
ಶಿವಸೇನೆ ಮತ್ತು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮಧ್ಯೆ ಭಾರೀ ವಾಕ್ಸಮರ ನಡೆಯುತ್ತಿರುವಗಾಲೇ ನಟ ಪ್ರಕಾಶ್ ರಾಜ್ ಮೆಮ್ ಶೇರ್ ಮಾಡಿದ್ದಾರೆ. ಮಣಿಕರ್ಣಿಕಾ: ದ ಕ್ವೀನ್ ಆಫ್ ಝಾನ್ಸಿ ಸಿನಿಮಾದಲ್ಲಿ ಮಣಿಕರ್ಣಿಕಾ ಪಾತ್ರ ಮಾಡಿದ ನಟಿ ಒಂದು ಪಾತ್ರ ಮಾಡಿದ ಕೂಡಲೇ ರಾಣಿಯಂತೆ ಫೀಲ್ ಮಾಡತೊಡಗಿದ್ದಾರೆ ಎಂಬಂರ್ಥದಲ್ಲಿರುವ ಮೆಮ್ಸ್ ಶೇರ್ ಮಾಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಮೆಮ್ ಶೇರ್ ಮಾಡಿದ ನಟ, ನೀವು ಒಂದು ಸಿನಿಮಾ ಮಾಡಿ ರಾಣಿಯಂತೆ ಫೀಲ್ ಆಗ್ತಿದ್ಯಾ..? ಹಾಗಾದರೆ ಇವರು..? ಎಂದು ದೀಪಿಕಾ ಪಡುಕೋಣೆಯ ಪದ್ಮಾವತ್ ಲುಕ್, ಅಕ್ಬರನ ಪಾತ್ರದ ಹೃತಿಕ್, ಅಶೋಕನ ಪಾತ್ರದ ಶಾರೂಖ್ ಖಾನ್ ಸೇರಿ ಹಲವು ಇಂತಹ ಸಿನಿಮಾ ಮಾಡಿದ ನಟರ ಫೋಟೋ ಇರೋ ಮೆಮ್ಸ್ ಶೇರ್ ಮಾಡಿದ್ದಾರೆ.
ಉದ್ಧವ್ ಸರ್ಕಾರಕ್ಕೆ ದೊಡ್ಡ ಮುಜುಗರ, ದೋಸ್ತಿಗಳ ವಿರುದ್ಧವೇ ಪವಾರ್ ಗುಟುರು!
ಕಂಗನಾ ಹಾಗೂ ಶಿವಸೇನೆ ಮಧ್ಯೆ ಬಹಳ ಕಳೆದ ಕೆಲವು ದಿನಗಳಿಂದ ವಾಕ್ಸಮರ ನಡೆಯುತ್ತಲೇ ಬಂದಿದೆ. ಇನ್ನು ನಟಿ ಮುಂಬೈಗೆ ಹೊರಟು ನಿಂತಾಗ ನಟಿಯ ಮುಂಬೈಯ ಬಂಗಲೆಯಲ್ಲಿ ಅಕ್ರಮ ಭಾಗವನ್ನು ಗುರುತಿಸಿ ಬಿಎಂಸಿ ತೆರವುಗೊಳಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.