
ಪ್ರಿಯಾಂಕಾ ಚೋಪ್ರಾ ಅವರ ಎಲ್ಲಾ ಅಭಿಮಾನಿಗಳಿಗೆ ನಿಜಕ್ಕೂ ಆಘಾತಕಾರಿ ಸುದ್ದಿ ಬಂದಿದೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಗಾಯಮಾಡಿಕೊಂಡ ಬೆನ್ನಲ್ಲೇ ದೇಸಿ ಗರ್ಲ್ ಕೂಡಾ ಗಾಯ ಮಾಡಿಕೊಂಡಿದ್ದಾರೆ. ಸಿಟೆಡಾಲ್ ಶೂಟಿಂಗ್ ಸೆಟ್‌ನಲ್ಲಿ ನಡೆದಿರೋ ಘಟನೆ ಇದು.
ನಟಿ ಪ್ರಿಯಾಂಕ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯ ಪ್ರಕಾರ ನಟಿ ಸಿಟೆಡೆಲ್ ಸೆಟ್ ನಲ್ಲಿ ತನ್ನನ್ನು ತಾನು ಗಾಯ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳನ್ನು ತೀವ್ರವಾಗಿ ಚಿಂತೆಗೀಡು ಮಾಡಿದೆ.
ಚಿತ್ರೀಕರಣದ ವೇಳೆ ಅವಘಡ; ಆಸ್ಪತ್ರೆಗೆ ದಾಖಲಾದ ಅಭಿಷೇಕ್ ಬಚ್ಚನ್!
ಸಿಟೆಡೆಲ್ ಶೂಟಿಂಗ್ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾ ಸ್ವತಃ ಗಾಯಗೊಂಡರು. ಹಿಂದಿನ ದಿನ ನಟಿ ರಕ್ತಸಿಕ್ತ ಮುಖದೊಂದಿಗೆ ಪೋಸ್ ನೀಡಿದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ 'ಯಾವುದು ನಿಜ ಮತ್ತು ಯಾವುದು ಅಲ್ಲ?' ಎಂದು ಹೇಳಿದ್ದು ನಟಿಯ ಹುಬ್ಬಿನ ಮೇಲೆ ಗಾಯವಾಗಿತ್ತು.
ಕೆಲವು ಗಂಟೆಗಳ ನಂತರ ನಟಿ ಆಕೆಯ ಅಭಿಮಾನಿಯ ಉತ್ತರವನ್ನು ಅವಳು ಹಂಚಿಕೊಂಡಿದ್ದಾರೆ. ಆಕೆಯ ಕೆನ್ನೆಯ ಮೇಲಿನ ಗಾಯವು ನಿಜವೆಂದು ಭಾವಿಸಿದಾಗ ಆಕೆಯ ಹಣೆಯ ಮೇಲೆ ಕಟ್ ಆಗಿಲ್ಲ. ಪ್ರಿಯಾಂಕಾ ಥಂಬ್ಸ್ ಡೌನ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆಕೆಯ ಹುಬ್ಬಿನ ಮೇಲಿನ ಏಟು ನಿಜ ಎಂದು ಬಹಿರಂಗಪಡಿಸಿದ್ದಾರೆ. ನಟಿ ತನ್ನ ಗಾಯದ ಮೇಲೆ ಝೂಮ್ ಮಾಡಿದ್ದಾರೆ, ಆಕೆಯ ಬಲ ಹುಬ್ಬಿನ ಮಧ್ಯದಲ್ಲಿಯೇ ಗಾಯವಾಗಿದೆ ಎಂದು ನಟಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.