
ನೀಲಿ ಚಿತ್ರ ದಂಧೆ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾಗೆ ಮತ್ತೆ 14 ದಿನ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಜು.27ರಂದು ನಟನ ಜಾಮೀನು ಅರ್ಜಿ ವಿಚಾರಣೆಯನ್ನು ಮಾಡಿದ ಬಾಂಬೆ ಹೈಕೋರ್ಟ್ ಈ ಆದೇಶವನ್ನು ನೀಡಿದೆ.
ಈ ಮೂಲಕ ಜು.27ರ ತನಕ ಜೈಲಿನಲ್ಲಿ ಉಳಿಯಬೇಕಿದ್ದ ರಾಜ್‌ಕುಂದ್ರಾ ಬಂಧನದ ಅವಧಿ ಮತ್ತೆ ಹೆಚ್ಚಾಗಿದೆ. ಹೈಕೋರ್ಟ್ ರಾಜ್ ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿ ಆದೇಶ ನೀಡಿದೆ. ಕ್ರೈಂ ಬ್ರಾಂಚ್‌ಗೆ ಕಸ್ಟಡಿ ನಿರಾಕರಿಸಲಾಗಿದೆ.
ರೈಡ್ ವೇಳೆ ಪತಿ ಮೇಲೆ ರೇಗಾಡಿದ ಶಿಲ್ಪಾ ಶೆಟ್ಟಿ: ಕುಂದ್ರಾ ದಂಪತಿ ಜಗಳ ಬಿಡಿಸಿದ ಪೊಲೀಸರು
ಅಶ್ಲೀಲ ಸಿನಿಮಾ ದಂಧೆ ಹೊರಗೆ ಬರದಿರುತ್ತಿದ್ದರೆ ಮುಂಬರುವ 3 ವರ್ಷಗಳಲ್ಲಿ ರಾಜ್ ಕುಂದ್ರಾ ಅವರ ಒಟ್ಟು ಆದಾಯ 146 ಕೋಟಿ ರೂ ಆಗಿರುತ್ತಿತ್ತು. ಪ್ರಕರಣದಲ್ಲಿ ಮೊದಲ ಚಾರ್ಜ್‌ಶೀಟ್ ದಾಖಲಾಗಿದ್ದು, ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಅವರ ಕಂಪನಿ ಬಾಲಿಫೇಮ್ ಮೀಡಿಯಾ ಲಿಮಿಟೆಡ್ ನಿಗದಿಪಡಿಸಿದ ಆರ್ಥಿಕ ಗುರಿಗಳ ವಿವರಗಳನ್ನು ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.