ಶೂಟಿಂಗ್ ಆದ್ಮೇಲೆ ಮೂಗು ಕೆರ್ಕೊಳ್ತೀನಿ; 30ರ ಹುಟ್ಟುಹಬ್ಬಕ್ಕೆ 30 ವಿಚಿತ್ರ ಗುಣಗಳನ್ನು ಬಿಚ್ಚಿಟ್ಟ ಆಲಿಯಾ ಭಟ್

Published : Mar 30, 2023, 02:36 PM IST
ಶೂಟಿಂಗ್ ಆದ್ಮೇಲೆ ಮೂಗು ಕೆರ್ಕೊಳ್ತೀನಿ; 30ರ ಹುಟ್ಟುಹಬ್ಬಕ್ಕೆ 30 ವಿಚಿತ್ರ ಗುಣಗಳನ್ನು ಬಿಚ್ಚಿಟ್ಟ ಆಲಿಯಾ ಭಟ್

ಸಾರಾಂಶ

ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ 30 ಗುಟ್ಟುಗಳನ್ನು ರಿವೀಲ್ ಮಾಡಿದ ಆಲಿಯಾ ಭಟ್. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್...

ಬಾಲಿವುಡ್‌ ಗಂಗೂಬಾಯಿ ಆಲಿಯಾ ಭಟ್ ಮಾರ್ಚ್‌ 15ರಂದು 30 ವರ್ಷಕ್ಕೆ ಕಾಲಿಟ್ಟರು. ಪತಿ ರಣಬೀರ್ ಕಪೂರ್ ಮತ್ತು ಸಹೋದರಿ ಶಾಹೀನ್ ಭಟ್ ಜೊತೆ ಲಂಡನ್‌ನಲ್ಲಿ ಒಂದು ವಾರಗಳ ಕಾಲ ಹಬ್ಬ ಮಾಡಿ ಮುಂಬೈಗೆ ಹಿಂತಿರುಗಿದ್ದಾರೆ. ಮುಂಬೈಗೆ ಕಾಲಿಡುತ್ತಿದ್ದಂತೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷವಾದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 30 ವರ್ಷಕ್ಕೆ ಕಾಲಿಟ್ಟಿರುವ ಪ್ರಯುಕ್ತ ತಮ್ಮ ಬಗ್ಗೆ 30 ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

30 ಫನ್ ಫ್ಯಾಕ್ಟ್‌ಗಳು ಇಲ್ಲಿದೆ:

1. ತುಂಬಾ ಆರ್ಗನೈಸ್ ಆಗಿರುವುದಕ್ಕೆ ಇಷ್ಟ ಪಡುತ್ತೀನಿ ಆದರೆ ನಾನು ಮೆಸ್ಸಿ ವ್ಯಕ್ತಿ.

2. ಸಿನಿಮಾ ಶೂಟಿಂಗ್ ಅಥವಾ ಸೆಟ್‌ನಲ್ಲಿ ಚಿತ್ರೀಕರಣ ಮುಗಿದ ನಂತರ ನಾನು ಮೂಗು ಮುಟ್ಟುವ ಅಥವಾ ಕರೆಯುವ ಅಭ್ಯಾಸವಿದೆ.

3. ನನಗೆ ವಿಚಿತ್ರ ಪೆಟ್‌-ಪೀವ್‌ ಇದೆ. ನನಗೆ ಮತ್ತೊಬ್ಬರು ಹಿಂದಿನಿಂದ ಬಂದು ಬೆನ್ನು ಮುಟ್ಟುವುದು ಬೆನ್ನು ತಟ್ಟುವುದು ಅಂದ್ರೆ ಇಷ್ಟನೇ ಆಗಲ್ಲ.

ತೈಮೂರ್‌ ರೀತಿ ನನ್ನ ಫೋಟೋ ಕ್ಲಿಕ್ ಮಾಡ್ತಿಲ್ಲ ಅಂತ ಮಗಳು ದೂರಬಾರದು: ಕರೀನಾ ಕಪೂರ್‌ಗೆ ಟಾಂಗ್‌ ಕೊಟ್ಟ ರಣಬೀರ್‌

4. ಶಾಪಿಂಗ್ ಮಾಡುವುದು ಅಂದ್ರೆ ಇಷ್ಟಾನೇ ಇಲ್ಲ. ಒಂದು ಪಕ್ಷ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಮನಸ್ಸು ಮಾಡುವೆ ಆದರೆ ಅಂಗಡಿಗೆ ಹೋಗಿ ಮಾಡುವುದಕ್ಕೆ ಇಷ್ಟವಿಲ್ಲ. ಒಂದು ವೇಳೆ ಶಾಪಿಂಗ್ ಮಾಡಿದ್ದರೂ ತಾಳ್ಮೆ ಕೆಟ್ಟಿ ಆ ಬಟ್ಟೆ ಅಲ್ಲೇ ಬಿಟ್ಟು ಬರುವೆ.

5. ತುಂಬಾ ವಿಚಿತ್ರ ಪ್ರಶ್ನೆಗಳು ನನ್ನ ತಲೆಯಲ್ಲಿ ಹುಟ್ಟಿಕೊಳ್ಳುತ್ತದೆ ಅದನ್ನು ನನ್ನ ಸಹೋದರಿಗೆ ಕೇಳಿ ಆಕೆಯಿಂದ ಉತ್ತರ ನಿರೀಕ್ಷೆ ಮಾಡುವೆ. ಈ ಗುಣ ಎಲ್ಲರಿಗೂ ಕಿರಿಕಿರಿ ಮಾಡುತ್ತದೆ.

6. ನನಗೆ ಕಣ್ಣು ಹೊಡೆಯುವುದಕ್ಕೆ ಬರಲ್ಲ. 

7. ನಾನು ಮಾರ್ನಿಂಗ್ ಪರ್ಸನ್‌. ಬೆಳಗ್ಗೆ ದಿನವನ್ನು ಬೇಗ ಆರಂಭಿಸಲು ಇಷ್ಟ ಪಡುತ್ತೀನಿ. 

8. ನನಗೆ ಬೇಸರ ಆದಾಗ ದುಖಃದಲ್ಲಿ ಇದ್ದಾಗ ಫ್ರೆಂಡ್ಸ್‌ ಎಪಿಸೋಡ್ ನೋಡಿದರೆ ಖುಷಿಯಾಗಿರುತ್ತೀನಿ.

ನೆರೆ ಮನೆಯಿಂದ ಆಲಿಯಾ ಭಟ್ ಖಾಸಗಿ ಫೋಟೋ ಕ್ಲಿಕ್ ಮಾಡಿದ ಮಾಧ್ಯಮ; ತಿರುಗಿ ಬಿದ್ದ ಬಿ-ಟೌನ್ ಮಂದಿ

9 + 10 +11. ನನಗೆ ಕಾಲು ಬೆರಳುಗಳು, ಕೈ ಬೆರಳುಗಳು ಹಾಗೂ ಕಿವಿ ಕ್ಲೀನ್ ಮಾಡಿಕೊಳ್ಳುವುದಕ್ಕೆ ಇಷ್ಟ ಪಡುತ್ತೀನಿ. ಸದಾ ಕ್ಲೀನ್ ಆಗಿರಬೇಕು. 

12. ನಾನು ಈ ಕ್ಷಣದಲ್ಲಿ ಇರುವುದಿಲ್ಲ. ಸದಾ ಏನಾದರೂ ಯೋಚನೆ ಮಾಡುತ್ತಿರುತ್ತೀನಿ ಯಾವುದಾದರೂ ವಿಚಾರ ತಲೆಯಲ್ಲಿ ಓಡುತ್ತಿರುತ್ತದೆ.

13. ನನಗೆ ಕೆಲವೊಂದು ನಂಬರ್‌ಗಳು ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ಅದರಲ್ಲೂ 6, 9, 1 ಮತ್ತು 8 ನನಗೆ ಸಿಕ್ಕಾಪಟ್ಟೆ ಲಕ್ಕಿ.

14. ನನಗೆ ನೀರು ಅಂದ್ರೆ ತುಂಬಾನೇ ಇಷ್ಟ. ಅದರಲ್ಲೂ ಐಸ್‌ ನೀರಿಲ್ಲಿ ಮುಖ ಇಡುವುದು ಅಂದ್ರೆ ಪಂಚ ಪ್ರಾಣ.

15. ಪುಸ್ತಕ ಓದುವುದು ಅಂದ್ರೆ ತುಂಬಾನೇ ಇಷ್ಟ. ಆದರೆ ಓಡುವುದರಿಂದ ನನಗೆ ನಿದ್ರೆ ಹೆಚ್ಚಿಗೆ ಬರುತ್ತದೆ.

16. ನನಗೆ ಕತ್ತಲು ಕೋಣೆಗಳು ಅಂದ್ರೆ ಸಿಕ್ಕಾಪಟ್ಟೆ ಭಯ

ಹೀಗೆ ತಮ್ಮ ಯುಟ್ಯೂಬ್ ಚಾನೆಲ್‌ಗನಲ್ಲಿ ಒಟ್ಟು 30 ಗುಟ್ಟು ರಟ್ಟು ಮಾಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!