ಸದ್ಯ ಹಾಲಿವುಡ್‌ನಲ್ಲಿ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾರಿಗೆ ಶೂಟಿಂಗ್ ವೇಳೆ ಇರಿದ ಗಾಯವಾಗಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
ಸದ್ಯ ಬಾಲಿವುಡ್ ಬಿಟ್ಟು ಹಾಲಿವುಡ್‌ನಲ್ಲಿ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರಿಗೆ ಶೂಟಿಂಗ್ ವೇಳೆ ಇರಿತವಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹಾಲಿವುಡ್‌ನ ‘ದಿ ಬ್ಲಫ್’ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಗಂಟಲಿನ ಹೊರಭಾಗದಲ್ಲಿ ಸೀಳಾಗಿರುವುದನ್ನು ನೋಡಬಹುದು. ಈ ಮಾಹಿತಿಯನ್ನು ಖುದ್ದು ನಟಿಯೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ವೃತ್ತಿ ಜೀವನದಲ್ಲಿ ಎದುರಾಗುವ ಅಪಾಯಗಳು’ ಎಂದು ನಟಿ ಬರೆದುಕೊಂಡಿದ್ದಾರೆ. ಸ್ಟಂಟ್ ಮಾಡುವಾಗ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ‘ಸಿಟಾಡೆಲ್ ‘ ವೆಬ್ ಸರಣಿಯ ಚಿತ್ರೀಕರಣದ ವೇಳೆ ಕೂಡ ನಟಿ ಇದೇ ರೀತಿ ಗಾಯ ಮಾಡಿಕೊಂಡಿದ್ದರು. ಆಗ ಎಡಹುಬ್ಬಿನ ಮೇಲೆ ಕತ್ತರಿಸಿದ ಗಾಯವಾಗಿತ್ತು. ಆಗಲೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.
ಹಾಲಿವುಡ್ ನಿರ್ದೇಶಕ ಫ್ರಾಂಕ್ ಇ. ಫ್ಲವರ್ಸ್ ನಿರ್ದೇಶನದಲ್ಲಿ ‘ದಿ ಬ್ಲಫ್’ ಚಿತ್ರ ಬರುತ್ತಿದೆ. ಇದರಲ್ಲಿ ಪ್ರಿಯಾಂಕಾ ನಾಯಕಿಯಾಗಿದ್ದು, ಕಾರ್ಲ್ ಅರ್ಬನ್, ಇಸ್ಮಾಯೆಲ್ ಕ್ರೂಜ್ ಕಾರ್ಡೋವಾ, ನಟಿ ಸಫಿಯಾ ಓಕ್ಲೆ ಗ್ರೀನ್ ಮುಂತಾದವರು ಚಿತ್ರದಲ್ಲಿದ್ದಾರೆ. ಅಂದಹಾಗೆ ಈ ಚಿತ್ರದ ಶೂಟಿಂಗ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಚಿತ್ರವು ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಮಳೆಗಾಲದಲ್ಲಿ ಡೆಲಿವರಿ ಬಾಯ್ನ ನೆನೆದ ನಟಿ ಪರಿಣಿತಿ ಚೋಪ್ರಾ! ನಾಚಿಕೆಯಾಗ್ಬೇಕು ಅಂದ ನೆಟ್ಟಿಗರು
‘ದಿ ಬ್ಲಫ್’ ಮಾಜಿ ಮಹಿಳಾ ದರೋಡೆಕೋರರ ಕಥೆಯ ಹಿನ್ನೆಲೆ ಇರುವ ಸಿನಿಮಾವಾಗಿದೆ. ಇದರಲ್ಲಿ ನಟಿ ದರೋಡೆಕೋರರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದರೋಡೆಕೋರ ಮಹಿಳೆಗೆ ತಾನು ಹಿಂದೆ ಮಾಡಿದಂತಹ ಪಾಪಗಳು ಬಂದು ಕಾಡಲು ಶುರುಮಾಡಿದಾಗ ಅದರಿಂದ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯಾಣವನ್ನು ಪ್ರಾರಂಭಿಸುತ್ತಾಳೆ. ಈ ಚಿತ್ರವನ್ನು ಎಜಿಬಿಒ ನ ಆಂಥೋನಿ ರುಸ್ಸೋ, ಜೋ ರುಸ್ಸೋ, ಏಂಜೆಲಾ ರುಸ್ಸೋ-ಓಟ್ ಸ್ಟಾಟ್ ಮತ್ತು ಮೈಕಲ್ ಡಿಸ್ಕೋ ನಿರ್ಮಿಸಿದ್ದಾರೆ.
ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ಪತಿ ನಿಕ್ ಜೋನಸ್ ಜೊತೆ ಹಾಗೂ ಪುಟ್ಟ ಮಗಳ ಜೊತೆ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ನಟಿ, ನನ್ನ ಮತ್ತು ನಿಕ್ ನಡುವೆ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ನಿಕ್‌ಗೆ (Nick Jonas) 1990ರ ದಶಕದ ಹಲವು ಸಂಗತಿಗಳು ಗೊತ್ತಿಲ್ಲ. ನಾನು ಅದನ್ನು ಅವರಿಗೆ ಹೇಳುತ್ತಿರುವೆ. ಹಾಗೇ, ನನಗೆ ಟಿಕ್‌ಟಾಕ್ ಗೊತ್ತಿಲ್ಲ, ಅದನ್ನು ನಿಕ್ ನನಗೆ ಕಲಿಸುತ್ತಿದ್ದಾರೆ. ಈ ರೀತಿಯಲ್ಲಿ ನಾವು ಒಬ್ಬರಿಗೊಬ್ಬರು ಕಲಿಸುತ್ತ, ಕಲಿಯುತ್ತ ಚೆನ್ನಾಗಿ ಪರಸ್ಪರ ಅರ್ಥ ಮಾಡಿಕೊಂಡು ಹಾಯಾಗಿ ಲೈಫ್ ಲೀಡ್ ಮಾಡುತ್ತಿದ್ದೇವೆ' ಎಂದಿದ್ದರು.
ಅಮ್ಮನ ಕೈಯಲ್ಲಿ ಸಿಕ್ಕಿಬಿದ್ದ ಸೀತಾಗೆ ಈ ಶಿಕ್ಷೆ! ನಿಂಗಿದು ಬೇಕಿತ್ತಾ ಮಗಳೇ ಎಂದ ಫ್ಯಾನ್ಸ್...