ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸೀನ್ ಕೊಡಿ: ಅಮೆರಿಕಾಗೆ ಪ್ರಿಯಾಂಕ ಮನವಿ

By Suvarna NewsFirst Published Apr 27, 2021, 9:52 AM IST
Highlights

ಭಾರತದ ಜೊತೆ ವ್ಯಾಕ್ಸೀನ್ ಹಂಚಿಕೊಳ್ಳುವಂತೆ ಕೇಳಿದ ಪಿಗ್ಗಿ | ಅಮೆರಿಕಾಗೆ ದೇಸೀ ಗರ್ಲ್ ಮನವಿ

ವೈರಸ್ ಹರಡುವಿಕೆಯ ಎರಡನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಗಳನ್ನು ಹಂಚಿಕೊಳ್ಳಲು ಪ್ರಿಯಾಂಕ ಚೋಪ್ರಾ ಸಾಮಾಜಿಕ ಮಾಧ್ಯಮಗಳ ಮೂಲಕ ಟ್ರಂಪ್‌ಗೆ ಮನವಿ ಮಾಡಿದ್ದಾರೆ.

ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ, ನನ್ನ ಹೃದಯ ಒಡೆಯುತ್ತದೆ. ಭಾರತವು COVID19 ನಿಂದ ಬಳಲುತ್ತಿದೆ. ಅಮೆರಿಕ ಅಗತ್ಯಕ್ಕಿಂತ 550M ಹೆಚ್ಚಿನ ಲಸಿಕೆಗಳನ್ನು ಆದೇಶಿಸಿದೆ. ಅಸ್ಟ್ರಾಜೆನೆಕಾವನ್ನು ವಿಶ್ವಾದ್ಯಂತ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಆದರೆ ನನ್ನ ದೇಶದ ಪರಿಸ್ಥಿತಿ ನಿರ್ಣಾಯಕವಾಗಿದೆ. ಭಾರತ ದ ಜೊತೆ ನೀವು ತುರ್ತಾಗಿ ಲಸಿಕೆ ಹಂಚಿಕೊಳ್ಳುತ್ತೀರಾ? ಎಂದು ಟ್ವೀಟ್ ಮಾಡಿದ್ದಾರೆ ಪ್ರಿಯಾಂಕ.

ಸಿಟೆಡಾಲ್ ಸೆಟ್‌ನಿಂದ ತನ್ನ ಹೊಸ ಅವತಾರ ರಿವೀಲ್ ಮಾಡಿದ ಪಿಗ್ಗಿ

ಕೊರೋನಾ ವಿರುದ್ಧದ ಹೋರಾಟದಲ್ಲಿ ಅಮೆರಿಕ ಅಧ್ಯಕ್ಷ ಬೈಡನ್ ಭಾರತಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಶ್ವೇತಭವನವು ಘೋಷಿಸಿದ ತುರ್ತು ಸಹಾಯವು ಕೋವಿಡ್ -19 ಲಸಿಕೆಗಳಿಗೆ ಆಮ್ಲಜನಕ ಸರಬರಾಜಿನಿಂದ ಹಿಡಿದು ಲಸಿಕೆ ತಯಾರಿ ಕಚ್ಚಾ ವಸ್ತುಗಳು, ಔಷಧಿ, ಪಿಪಿಇ ಕಿಟ್ ತನಕ ನೆರವು ಒದಗಿಸಲಿದೆ.

 

click me!