲಿ ದೇಶವನ್ನು ಇಬ್ಬಾಗ(devide) ಮಾಡಬಾರದು ಎಂದು ಹೇಳಿದ್ದಾರೆ.

ನಮ್ಮ ಚಿತ್ರೋದ್ಯಮದಲ್ಲಿ ಪ್ಯಾನ್ ಇಂಡಿಯಾಗೆ ಸೇರಬಹುದಾದ ಹಲವು ಸಿನಿಮಾಗಳಿವೆ. ಪಡೋಸನ್(padosan), ಶಾಂತರಾಮ್ ಜಿ ಅವರ ಹಲವು ಸಿನಿಮಾಗಳು ನನ್ನ ಪ್ರಕಾರ ಪ್ಯಾನ್ ಇಂಡಿಯಾಗೆ ಸೇರಬಹುದಾಗಿದೆ. ನೀವು ಯಾವ ರೀತಿಯ ಸಿನಿಮಾ ಮಾಡುತ್ತೀರಿ, ಯಾರೆಲ್ಲಾ ನೋಡಬಹುದು ಎಂಬುದರ ಮೇಲೆ ನಿಂತಿರುತ್ತೆ. ಮಲೆಯಾಳಂನ ಚೆಮ್ಮೀನ್(chemmeen) ಪ್ಯಾನ್ ಇಂಡಿಯಾ ಫಿಲ್ಮಂ ಆಗಿದ್ದು ಅದನ್ನು ಅವರು ಡಬ್(dub) ಮಾಡಲಿಲ್ಲ, ಸಬ್ ಟೈಟಲ್(sub title) ಸಹ ಇಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರಭಾಷೆ ವಿವಾದ; 'ಪ್ರತಿಯೊಂದು ಪ್ರಾದೇಶಿಕ ಭಾಷೆಗೂ ಪ್ರಾಮುಖ್ಯತೆ ಇದೆ' ಪ್ರಧಾನಿ ಮೋದಿ ಮಾತಿಗೆ ಸುದೀಪ್ ಹೇಳಿದ್ದೇನು?

ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ಈ ಬಗ್ಗೆ ಖುಷಿ ಇದೆ. ನಮ್ಮಲ್ಲಿ ಪ್ರತಿಭಾನ್ವಿತ ನಟ ನಟಿಯರಿದ್ದಾರೆ. ಬಾಹುಬಲಿ(Baahubali), ಆರ್‌ಆರ್‌ಆರ್‌(RRR),  ಪುಷ್ಪಾ(Pushpa) ಸೇರಿ ಹಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ(Box-office) ಸದ್ದು ಮಾಡಿವೆ. ಇತ್ತೀಚೆಗೆ ಬಿಡುಗಡೆಯಾದ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ ಕನ್ನಡದ KGF-2 ಸಹ ಪ್ಯಾನ್ ಇಂಡಿಯಾಗೆ ಸೇರಿದೆ. ಅದು ಸರಿಸುಮಾರು 1000 ಕೋಟಿ ಗಳಿಸಿದೆ. ಇದು ಬಾಲಿವುಡ್ ಸಿನಿಮಾವನ್ನೂ ಮೀರಿಸಿದೆ ಎಂದು ಪ್ಯಾನ್ ಇಂಡಿಯಾಗೆ ಸಪೋರ್ಟ್ ಮಾಡಿದ್ದಾರೆ.

ಮುAಬರುವ ಪೀಳಿಗೆಗೆ ನಾವು ಬೇರೆ, ನೀವು ಬೇರೆ ಎಂದು ತಿಳಿಸಿಕೊಡುವ ಬದಲು ನಾವೆಲ್ಲ ಒಂದೇ ಎಂದು ಹೇಳಿಕೊಡಬೇಕು. ಈಗ ಬರುತ್ತಿರುವ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾದ(Pan India) ಗಮನ ಸೆಳೆಯುತ್ತಿವೆ. ಅಂದರೆ ಅಂತರಾಷ್ಟಿçÃಯ(international) ಮಟ್ಟದಲ್ಲಿ ಭಾರತೀಯ ಚಿತ್ರರಂಗವನ್ನು ಗುರುತಿಸುತ್ತಿವೆ. ಹೀಗಿರುವಾಗ ಎಲ್ಲಾ ಭಾಷೆಯನ್ನು ಗೌರವದಿಂದ ಕಾಣಬೇಕು. 

ನಮ್ಮನ್ನು ಬ್ರಿಟಿಷರು ಒಡೆದು ಆಳಿದ್ದು ಹೀಗೆ: ಉತ್ತರ ದಕ್ಷಿಣ ತಾರತಮ್ಯದ ಬಗ್ಗೆ ಕಿಲಾಡಿ ಮಾತು

 

ಭಾರತಕ್ಕೆ ಕಾಲಿಟ್ಟ ಬ್ರಿಟೀಷರು(british) ವ್ಯಾಪಾರಕ್ಕೆಂದು ಬಂದು, ಕೊಳ್ಳೆಹೊಡೆದು ಹೋದರು. ಆದರೆ ನಮಗೆ ಅನುಕೂಲವಾಗಲೆಂದು ಇಂಗ್ಲಿಷ್ ಭಾಷೆಯನ್ನು ಕಲಿಸಿಕೊಟ್ಟು ಹೋಗಿದ್ದಾರೆ. ಹಾಗಾಗಿ ಎಲ್ಲಾದರು ಹೋದಲ್ಲಿ ಮಾತನಾಡಲು ಇಂಗ್ಲಿಷ್ ಒಂದು ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಹಾಗೆಯೇ ನಮ್ಮಲ್ಲಿ ಹಲವು ಭಾಷೆಗಳಿದ್ದು, ಅದರದ್ದೇ ಆದ ಜನಾಂಗವೂ ಇದೆ. ಹೀಗಿರುವಾಗ ಭಾಷಾ ತಾರತಮ್ಯ ಮಾಡುತ್ತ ಜಗತ್ತಿಗೆ ನಮ್ಮ ದೌರ್ಬಲ್ಯವನ್ನು(weakness) ತೋರಿಸುತ್ತಿರುವುದು ನಾಚಿಕೆಗೀಡಿನ ವಿಷಯ ಎಂದಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳಿಂದ(five decade) ದುಡಿಯುತ್ತಿದ್ದೇನೆ. ನಾನು ಎಂದಿಗೂ ಭಾಷೆಯನ್ನೇ ಕೇಂದ್ರವಾಗಿಸಿ ಕೆಲಸ ಮಾಡಿಲ್ಲ. ಈ ಬಗ್ಗೆ ನನಗೆ ಹೆಮ್ಮೆ ಇದೆ. ಹಿಂದಿ, ತಮಿಳು, ತೆಲಗು, ಮಲೆಯಾಳಂ, ಬೆಂಗಾಲಿ ಎಂದು ಪ್ರತ್ಯೇಕಿಸಿ ಕರೆಯುವ ಬದಲು ಅದನ್ನು ಭಾರತೀಯ ಭಾಷೆ(Indian Language) ಎಂದು ಹೇಳುವುದು ಒಳ್ಳೆಯದು ಎಂದಿದ್ದಾರೆ. 

ಸಿನಿಮಾ ಮಾಡುವ ಮುನ್ನ ಅದರ ಹಿಂದೆ ಸಾಕಷ್ಟು ಕೆಲಸಗಳಿರುತ್ತವೆ. ಎಲ್ಲರಿಗೂ ಒಂದೇ ರೀತಿಯಲ್ಲಿ ಅವಕಾಶಗಳು ಸಿಗುವುದಿಲ್ಲ. ಅವರ ಪ್ರತಿಭೆಗೆ(talent) ಅನುಗುಣವಾಗಿ ಚಾನ್ಸ್ ಸಿಗುತ್ತದೆ. ಪ್ರೊಡ್ಯೂಸರ್(producers), ಕ್ಯಾಮೆರಾಮೆನ್(cameraman), ಪಬ್ಲಿಸಿಟಿ(publicity), ಡಿಸ್ಟಿçಬ್ಯೂಟರ್(distributor) ಹೀಗೆ ಹಲವು ವಿಷಯಗಳು ಮುಖ್ಯವಾಗಿರುತ್ತದೆ. ಈಗ ಟೆಕ್ನಾಲಜಿ(technology) ಬೆಳೆದಿದೆ. ಯೂಟ್ಯೂಬ್(YouTube), ಮಾಧ್ಯಮ(media), ಸಾಮಾಜಿಕ ಜಾಲತಾಣಗಳು(social media) ಹೀಗೆ ಹಲವು ಪ್ಲಾಟ್‌ಫಾರ್ಮಗಳಿಂದ(platform) ಜನರನ್ನು ಬಹುಬೇಗ ತಲುಪಲು ಸಾಧ್ಯವಾಗುತ್ತಿದೆ. ಹೀಗಿರುವಾಗ ಭಾಷೆಯ ವಿಷಯ ಇಟ್ಟುಕೊಂಡು ಕಿತ್ತಾಡುವ ಬದಲು ಭಾರತೀಯರಾಗಿ ದುಡಿದು ಬಾಳೋಣ ಎಂದು ಹೇಳಿದ್ದಾರೆ.

ಭಾಷಾ ತಾರತಮ್ಯದ ವಿರುದ್ಧ ಅಕ್ಷಯ್ ಕುಮಾರ್, ಸುದೀಪ್ ಹಲವು ಗಣ್ಯರು ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?