
ತೆಲುಗು ಜನಪ್ರಿಯ ಕಿರುತೆರೆ ನಿರೂಪಕಿ ಹಾಗೂ ನಟಿ ಅನಸೂಯ ಭಾರದ್ವಾಜ್ ಮೊದಲಿನಿಂದಲೂ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟ ವಿಜಯ್ ತಮ್ಮ ಖಾತೆ ಹೆಸರನ್ನು ದಿ ವಿಜಯ್ ದೇವರಕೊಂಡ ಎಂದು ಇಟ್ಟುಕೊಂಡಿದ್ದಾರೆ. ಇದೇ ಹೆಸರನ್ನು ಸಿನಿಮಾ ಟೈಟಲ್ ಕಾರ್ಡ್‌ನಲ್ಲೂ ಬಳಸುತ್ತಿದ್ದಾರೆ. ಈ ವಿಚಾರ ದೊಡ್ಡ ಸುದ್ದಿಯಾಗಿತ್ತು ಇದರ ಬಗ್ಗೆ ಅನಸೂಯ ಕೂಡ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
'ವಿಜಯ್ ದೇವರಕೊಂಡ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದೆವು ನಮ್ಮ ನಡುವೆ ಯಾವ ಸಮಸ್ಯೆನೂ ಇರಲಿಲ್ಲ. 2017ರಲ್ಲಿ ಅರ್ಜುನ್ ರೆಡ್ಡಿ ಸಿನಿಮಾ ರಿಲೀಸ್ ಸಮಯದಲ್ಲಿ ಕೆಟ್ಟ ಪದಗಳಿಗೆ ಬೀಪ್ ಸೌಂಡ್ ಹಾಕಲಾಗಿತ್ತು. ಸಿನಿಮಾ ತಂಡದ ಜೊತೆ ವಿಜಯ್ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ಅಭಿಮಾನಿಗಳಿಗೆ ಬೀಪ್ ಸೌಂಡ್ ಬರುತ್ತಿರುವ ಸಮಯದಲ್ಲಿ ಆ ಪದಗಳು ಏನೆಂದು ಹೇಳಿ ಎಂದು ಪ್ರಚೋದಿಸುತ್ತಿದ್ದರು. ಸಿನಿಮಾ ಕಥೆಗೆ ಪಾತ್ರ ಈ ರೀತಿ ಇರಬೇಕು ಎಂದು ಇತ್ತು ಪಾತ್ರವಾಗಿ ಅದು ಓಕೆ ಆದರೆ ರಿಯಲ್ ಲೈಫ್‌ನಲ್ಲಿ ವೀಕ್ಷಕರಿಗೆ ಯಾಕೆ ತಪ್ಪು ದಾರಿ ತೋರಿಸಬೇಕು? ತಾಯಿಯಾಗಿ ನನಗೆ ಈ ಪದಗಳನ್ನು ಕೇಳಿಸಿಕೊಂಡಾಗ ತುಂಬಾ ಬೇಸರವಾಗುತ್ತದೆ. ಈ ವಿಚಾರದ ಬಗ್ಗೆ ವಿಜಯ್ ಜೊತೆ ನೇರವಾಗಿ ಮಾತನಾಡಿದ್ದೀನಿ ದಯವಿಟ್ಟು ರಿಯಲ್ ಲೈಫ್‌ನಲ್ಲಿ ಯಾರಿಗೂ ಇಂತಹ ಪದಗಳನ್ನು ಬಳಸಲು ಪ್ರಚೋದಿಸಬೇಡಿ' ಎಂದು ಅನಸೂಯ ಇಂಡಿಯಾ ಟುಡೇ ಸಂದರ್ಸನದಲ್ಲಿ ಮಾತನಾಡಿದ್ದಾರೆ.
ಅನಸೂಯ ಭಾರದ್ವಾಜ್ ಪ್ರಚಾರ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳನ್ನು ನಿಂದಿಸಲು ಅರ್ಜುನ್ ರೆಡ್ಡಿ ಸಿನಿಮಾ ಸಾಥ್ ಕೊಡುತ್ತಿದೆ, ಪುಟ್ಟ ಮಕ್ಕಳ ದಾರಿ ತಪ್ಪಿಸಿದೆ. ಈ ವಿಚಾರವಾಗಿ ಅನಸೂಯ ಧ್ವನಿ ಎತ್ತಿದಕ್ಕೆ ಟ್ರೋಲ್‌ಗಳನ್ನು ಎದುರಿಸಬೇಕಿತ್ತು.
ಲಿಪ್‌ಕಿಸ್ ಫೋಟೋ ಹರಿಬಿಟ್ಟ ಖ್ಯಾತ ಆ್ಯಂಕರ್ ಅನಸೂಯಾ: ಬೀಚ್‌ನಲ್ಲಿ ಮಸ್ತ್ ಎಂಜಾಯ್
'ಅಭಿಮಾನಿಗಳು ತಮ್ಮ ಸಿನಿಮಾಗಳನ್ನು ನೋಡಿ ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಸರಿ ಮಾಡಬೇಕು ಆಗುತ್ತಿರುವ ಅನಾಹುತವನ್ನು ಒಪ್ಪಿಕೊಳ್ಳಬೇಕು. ಪವರ್ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ನನಗೆ ಸಿಕ್ಕಿರುವ ಪ್ರೀತಿ ಮತ್ತು ಲವರ್‌ನ ಜವಾಬ್ದಾರಿಯಿಂದ ನಡೆಸಿಕೊಂಡು ಹೋಗುತ್ತಿರುವೆ.ಇಲ್ಲ ಅಂದ್ರೆ ಇಂತಹ ವ್ಯಕ್ತಿಗಳನ್ನು ಫಾಲೋ ಮಾಡಬಾರದು' ಎಂದು ಅನಸೂಯ ಟ್ವೀಟ್ ಮಾಡಿದ್ದರು.
'ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ನಿಂದನೆಗಳು ಟ್ರೋಲ್‌ಗಳು ಹೆಚ್ಚಾದಾಗ ಡಿಪ್ರೆಶನ್‌ಗೆ ಜಾರಿದೆ ಆದರೂ ಗಟ್ಟಿಯಾಗಿ ನಿಂತು ಪ್ರತಿಯೊಂದನ್ನು ಎದುರಿಸಿದೆ. 2019ರಲ್ಲಿ ವಿಜಯ್ ದೇವರಕೊಂಡ ತಂದೆ ಮೀಕು ಮಾತ್ರಮ್ ಚೆಪ್ಪು ಸಿನಿಮಾ ನಿರ್ಮಾಣ ಮಾಡುತ್ತಿದ್ದರು ಆಗ ನನಗೆ ಪಾತ್ರವೊಂದನ್ನು ಆಫರ್ ಮಾಡಿದರು. ಅಲ್ಲಿಂದ ಎಲ್ಲವೂ ಸರಿಯಾಗಲು ಶುರುವಾಯಿತ್ತು' ಎಂದು ಅನುಸೂಯ ಹೇಳಿದ್ದಾರೆ.
ಅನಸೂಯಾ ಭಾರದ್ವಾಜ್ ಸಲಿಂಗಕಾಮಿ?; ಪ್ರಶ್ನೆ ಮಾಡಿದವನಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ನಿರೂಪಕಿ
'ಎಲ್ಲವೂ ಕೂಲ್ ಆದ ಮೇಲೆ ವಿಜಯ್ ದೇವರಕೊಂಡ ತಂಡದ ಒಬ್ಬರು ನನಗೆ ತಿಳಿಸಿದ ವಿಚಾರ ದೊಡ್ಡ ಶಾಕ್ ತಂದುಕೊಟ್ಟಿದ್ದು. ನಟನ ಪಬ್ಲಿಸಿಟಿ ನೋಡಿಕೊಳ್ಳುವ ವ್ಯಕ್ತಿ ಹಣ ಕೊಟ್ಟ ನನ್ನನ್ನು ಟ್ರೋಲ್ ಮಾಡುವಂತೆ ಹೇಳಿದ್ದಾರೆ. ಪಬ್ಲಿಸಿಟಿ ನೋಡಿಕೊಳ್ಳುವ ವ್ಯಕ್ತಿ ಈ ರೀತಿ ಮಾಡಿದ್ದಾನೆ ಅಂತ ವಿಜಯ್ ದೇವರಕೊಂಡ ಗಮನದಲ್ಲಿ ಇರುತ್ತದೆ ಅಲ್ವಾ? ಖಂಡಿತಾ ನಟನಿಗೆ ಗೊತ್ತಿಲ್ಲದ ಹಾಗೆ ಆತನ ಹಣ ಬಳಸಿಕೊಂಡು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ ಅನಸೂಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.