VIROSH Wedding: ರಶ್ಮಿಕಾ-ವಿಜಯ್ ಮದುವೆ ಕ್ಷಣಗಳಲ್ಲಿ ಶಿವ-ಪಾರ್ವತಿಯನ್ನು ಕಂಡ ಅಭಿಮಾನಿಗಳು

Published : Feb 27, 2026, 12:19 PM IST
vijay rashmika

ಸಾರಾಂಶ

VIROSH Wedding: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅದ್ಧೂರಿಯಾಗಿ ಫೆಬ್ರುವರಿ 26ರಂದು ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆ ಫೋಟೋಸ್ ವೈರಲ್ ಆಗುತ್ತಿದ್ದಂತೆ, ಜನರು ರಾಮ, ಸೀತೆ ಹಾಗೂ ಶಿವ-ಪಾರ್ವತಿಗೆ ಜೋಡಿಯನ್ನು ಹೋಲಿಕೆ ಮಾಡುತ್ತಿದ್ದಾರೆ. 

ರಶ್ಮಿಕಾ-ವಿಜಯ್ ದಂಪತಿಗಳನ್ನು ಶಿವ-ಪಾರ್ವತಿಗೆ ಹೋಲಿಕೆ

ದೀರ್ಘಕಾಲದಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಉದಯಪುರದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ಪ್ರೀತಿ ಮಾಡುತ್ತಿರುವುದಾಗಿ ಅಭಿಮಾನಿಗಳಿಗೆ ಗೊತ್ತಿದ್ದರೂ, ಈ ಜೋಡಿ ಆ ಕುರಿತು ಎಲ್ಲೂ ಕೂಡ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅದ್ಧೂರಿಯಾಗಿ ಮದುವೆಯಾಗಿ ಫೋಟೊಗಳನ್ನು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಅಭಿಮಾನಿಗಳು ಈ ಜೋಡಿಯನ್ನು ನೋಡಿ ತುಂಬಾ ಖುಷಿಪಟ್ಟಿದ್ದಾರೆ, ತೆರೆಯ ಮೇಲಿನ ಜೋಡಿಯಿಂದ ನಿಜ ಜೀವನದ ಗಂಡ ಮತ್ತು ಹೆಂಡತಿಯ ಪರಿವರ್ತನೆಯು ನಿಜವಾಗಿಯೂ ಸುಂದರವಾಗಿತ್ತು ಎಂದು ಹೇಳುತ್ತಾರೆ. ಮದುವೆಯ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಸದ್ಯಕ್ಕಂತೂ ಜನ, ಅಭಿಮಾನಿಗಳು ರಶ್ಮಿಕಾ ಮತ್ತು ವಿಜಯ್ ಫೋಟೊ ನೋಡಿ, ಇದು ಶಿವ-ಪಾರ್ವತಿಯ ಜೋಡಿಯಂತಿದೆ, ರಾಮ-ಸೀತೆಯ ಜೋಡಿಯಂತಿದೆ ಎನ್ನುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ-ವಿಜಯ್ ಮದುವೆ ಪ್ರತಿ ಕ್ಷಣಗಳನ್ನು ಶಿವ-ಪಾರ್ವತಿ ಜೋಡಿಯ ಫೋಟೊಗಳ ಜೊತೆ ಹೋಲಿಕೆ ಮಾಡಿರುವ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಎರಡಕ್ಕೂ ತುಂಬಾನೆ ಹೋಲಿಕೆ ಇದೆ. ಕೆಲವರು ರಶ್ಮಿಕಾ ಮತ್ತು ವಿಜಯ್ ಮದುವೆಯನ್ನು ಶಿವ ಶಕ್ತಿಯ ಸಮ್ಮಿಲನ ಎಂದರೆ, ಇನ್ನೂ ಕೆಲವರು ದಯವಿಟ್ಟು ಪ್ರಪಂಚದ ಮೊದಲ ನಿಷ್ಕಲ್ಮಶ ಪ್ರೇಮವಾದ ಶಿವ-ಪಾರ್ವತಿಯ ಪ್ರೇಮವನ್ನು ರಶ್ಮಿಕಾ-ವಿಜಯ್ ಗೆ ಹೋಲಿಕೆ ಮಾಡಬೇಡಿ ಎಂದಿದ್ದಾರೆ. ಅಷ್ಟಕ್ಕೂ ಆ ಫೋಟೋಗಳಲ್ಲಿ ಏನಿದೆ ನೀವೇ ನೋಡಿ.

 

 

ಇನ್ನು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅನೇಕ ಸೆಲೆಬ್ರಿಟಿಗಳು ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಶುಭ ಹಾರೈಸಿದ್ದಾರೆ. ಅವರ ಇಂಟಿಮೇಟ್ ವಿವಾಹದ ನಂತರ, ದಂಪತಿಗಳು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ, ಇದರಲ್ಲಿ ಚಲನಚಿತ್ರ ತಾರೆಯರು ಭಾಗವಹಿಸಲಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅಭಿಮಾನಿಗಳಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದ್ದಾರೆ. ಅವರ ಮದುವೆಯ ನಂತರ ಮೂರನೇ ಬಾರಿ ಈ ಜೋಡಿ ‘ರಣಬಲಿ’ ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಲಿದ್ದಾರೆ. ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಜೋಡಿಯ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಕೆಮಿಸ್ಟ್ರಿ ಹಿಟ್ ಆಗಿದೆ. ಈ ಹಿಂದೆ, ರಶ್ಮಿಕಾ ಮತ್ತು ವಿಜಯ್ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಗೀತಾ ಗೋವಿಂದಂ ಸೆಟ್‌ಗಳಲ್ಲಿ ಅವರು ಪ್ರೀತಿಯಲ್ಲಿ ಬಿದ್ದಿದ್ದರು. ಮೊದಲು ಅವರು ಸ್ನೇಹಿತರಾದರು, ಮತ್ತು ನಂತರ ಅವರ ಪ್ರೀತಿ ಅರಳಿತು. ವರ್ಷಗಳ ಕಾಲ ಸಾರ್ವಜನಿಕರಿಂದ ತಮ್ಮ ಸಂಬಂಧವನ್ನು ಮರೆಮಾಡಿದ ನಂತರ, ದಂಪತಿಗಳು ಅಂತಿಮವಾಗಿ ಫೆಬ್ರುವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಚಿರಂಜೀವಿ, ನಿರ್ಮಾಪಕಿ ಶ್ರೀದೇವಿ; ಶುರುವಾಗಿ ಅರ್ಧಕ್ಕೆ ನಿಂತುಹೋದ ಆ ಸಿನಿಮಾ ಯಾವುದು ಗೊತ್ತಾ?
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!