
ಬಹುಭಾಷಾ ನಟಿಯೊಬ್ಬರರು ಮಧ್ಯರಾತ್ರಿ ಪ್ರಯಾಣ ಮಾಡುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿ,ಕೆಲವು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ಮಾಡಿದ್ದರು ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈ ಹಲ್ಲೆ ಹಿಂದಿರುವ ವ್ಯಕ್ತಿ ಯಾರೆಂದು ತಿಳಿದು ಬಂದಿದೆ. ಮಲಯಾಳಂನ ಸ್ಟಾರ್ ನಟ ದಿಲೀಪ್ ಕುಮಾರ್ (Dileep Kumar) ಎಂಬುವುದು ಬಹುತೇಕ ಸಾಬೀತು ಆಗಿದೆ.
ಕೆಲವು ದಿನಗಳಿಂದ ನಡೆದ ವಿಚಾರಣೆ ವೇಳೆ ನಟ ದಿಲೀಪ್ ಕುಮಾರ್ ಅಸಲಿ ಮುಖ ಹೊರ ಬಂದಿದೆ. ನಟಿಯರ ಮೇಲೆ ಆತ ತೋರಿಸುತ್ತಿದ್ದ ದುರ್ವರ್ತನೆ ಬೆಳಕಿಗೆ ಬಂದಿದೆ. ಅಲ್ಲದೇ ಕಾರಿನಲ್ಲಿ ಹಲ್ಲೆ ಆಗಿದ್ದು ನನ್ನ ಮೇಲೆ ನ್ಯಾಯಾಲಯ ನನ್ನ ಪರವಿದೆ ಎಂದು ಗಟ್ಟಿ ಧ್ವನಿ ಎತ್ತಿದ್ದಾರೆ ನಟಿ. ಇಡೀ ಮಾಲಿವುಡ್ (Mollywood) ಈ ನಟಿಯ ಪರ ನಿಂತಿರುವ ಕಾರಣ ತನಿಖೆಗೆ ಮತ್ತಷ್ಟು ಚುರುಕು ಸಿಕ್ಕಿದೆ.
2017ರಲ್ಲಿ ದಿಲೀಪ್ ಬಂಧನವಾಗಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಗಟ್ಟಿ ಸಾಕ್ಷಿ ಇಲ್ಲದ ಕಾರಣ ನ್ಯಾಯಲಯವು (Court) ಆತನನ್ನು ಬಿಡುಗಡೆಗೊಳಿಸಿತ್ತು. ಆದರೆ ಈಗ ಪ್ರಮುಖ ಆರೋಪಿ ಪಲ್ಸರ್ ಸುನಿ (Pulsar Suni) ದಿಲೀಪ್ ವಿರುದ್ಧವೇ ಸಾಕ್ಷಿ ಹೇಳಲು ತಯಾರಾಗಿದ್ದಾವೆ ಎನ್ನಲಾಗಿದೆ. ಪಲ್ಸರ್ ಸುನಿ ಸತ್ಯ ಹೇಳಿದರೆ, ದಿಲೀಪ್‌ಗೆ ಕೋರ್ಟ್ ಕಠಿಣ ಸಜೆ ವಿಧಿಸೋದು ಗ್ಯಾರಂಟಿ.
ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿ ತಾನು ಎಲ್ಲ ಸತ್ಯವನ್ನೂ ನ್ಯಾಯಾಲಯದ ಮುಂದೆ ಹೇಳುವುದಾಗಿ ತನ್ನ ತಾಯಿ ಶೋಭಾ (Pulsar Suni mother Shoba) ಅವರ ಬಳಿ ಹೇಳಿದ್ದಾನೆ. ಈ ವಿಚಾರವನ್ನು ಸುನಿ ತಾಯಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
'ನನ್ನ ಮಗ ಸುನಿ ಜೈಲಿನಲ್ಲಿದ್ದರೂ (jail) ಅವನಿಗೆ ಹೊರಗೆ ಏನಾಗುತ್ತಿದೆ, ಎಂಬುದು ಎಲ್ಲವೂ ಗೊತ್ತಿದೆ. ನಿರ್ದೇಶಕ ಬಾಲಚಂದ್ರ ಕುಮಾರ್ ಈ ಪ್ರಕರಣದ ಬಗ್ಗೆ ಹೇಳಿರುವುದೆಲ್ಲವೂ ಸತ್ಯ. ಹೊರಗೆ ಏನೂ ಹೇಳದಂತೆ ನನಗೆ ಮಗ ಹೇಳಿದ್ದಾನೆ. ಹೇಳಿದರೂ ಪ್ರಯೋಜನವಿಲ್ಲ, ಎಂದು ಅವನು ಹೇಳಿದ್ದಾನೆ ಆದರೆ ಅವನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಿರುವ ಬಗ್ಗೆ ಅವನಿಗೂ ದುಃಖವಿದೆ. ಅವನು ಎಲ್ಲಾ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳಲಿದ್ದಾನೆ. ಜೊತೆಗೆ ದಿಲೀಪ್ ದೊಡ್ಡ ಆನೆ. ಅವನೊಟ್ಟಿಗೆ ಕೆಲವು ಅಳಿಲುಗಳು ಇದ್ದವು. ಈಗ ಆನೆ ಇಲ್ಲದ ಕಾರಣ ಅಳಿಲುಗಳು ಒದ್ದಾಡುತ್ತಿವೆ,' ಎಂದು ಒಗಟಿನಂಥ ಮಾತನ್ನು ಶೋಭಾ ಹೇಳಿದ್ದಾರೆ.
ಬಾಲಚಂದ್ರನ್ ಎಂಟ್ರಿ:
ಖ್ಯಾತ ನಿರ್ದೇಶಕ ಬಾಲಚಂದ್ರ ಕುಮಾರ್ (Director Balachandra Kumar) ಅವರು, ಅತ್ಯಾಚಾರ ವಿಚಾರ ಮೊದಲೇ ಗೊತ್ತಿತ್ತು. ಪಲ್ಸರ್ ಸುನಿಗೆ ಹೇಳಿ ನಟಿಗೆ ತೊಂದರೆ ಕೊಡು ಎಂದು ದಿಲೀಪ್ ಹೇಳಿದ್ದ. ಒಂದು ಸಲ ದಿಲೀಪ್ ಪತ್ನಿ ನಡೆಸುವ ಸಂಸ್ಥೆಯಲ್ಲಿ ನಾನು ಪಲ್ಸರ್ ಸುನಿಯನ್ನು ನೋಡಿದ್ದೆ. ಹಾಗೆಯೇ ದಿಲೀಪ್ ಬಳಿ ಅತ್ಯಾಚಾರವೆಸಗಿರುವ ವಿಡಿಯೋ ಇರುವುದನ್ನೂನಾನು ನೋಡಿದ್ದೀನಿ. ಬಾಲಚಂದ್ರ ಕೆಲವೊಂದು ಸತ್ಯಗಳನ್ನು ಬಹಿರಂಗ ಪಡಿಸುತ್ತಿದ್ದಂತೆ, ನಟ ದಿಪೀಲ್ ಕುಮಾರ್ ಹೈಕೋರ್ಟ್‌ನಲ್ಲಿ ಬಾಲಚಂದ್ರ ವಿರುದ್ಧ ಬೆದರಿಕೆ ಪ್ರಕರಣವನ್ನೂ ದಾಖಲಿಸಿದ್ದಾರೆ.
ಪೊಲೀಸರ ಮೇಲೆ ಸಂಚು:
ದಿಲೀಪ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಕಠಿಣ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ದಿಲೀಪ್ ಪೊಲೀಸರನ್ನೇ (Police) ಕೊಲ್ಲಲು ಸಂಚು ಮಾಡಿದ್ದಾರೆ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಗಳನ್ನು ಕೊಲ್ಲಲು ದಿಲೀಪ್ ಸಂಚು ರೂಪಿಸಿದ್ದನೆಂಬ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ನನ್ನನ್ನು ಬಂಧಿಸಿದ್ದರೆ ನಿಮ್ಮ ಕೈ ಕತ್ತರಿಸುವುದಾಗಿಯೂ ದಿಲೀಪ್ ಬೆದರಿಕೆ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.