ಬ್ಲೂಫಿಲಂ ಕೂಪಕ್ಕೆ ತಳ್ಳಿದ್ದು ಕುಂದ್ರಾ: ಪೂನಂ, ಶೆರ್ಲಿನ್‌ ಆರೋಪ!

By Suvarna News  |  First Published Jul 22, 2021, 10:47 AM IST

* ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ಶಿಲ್ಪಾ ಶೆಟ್ಟಿಅವರ ಪತಿ ರಾಜ್‌ ಕುಂದ್ರಾ

* ನನ್ನನ್ನು ಪುಸಲಾಯಿಸಲು ರಾಜ್‌ ಯತ್ನ: ಪುನೀತ್‌ ಕೌರ್‌

* ಬ್ಲೂಫಿಲಂ ಕೂಪಕ್ಕೆ ತಳ್ಳಿದ್ದು ಕುಂದ್ರಾ: ಪೂನಂ, ಶೆರ್ಲಿನ್‌ ಆರೋಪ


ಮುಂಬೈ(ಜು.22): ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ಶಿಲ್ಪಾ ಶೆಟ್ಟಿಅವರ ಪತಿ ರಾಜ್‌ ಕುಂದ್ರಾ ವಿರುದ್ಧ ಬುಧವಾರ ಮತ್ತಷ್ಟುಗಂಭೀರ ಆರೋಪಗಳು ಕೇಳಿಬಂದಿವೆ. ಕುಂದ್ರಾ ಅವರು ನಟಿಯರಾದ ಪೂನಂ ಪಾಂಡೆ, ಶೆರ್ಲಿನ್‌ ಚೋಪ್ರಾ ಅವರನ್ನು ಬ್ಲೂಫಿಲಂ ದಂಧೆ ಕೂಪಕ್ಕೆ ತಳ್ಳಿದ್ದರು ಎಂದು ಆರೋಪಿಸಲಾಗಿದೆ.

'ಬಟ್ಟೆ ಬಿಚ್ಚಿಸಿ ಅಡಿಶನ್' ಪೋರ್ನ್ ತಯಾರಿಸುತ್ತಿದ್ದ ಕುಂದ್ರಾ ವಿವಾದಗಳ ರಾಜ!

Tap to resize

Latest Videos

undefined

ಪೂನಂ ಹಾಗೂ ಶೆರ್ಲಿನ್‌ ಅವರು ಕುಂದ್ರಾ ಒಡೆತನದ ಅಶ್ಲೀಲ ಚಿತ್ರ ನಿರ್ಮಿಸುವ ಆಮ್‌ರ್‍ಸ್ಪೈರ್‌ ಮೀಡಿಯಾ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದರು. ಪೂನಂ ಪಾಂಡೆ 60 ಲಕ್ಷ ರು.ಗೆ ಒಪ್ಪಂದ ಮಾಡಿಕೊಂಡಿದ್ದರು. ಸಾಕಷ್ಟುಹಸಿಬಿಸಿ ದೃಶ್ಯ ನೀಡಿದ್ದರು. ಇನ್ನು ಶೆರ್ಲಿನ್‌ ಚೋಪ್ರಾ ಅವರು ಪ್ರತಿ ‘ಪ್ರಾಜೆಕ್ಟ್’ಗೆ 30 ಲಕ್ಷ ರು.ಗೆ ಒಪ್ಪಂದ ಮಾಡಿಕೊಂಡಿದ್ದರು. ಇಂಥ 15-20 ಪ್ರಾಜೆಕ್ಟ್ಗಳನ್ನು ಅವರು ಮಾಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನೀಲಿ ಸಿನಿಮಾಗಳನ್ನು ತಯಾರಿಸುತ್ತಿದ್ದ ರಾಜ್ ಕುಂದ್ರಾ ಪೊಲೀಸರ ವಶದಲ್ಲಿ!

ಇನ್ನು ಯೂಟ್ಯೂಬ್‌ ಸ್ಟಾರ್‌ ಪುನೀತ್‌ ಕೌರ್‌ ಕೂಡ ಇಂಥದ್ದೇ ಆರೋಪ ಮಾಡಿದ್ದಾರೆ. ‘ನನಗೆ ಸೋಷಿಯಲ್‌ ಮೀಡಿಯಾದಲ್ಲಿ ರಾಜ್‌ ಅವರು ಡೈರೆಕ್ಟ್ ಮೆಸೇಜ್‌ ಕಳಿಸಿ ‘ಹಾಟ್‌ಶಾಟ್‌’ ಎಂಬ ಅಶ್ಲೀಲ ವೆಬ್‌ಸೈಟ್‌ಗೆ ನಟಿಸಿರಿ ಎಂದು ಪುಸಲಾಯಿಸಲು ಯತ್ನಿಸಿದ್ದರು. ಈಗ ಅವರು ಜೈಲಲ್ಲಿ ಕೊಳೆಯಲಿ’ ಎಂದು ಹಿಡಿಶಾಪ ಹಾಕಿದ್ದಾರೆ.

click me!