ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್, ತುಂಬು ಗರ್ಭಿಣಿಯಾಗಿದ್ದರೂ ಕೂಡ ತಮ್ಮ ಮುಂಬರುವ ಚಿತ್ರದ ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಮಿಲನಾ, ತಮ್ಮ ಕೆಲಸಗಳನ್ನು ಪೂರ್ಣಗೊಳಿಸುವ ತವಕದಲ್ಲಿದ್ದಾರೆ.
ಸ್ಯಾಂಡಲ್ವುಡ್ ನ ನಟಿ, ತುಂಬು ಗರ್ಭಿಣಿ ಮಿಲನಾ ನಾಗರಾಜ್ (Sandalwood actress Milana Nagaraj ) ಪ್ರೆಗ್ನೆನ್ಸಿ ಟೈಂನಲ್ಲೂ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಅವರು ತಮ್ಮ ಮುಂದಿನ ಚಿತ್ರದ ಡಬ್ಬಿಂಗ್ ಮಾಡ್ತಿದ್ದಾರೆ. ಸ್ಯಾಂಡಲ್ವುಡ್ ಕ್ಯೂಟ್ ಜೋಡಿ (cute couple) , ಲವ್ ಮಾಕ್ಟೇಲ್ (Love Mocktail) ಮೂಲಕ ಅಭಿಮಾನಿಗಳ ಗಮನ ಸೆಳೆದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ (Darling Krishna) ಮಗುವಿನ ನಿರೀಕ್ಷೆಯಲ್ಲಿದ್ದು, ಸೆಪ್ಟೆಂಬರ್ ಮೊದಲ ವಾರ, ಅವರ ಮನೆಗೆ ಮುದ್ದಾದ ಅತಿಥಿಯ ಆಗಮನವಾಗಲಿದೆ. ಹೆರಿಗೆ ನಂತ್ರ ಬ್ಯುಸಿಯಾಗುವ ಮಿಲನ ಈಗ್ಲೇ ತಮ್ಮ ಕೆಲಸ ಪೂರ್ತಿ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾ (Social Media ) ದಲ್ಲಿ ಡಬ್ಬಿಂಗ್ ವಿಡಿಯೋ (dubbing video) ವನ್ನು ಮಿಲನ ನಾಗರಾಜ್ ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಬ್ಬಿಂಗ್ ಮಾಡ್ತಿರುವ ವಿಡಿಯೋ ಹಂಚಿಕೊಂಡಿರುವ ಮಿಲನಾ, ನೆಕ್ಟ್ಸ್ ರಿಲೀಸ್ ಆಗಲಿರುವ ಆರಾಮ್ ಅರವಿಂದ್ ಸ್ವಾಮಿ (Aram Arvind Swamy) ಚಿತ್ರದ ಡಬ್ಬಿಂಗ್ ಮುಗಿಸಿದ್ದೇನೆ. ಶೀಘ್ರವೇ ಚಿತ್ರ ತೆರೆಕಾಣಲಿದೆ ಎಂದು ಶೀರ್ಷಿಕೆ ಹಾಕಿದ್ದಾರೆ. ಬ್ಲಾಕ್ ಕಲರ್ ಡ್ರೆಸ್ ಧರಿಸಿರುವ ಮಿಲನಾ, ಖುರ್ಚಿ ಮೇಲೆ ಕುಳಿತು ಡಬ್ಬಿಂಗ್ ಕೆಲಸ ಮಾಡ್ತಿದ್ದಾರೆ.
ಮತ್ತೊಂದು ಸಮಾಜ ಮುಖಿ ಕಾರ್ಯಕ್ಕೆ ಮುಂದಾದ ಸಂಯುಕ್ತಾ ಹೊರನಾಡು, ಹುಲಿ ರಕ್ಷಣೆಗೆ ಮುಂದಾದ ಲೈಫ್ ಇಷ್ಟೆನೆ ನಟಿ
ಮಿಲನಾ ಈ ಡಬ್ಬಿಂಗ್ ವಿಡಿಯೋ ನೋಡಿದ ಅಭಿಮಾನಿಗಳು, ಮಿಲನಾ ಡೆಡಿಕೇಷನ್ ಗೆ ಶಹಬ್ಬಾಸ್ ಹೇಳಿದ್ದಾರೆ. ಈ ಪೋಸ್ಟ್ ನಲ್ಲಿ ಬಹುತೇಕರು ಮಿಲನಾ ಹಾಗೂ ಕೃಷ್ಣ ದಂಪತಿಗೆ ಯಾವ ಮಗು ಅನ್ನೋದನ್ನು ಗೆಸ್ ಮಾಡೋದ್ರಲ್ಲಿ ಕಳೆದಿದ್ದಾರೆ. ಮಿಲನಾ ಅವರಿಗೆ ಗಂಡು ಮಗುವೇ ಹುಟ್ಟೋದು ಅಂತ ಭವಿಷ್ಯ ನುಡಿದಿದ್ದಾರೆ ಬಹುತೇಕ ಅಭಿಮಾನಿಗಳು.
ಗರ್ಭಿಣಿಯಾದಾಗಿನಿಂದ್ಲೂ ಮಿಲನಾ ನಾಗರಾಜ್ ವಿಶ್ರಾಂತಿ ಪಡೆದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು, ತಮ್ಮ ಅನೇಕ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಬೇಬಿಮೂನ್ (Babymoon) ಅಂತ ವಿದೇಶಕ್ಕೆ ಹೋಗಿದ್ದ ಮಿಲನಾ – ಕೃಷ್ಣ ನಂತ್ರ ಬೇಬಿ ಬಂಪ್ ಫೋಟೋ ಶೂಟ್ (Photo Shoot) ಮಾಡಿಸಿದ್ದರು. ಭಿನ್ನ ಶೈಲಿಯಲ್ಲಿ ಅವರ ಫೋಟೋ ಶೂಟ್ ನಡೆದಿತ್ತು. ಕ್ಯಾಂಡಲ್ ಲೈಟ್ ಮತ್ತು ಕ್ವೀನ್ ಥೀಮ್ ನಲ್ಲಿ ಫೋಟೋ ಶೂಟ್ ಗಮನ ಸೆಳೆದಿತ್ತು.
ಮೂರು ವಾರದ ಹಿಂದೆ ಅದ್ಧೂರಿಯಾಗಿ ಸೀಮಂತ ಸಮಾರಂಭ ಕೂಡ ನಡೆದಿದೆ. ಇದ್ರ ಫೋಟೋಗಳನ್ನು ಮಿಲನಾ ನಾಗರಾಜ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿರುವ ಮಿಲನಾ ನಾಗರಾಜ್, ವರ್ಕ್ ಔಟ್ ಮಾಡುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಯೋಗ, ಪ್ರಾಣಾಯಾಮ ಮಾಡುತ್ತಿರುವ ಅವರು, ಕೆಲ ಆಸನಗಳನ್ನು ಮಾಡ್ತಿದ್ದ ವಿಡಿಯೋ ಹಂಚಿಕೊಂಡಿದ್ದರು.
ಮಿಲನಾ ನಾಗರಾಜ್, ತಾವು ಗರ್ಭಿಣಿ ಎಂಬ ಸಂಗತಿಯನ್ನು ಕೂಡ ಇನ್ಸ್ಟಾಗ್ರಾಮ್ ಮೂಲಕವೇ ಅಭಿಮಾನಿಗಳಿಗೆ ತಿಳಿಸಿದ್ದರು. ಆರು ವರ್ಷ ಪ್ರೀತಿಸಿ, 2021ರಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಕೈ ಹಿಡಿದಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾದ ಜೋಡಿ ಈಗ ಚೊಚ್ಚಲ ಮಗುವಿಗಾಗಿ ಕಾಯ್ತಿದ್ದಾರೆ. ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ನಲ್ಲೂ ಸುಂದರ ಜೋಡಿಯನ್ನು ಮೆಚ್ಚಿಕೊಂಡಿರುವ ಕನ್ನಡಿಗರು ಈಗ ಮಗುವನ್ನು ನೋಡಲು ಕಾತರರಾಗಿದ್ದಾರೆ.
ದುರ್ಯೋಧನ ಪಾತ್ರವೇ ದರ್ಶನ್ ಅಹಂಕಾರಕ್ಕೆ ಕಾರಣ ಎಂದ ಹಳ್ಳಿ ಜನ?; ಸರ್ಪ ತಿಲಕದಿಂದ ತಪ್ಪದ ಸಂಕಷ್ಟ!
ಇನ್ನು ಮಿಲನಾ ನಾಗರಾಜ್ ನಟಿಸಿರುವ ಮುಂದಿನ ಚಿತ್ರ ಆರಾಮ್ ಅರವಿಂದ್ ಸ್ವಾಮಿ ಶೀಘ್ರವೇ ಬಿಡಗಡೆಯಾಗಲಿದೆ. ಈ ಚಿತ್ರದಲ್ಲಿ ನಟ ಅನೀಶ್ ತೇಜೇಶ್ವರ್ (Anish Tejeshwar) ನಟಿಸಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಶೆಟ್ಟಿ ನಿರ್ದೇಶನ ಮಾಡಿದ್ದು, ರೋಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ಜೊತೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಬ್ಬಿಂಗ್, ಪ್ರಮೋಷನ್ ಸೇರಿದಂತೆ ಚಿತ್ರದ ಎಲ್ಲ ಕೆಲಸ ವೇಗವಾಗಿ ನಡೆಯುತ್ತಿದ್ದು, ಈ ವರ್ಷಾಂತ್ಯದಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.