
ಟಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ (Prathyusha Garimella) ಹೈದರಾಬಾದ್‌ನ (hyderabad) ಬಂಜಾರಾ ಹಿಲ್ಸ್‌ನಲ್ಲಿರುವ (Banjara Hills ) ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಜೂನ್ 11ರಂದು ಪ್ರತ್ಯುಶಾ ಶವ ಬಾತ್ ರೂಮ್ ನಲ್ಲಿ ಪತ್ತೆಯಾಗಿದ್ದು ಅನೇಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಅಸಹಜ ಸಾವು ಎಂದು ದಾಖಲಾಗಿತ್ತು ಬಳಿಕ ಪ್ರತ್ಯುಶಾ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪೊಲೀಸರು ದೃಢಪಡಿಸಿದರು.
ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಪ್ರತ್ಯುಶಾ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರವುದಾಗಿ ದೃಢಪಟ್ಟಿದೆ. ಅಲ್ಲದೆ ಪ್ರತ್ಯುಶಾ ಕೋಣೆಯಲ್ಲಿ
ಕಾರ್ಬನ್ ಮಾನಾಕ್ಸೈಡ್ (carbon monoxide) ಬಾಟಲ್ ಪತ್ತೆಯಾಗಿದ್ದು ಇದನ್ನು ತೆಗೆದುಕೊಂಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನುವುದು ಬಹಿರಂಗವಾಗಿದೆ.
ಮೊಬೈಲ್‌ನಲ್ಲಿ ಸಾವಿನ ಬಗ್ಗೆ ಹಚ್ಚು ಸರ್ಚ್ ಮಾಡಿದ್ದ ಪ್ರತ್ಯುಶಾ
ಕಳೆದ ಕೆಲವು ದಿನಗಳಿಂದ ಸಾವಿನ ಬಗ್ಗೆಯೇ ಹೆಚ್ಚಾಗಿ ಸ್ನೇಹಿತರ ಬಳಿಕ ಮಾತನಾಡಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಲ್ಲದೇ ಮೊಬೈಲ್ ಹಿಸ್ಟರಿಯಲ್ಲೂ ಆಕೆ ಸಾವಿನ ಬಗ್ಗೆ ಹೆಚ್ಚಾಗಿ ಸರ್ಚ್ ಮಾಡಿದ್ದರು ಎನ್ನಲಾಗಿದೆ. ನೋವಿಲ್ಲದೇ ಸಾಯುವುದು ಹೇಗೆ, ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಸರ್ಚ್ ಮಾಡಿರುವ ಮಾಹಿತಿ ಬಹಿರಂಗವಾಗಿದೆ.
ಪ್ರತ್ಯುಶಾ 10 ದಿನಗಳ ಮೊದಲೇ ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿ ನಡೆಸಿದ್ದರು ಎನ್ನುವ ಶಾಕಿಂಗ್ ವಿಚಾರ ರಿವೀಲ್ ಆಗಿದೆ. ಸದ್ಯ ಪ್ರತ್ಯುಶಾ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದ್ದು ಅನ್ ಲಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮೊಬೈಲ್ ಅನ್ ಲಾಕ್ ಮಾಡಿದ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ. 35 ವರ್ಷದ ಫ್ಯಾಶನ್ ಡಿಸೈನರ್ ಪ್ರತ್ಯುಶಾ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಆತ್ಮಹತ್ಯೆ!
ಅಮೆರಿಕದಲ್ಲಿ ಫ್ಯಾಷನ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದ ಪ್ರತ್ಯುಶಾ, ಹೈದರಾಬಾದ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. 2013ರಲ್ಲಿ ತಮ್ಮನೇ ಹೆಸರಿನಲ್ಲಿ ಫ್ಯಾಷನ್ ಲೇಬಲ್ ಪ್ರಾರಂಭ ಮಾಡಿದ ಬಳಿಕ ಆಕೆ ಯಶ್ಸಸಿನ ಉತ್ತುಂಗಕ್ಕೇರಿದ್ದರು. ಟಾಲಿವುಡ್ ನ ಹಲವಾರು ಜನಪ್ರಿಯ ಸೆಲೆಬ್ರಿಟಿಗಳು, ಬಾಲಿವುಡ್ ನ ಕೆಲ ಪ್ರಖ್ಯಾತರ ಜೊತೆಗೂ ಆಕೆ ಕೆಲಸ ಮಾಡಿದ್ದು. ಈಕೆಯ ಕ್ಲೈಂಟ್ ಲಿಸ್ಟ್ ನಲ್ಲಿ ದೇಶದ ಕೆಲ ಗಣ್ಯವ್ಯಕ್ತಿಗಳ ಹೆಸರೂ ಇದ್ದವು. ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ವರ್ಷ, ಪ್ರತ್ಯುಶಾ ಫೆಮಿನಾ (Femina) ಮ್ಯಾಗಜೀನ್‌ಗೆ ನೀಡಿದ್ದ ಸಂದರ್ಶನದಲ್ಲಿ, ತನ್ನ ಫ್ಯಾಶನ್ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಮಾಸ್ಟರ್ಸ್ ಸಲುವಾಗಿ ಅಮೆರಿಕ ( USA ) ಮತ್ತು ಇಂಗ್ಲೆಂಡ್ ನಲ್ಲಿ ( England) ಅಧ್ಯಯನ ಮಾಡಿದ್ದಾಗಿ ತಿಳಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ತವರಿಗೆ ಬಂದಾಗ ತಂದೆಯ ಎಲ್ ಇಡಿ ( LED ) ಉತ್ಪಾದನಾ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೆ, ಕೆಲ ವರ್ಷ ಮಾತ್ರವೇ ಅಲ್ಲಿ ಕೆಲಸ ಮಾಡಿದ್ದ ಪ್ರತ್ಯುಶಾ ಬಳಿಕ ಫ್ಯಾಷನ್ ಜಗತ್ತಿಗೆ ಧುಮುಕಿದ್ದರು.
ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಆತ್ಮಹತ್ಯೆ!
ಭಾರತದ ಅತ್ಯಂತ ಪ್ರಮುಖ ಫ್ಯಾಷನ್ ಡಿಸೈನರ್ ಗಳ ಸಾಲಿನಲ್ಲಿ ನಿಲ್ಲುವ ಪ್ರತ್ಯುಶಾ ಗರಿಮೆಲ್ಲಾ, ತಮ್ಮದೇ ಹೆಸರಿನ ಬ್ರ್ಯಾಂಡ್ ನೇಮ್ ಹೊಂದಿದ್ದಲ್ಲದೆ, ಹೈದರಾಬಾದ್ ಹಾಗೂ ಮುಂಬೈನಂಥ ಪ್ರತಿಷ್ಠಿತ ನಗರಗಳಲ್ಲಿ ಮಳಿಗೆಗಳನ್ನು ಹೊಂದಿದ್ದರು. ಅದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಆಕೆಯ ಭಾರತೀಯ ಔಟ್ ಫಿಟ್ ಗಳನ್ನು ಅಭಿಮಾನಿಗಳು ಸದಾಕಾಲ ಮೆಚ್ಚುತ್ತಿದ್ದರು.
ರವೀನಾ ಟಂಡನ್, ಪರಿಣಿತಿ ಚೋಪ್ರಾ, ಹುಮಾ ಖುರೇಷಿ, ಕಾಜೋಲ್, ಶ್ರೀಯಾ ಶರಣ್, ಕಾಜಲ್ ಅಗರ್ವಾಲ್, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಗೌಹರ್ ಖಾನ್, ನೇಹಾ ಧೂಪಿಯಾ, ಭೂಮಿ ಫಡ್ನೇಕರ್ ಸೇರಿದಂತೆ ಹಲವರ ಜೊತೆ ಪ್ರತ್ಯುಶಾ ಕೆಲಸ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.