
ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಬಳಿಕ ಇದೀಗ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಮಾಲಿವುಡ್‌ನಲ್ಲಿ ಡ್ರಗ್ಸ್ ಸೇವನೆ ಹೇರಳವಾಗಿದೆ ಎಂದು ಚಿತ್ರರಂಗದ ಕೆಲವು ನಟರು ಇತ್ತೀಚೆಗೆ ಹೇಳಿಕೆ ನೀಡಿದ ಹಾಗೂ ಸ್ವತ ಚಿತ್ರರಂಗ ಸಂಸ್ಥೆಯೇ ಈ ವಿಷಯವನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎಲ್ಲ ಸಿನಿಮಾಗಳ ಚಿತ್ರೀಕರಣ ಸ್ಥಳಗಳಲ್ಲಿ ಮುಫ್ತಿಯಲ್ಲಿ ಪೊಲೀಸರ ನಿಯೋಜನೆಗೆ ನಿರ್ಧರಿಸಲಾಗಿದೆ. ಈ ವೇಳೆ ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟ ಕಂಡು ಬಂದರೆ ಕೂಡಲೇ ದಾಳಿ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ. ಸೇತು ರಾಮನ್ ತಿಳಿಸಿದ್ದಾರೆ.
ಇತ್ತೀಚೆಗೆ ಕೇರಳ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ನಟ ಟಿನಿ ಟಾಮ್ ‘ನನ್ನ ಮಗನಿಗೆ ಖ್ಯಾತ ನಟರೊಂದಿಗೆ ನಟಿಸುವ ಅವಕಾಶ ಬಂದಿತ್ತಾದರೂ ಚಿತ್ರೀಕರಣದ ವೇಳೆ ಡ್ರಗ್ಸ್ ಸೇವನೆ ಅತಿಯಾಗಿರುವ ಭಯದಿಂದ ಆಫರ್ ತಿರಸ್ಕರಿಸಿದೆ. ನನಗಿರುವುದು ಒಬ್ಬನೇ ಮಗ’ ಎಂದು ಹೇಳಿದ್ದರು. ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಾದಕ ದ್ರವ್ಯ ಸೇವನೆಯ ಬಗ್ಗೆ ನಟ ಟಾಮ್ ಪೊಲೀಸರೊಂದಿಗೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.
ಇಬ್ಬರು ಖ್ಯಾತ ನಟರನ್ನು ಬ್ಯಾನ್ ಮಾಡಿದ ಮಲಯಾಳಂ ಚಿತ್ರರಂಗ; ಕಾರಣವೇನು?
ನಿರ್ಮಾಪಕ ರಂಜಿತ್, ನಟರಾದ ಶೇನ್ ನಿಗಮ್ ಹಾಗೂ ಶ್ರೀನಾಥ್ ಭಾಸಿ ಅವರ ನಡುವಳಿಕೆಗಳು ಎಲ್ಲವನ್ನೂ ಮೀರಿದೆ. ಇದರಿಂದ ಚಿತ್ರೀಕರಣ ವೇಳೆ ತೊಂದರೆಯಾಗುತ್ತಿದ್ದು, ಇನ್ನು ಮುಂದೆ ಇವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ವರ್ತನೆ ಸರಿಪಡಿಸಿಕೊಳ್ಳುವವರೆಗೆ ಚಿತ್ರರಂಗದ ಯಾರೂ ಅವರೊಂದಿಗೆ ಸಹಕರಿಸುವುದಿಲ್ಲ ಎಂದು ‘ಅಮ್ಮಾ’ ಹೇಳಿತ್ತು. ಹೀಗಾಗಿ ಇವರೆಲ್ಲ ಡ್ರಗ್ಸ್‌ಗೆ ದಾಸರಾಗಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಈಗಾಗಲೇ ಈ ಇಬ್ಬರೂ ನಟರನ್ನು ಸಿನಿಮಾರಂಗದಿಂದ ಬ್ಯಾನ್ ಮಾಡಲಾಗಿದೆ.
ನಟ ಪೃಥ್ವಿರಾಜ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್; ಮೌನ ಮುರಿದ 'ಹೆಬ್ಬುಲಿ' ನಟಿ ಅಮಲಾ ಪೌಲ್
ಇನ್ನು ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಇದೆ ಎಂಬುದನ್ನು ಮಲಯಾಳಂ ಚಿತ್ರರಂಗ ಒಕ್ಕೂಟ (ಅಮ್ಮಾ)ವೇ ಒಪ್ಪಿಕೊಂಡಿದ್ದು, ಸೂಕ್ತ ತನಿಖೆ ಹಾಗೂ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.