ಮುಂಬೈ ಸೆಕ್ಸ್ ರಾಕೆಟ್ ಸಂಬಂಧ ಪೊಲೀಸರು ಮತ್ತಷ್ಟು ಜಾಗೃತರಾಗಿ ಸಂಶಯಾಸ್ಪದರ ಮೇಲೆ ಕಣ್ಣಿಡುತ್ತಿದ್ದು, ಯುವತಿಯರನ್ನು ಬೆತ್ತಲೆ ಶೂಟ್ ಮಾಡಿ ಪೋರ್ನ್ ರಾಕೆಟ್‌ನಲ್ಲಿ ಕೆಲಸ ಮಾಡ್ತಿದ್ದ ಉದ್ಯಮಿಗೂ ಬಂಧನ ಭೀತಿ ಎದುರಾಗಿದೆ.
ಮುಂಬೈ ಪೊಲೀಸರು ನಗರದಲ್ಲಿ ಪೋರ್ನ್ ರಾಕೆಟ್ ಪ್ರಕರಣಗಳ ಬೆನ್ನು ಹತ್ತಿದ್ದು, ಇದೀಗ ಘಟನೆಯಲ್ಲಿ ಸೆಲೆಬ್ರಿಟಿ ಉದ್ಯಮಿಯೊಬ್ಬರ ಕೈವಾಡವಿರುವುದು ಬಯಲಾಗಿದೆ. ಖ್ಯಾತ ಉದ್ಯಮಿ ಮತ್ತು ನಟಿಯೊಬ್ಬರ ಪತಿಯಾಗಿರುವ ವ್ಯಕ್ತಿ ಸೆಕ್ಸ್ ರಾಕೆಟ್ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿ ನಿರ್ಮಾಣ ಮಾಡುತ್ತಿರುವ ವಿಡಿಯೋಗೆ ಬೆತ್ತಲೆಯಾಗು ಪೋಸ್ ಕೊಡಲು ನನ್ನನ್ನು ಬಲವಂತ ಮಾಡಲಾಗಿತ್ತು ಎಂದು ಮಾಡೆಲ್ ಒಬ್ಬರು ಆರೋಪಿಸಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಉದ್ಯಮಿ ವಿರುದ್ಧ ಬಂದ ಆರೋಪಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೋರ್ನ್ ವಿಡಿಯೋ ಮಾಡಿ ಮಾರಾಟ ಮಾಡ್ತಿದ್ದ ನಟಿ ಅರೆಸ್ಟ್: ಸಬ್‌ಸ್ಕ್ರೈಬರ್ಸ್‌ಗೂ ಸಂಕಷ್ಟ
ಉದ್ಯಮಿಯ ಒಬ್ಬ ಕೆಲಸಗಾರನನ್ನು ಬಂಧಿಸಲಾಗಿದೆ. ಉಮೇಶ್ ಕಾಮತ್ ಎಂಬವರು ಯುಕೆ ಮೂಲದ ಪ್ರೊಡಕ್ಷನ್ ಹೌಸ್ ಕೆರ್ನಿನ್‌ನ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಈತ 8 ಪೋರ್ನ್ ವಿಡಿಯೋ ಹಾಟ್ಸ್‌ಹಾಟ್ ಆಪ್‌ಗೆ ಅಪ್‌ಲೋಡ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.