6 ಫ್ಲಾಪ್ ಕೊಟ್ರೂ ಮುಚ್ಕೊಂಡು ಇವ್ರು ಸಿನಿಮಾ ನೋಡ್ಬೇಕು: ರಜನಿಕಾಂತ್- ಚಿರಂಜೀವಿ ಬಗ್ಗೆ ವಿಜಯ್ ದೇವರಕೊಂಡ ಕೊಂಕು

Published : Aug 22, 2023, 10:31 AM IST
6 ಫ್ಲಾಪ್ ಕೊಟ್ರೂ ಮುಚ್ಕೊಂಡು ಇವ್ರು ಸಿನಿಮಾ ನೋಡ್ಬೇಕು: ರಜನಿಕಾಂತ್- ಚಿರಂಜೀವಿ ಬಗ್ಗೆ ವಿಜಯ್ ದೇವರಕೊಂಡ ಕೊಂಕು

ಸಾರಾಂಶ

ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋತರು ಇವರು ಸೂಪರ್ ಹಿಟ್ ಸ್ಟಾರ್‌ಗಳು. ಚಿರಂಜೀವಿ ಮತ್ತು ರಜನಿಕಾಂತ್ ಬಗ್ಗೆ ವಿಜಯ್ ದೇವರಕೊಂಡ ಮಾತು ....

ವಿಜಯ್ ದೇವರಕೊಂಡ ಮತ್ತು ಸಮಂತಾ ನಟಿಸಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ದೇಶಾದ್ಯಂತ ಬಿಡುಗಡೆ ಕಾಣಲಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಈ ಜೋಡಿ ಈಗಾಗಲೆ ಸಾಕಷ್ಟು ವಿಚಾರಗಳಿಗೆ ಸಖತ್ ಟ್ರೋಲ್ ಆಗಿದ್ದಾರೆ ಹಾಗೂ ಕೆಲವೊಂದು ವಿಚಾರಕ್ಕೆ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಈಗ ಸಿನಿ ಜಗತಿನಲ್ಲಿ ನಡೆಯುತ್ತಿರುವ ಗಾಸಿಪ್‌ ಬಗ್ಗೆ ಕಾಮೆಂಟ್ ಮಾಡಿದ ವಿಜಯ್ ದೇವರಕೊಂಡ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 

ಹೌದು! ತಲೈವಾ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಆಗಸ್ಟ್‌ 10ರಂದು ಬಿಡುಗಡೆಯಾಗಿ ಈಗಾಗಲೆ 11 ದಿನ ಯಶಸ್ವಿ ಪ್ರದರ್ಶನ ಕೊಟ್ಟು 500 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಸಮಯದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಭೋಳ ಶಂಕರ್ ಸಿನಿಮಾ ಮೊದಲ ದಿನವೇ ಹೀನಾಯವಾಗಿ ಸೋತಿದೆ. 2015ರಲ್ಲಿ ತೆರೆ ಕಂಡ ವೇದಾಲಂ ಸಿನಿಮಾದ ರಿಮೇಕ್ ಸಿನಿಮಾ ಈ ಭೋಳ ಶಂಕರ್ ಹೀಗಾಗಿ ಜನರಿಗೆ ಅಷ್ಟಾಗಿ ಕ್ಯೂರಿಯಾಸಿಟಿ ಅಲ್ಲ ಅನ್ಸುತ್ತೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಿಟ್ ಆಂಡ್ ಫ್ಲಾಪ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. 

ವಿಜಯ್ ರಾಘವೇಂದ್ರ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಮರು ಪ್ರಶ್ನೆ ಹಾಕಿದ ವಿಜಯ್ ದೇವರಕೊಂಡ!

'ರಜನಿಕಾಂತ್ ಮತ್ತು ಚಿರಂಜೀವಿ ...ಅವರೆಲ್ಲಾ ಹಿಟ್ ಹಾಗೂ ಫ್ಲಾಪ್ ಅನ್ನೂ ಮೀರಿದಂಹತ ಸೂಪರ್ ಸ್ಟಾರ್‌ಗಳು. ರಜನಿ ಸರ್ ಅವರು ಸತತವಾಗಿ 6 ಫ್ಲಾಪ್ ಚಿತ್ರಗಳನ್ನು ನೀಡಡಬಹುದು ಆದರೂ ಅವರ ಜೈಲರ್ ಸಿನಿಮಾ 500 ಕೋಟಿ ಕೆಲೆಕ್ಷನ್ ಮಾಡಿ ತೋರಿಸಿದ್ದಾರೆ. ಅದನ್ನು ನಾವೆಲಾ ಮುಚ್ಕೊಂಡು ನೋಡಬೇಕು. ಅದೇ ರೀತಿ ಚಿರಂಜೀವಿ ಸರ್ ಸಹ ಸತತ ಆರೇಳು ಫ್ಲಾಪ್ ಸಿನಿಮಾಗಳನ್ನು ಹೊಂದಿರಬಹುದು ಆದರೆ ಅವರು ಸರಿಯಾಗಿ ಯೋಚಿಸಿ ಚಿತ್ರ ಮಾಡಿದರೆ ಈ ಬಾರಿ ಸಂಕ್ರಾಂತಿ ಅಷ್ಟರಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಚಿತ್ರ ಕೊಡುತ್ತಾರೆ. ಸರಿಯಾದ ನಿರ್ದೇಶಕರು ಸಿಕ್ಕರೆ ಅವರ ಎನರ್ಜಿಯನ್ನು ಮ್ಯಾಚ್ ಮಾಡಿದರೆ ಒಳ್ಳೆಯ ಚಿತ್ರ ಬರುತ್ತೆ' ಎಂದು ಖುಷಿ ಪ್ರೆಸ್‌ಮೀಟ್‌ನಲ್ಲಿ ವಿಜಯ್ ದೇವರಕೊಂಡ  ಹೇಳಿದ್ದಾರೆ.

ದುಡ್ಡು ಕೊಟ್ಟು ನಟಿ ಅನಸೂಯ ಭಾರದ್ವಾಜ್ ಮಾನ ಕಳೆದ ಸ್ಟಾರ್ ನಟ; ವಿಜಯ್ ದೇವರಕೊಂಡ ವಿರುದ್ಧ ಗರಂ!

ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ಸಿನಿಮಾ ಹಿಟ್ ಆಯ್ತು ಅಂತ ಮೆರೆಯೇಬೇಡ...ಚಿರಂಜೀವಿ ಮಾಡಿರುವ ಒಂದೆರಡು ಸಿನಿಮಾ ಎನರ್ಜಿ ಕೂಡ ನಿನಗಿಲ್ಲ ಸುಮ್ಮನೆ ಮಾತನಾಡಬೇಡ. ಸೀನಿಯರ್ಸ್‌ಗೆ ಗೌರವ ಕೊಡದಿದ್ದರೆ ಹೊರ ಕಳುಹಿಸಿ ಬಿಡುತ್ತೀವಿ ಹುಷಾರ ಎಂದು ಫ್ಯಾನ್ಸ್‌ಗಳು ವಾರ್ನಿಂಗ್ ಕೊಟ್ಟಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!