Rashmika-Vijay Wedding: ರಶ್ಮಿಕಾ-ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭಾಶಯ! 'ಇದು ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯ' ಎಂದ ನಮೋ!

Published : Feb 25, 2026, 03:01 PM IST
Rashmika Vijay Modi

ಸಾರಾಂಶ

ರಶ್ಮಿಕಾ ಮತ್ತು ವಿಜಯ್ ಮೊದಲ ಬಾರಿಗೆ 2018ರ 'ಗೀತಾ ಗೋವಿಂದಂ' ಚಿತ್ರದಲ್ಲಿ ಒಂದಾಗಿ ನಟಿಸಿದ್ದರು. ಆ ಚಿತ್ರದ ಇವರ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದರು. ನಂತರ 2019ರಲ್ಲಿ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಇವರ ಜೋಡಿ ಮೋಡಿ ಮಾಡಿತ್ತು. ಈಗ ಅವರ ಮದುವೆಯ ಕ್ಷಣ.

ರಶ್ಮಿಕಾ-ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭಾಶಯ!

ಟಾಲಿವುಡ್‌ನ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆಯ ಸಂಭ್ರಮ ಈಗ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಈ 'ವಿರೋಶ್' (Virosh) ವಿವಾಹ ಮಹೋತ್ಸವಕ್ಕೆ ಈಗ ಸಾಕ್ಷಾತ್ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಶುಭ ಹಾರೈಸಿದ್ದಾರೆ! ಹೌದು, ಫೆಬ್ರವರಿ 26 ರಂದು ನಡೆಯಲಿರುವ ಈ ಅದ್ದೂರಿ ಮದುವೆಗೆ ಪ್ರಧಾನಿ ಮೋದಿ ಅವರು ಪತ್ರದ ಮೂಲಕ ತಮ್ಮ ವಿಶೇಷ ಸಂದೇಶ ಕಳುಹಿಸಿದ್ದಾರೆ.

ಮೋದಿ ಪತ್ರದಲ್ಲಿ ಏನಿದೆ?

ವಿಜಯ್ ದೇವರಕೊಂಡ ಅವರ ಪೋಷಕರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಹೀಗೆ ಬರೆದಿದ್ದಾರೆ: "ಫೆಬ್ರವರಿ 26, 2026 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸಂತೋಷವಾಗಿದೆ. ಈ ಅತ್ಯಂತ ಹರ್ಷದಾಯಕ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು."

ಕೇವಲ ಔಪಚಾರಿಕವಾಗಿ ಅಭಿನಂದಿಸುವುದಷ್ಟೇ ಅಲ್ಲದೆ, ಈ ಜೋಡಿಯ ಜೀವನದ ಬಗ್ಗೆ ಮೋದಿ ಅವರು ಆಡಿರುವ ಮಾತುಗಳು ಈಗ ಅಭಿಮಾನಿಗಳ ಮನ ಗೆದ್ದಿವೆ. ಸಿನಿಮೀಯ ಶೈಲಿಯಲ್ಲಿಯೇ ವಿವರಿಸಿರುವ ಪ್ರಧಾನಿ, "ವಿಜಯ್ ಅಥವಾ ರಶ್ಮಿಕಾ ಇಬ್ಬರಿಗೂ ಸಿನಿಮಾದ ಸ್ಕ್ರಿಪ್ಟ್‌ಗಳು ಹೊಸದೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ಕೂಡಿದ ಈ 'ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯ' (Divinely scripted chapter), ಅವರಿಬ್ಬರೂ ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಹೆಚ್ಚು ಪ್ರಕಾಶಮಾನವಾಗಿರಲಿದೆ" ಎಂದು ಬಣ್ಣಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಅಮೂಲ್ಯ ಸಲಹೆ

ಮದುವೆ ಎಂಬ ಪವಿತ್ರ ಬಂಧದ ಬಗ್ಗೆ ಬರೆಯುತ್ತಾ, "ಸಪ್ತಪದಿ ತುಳಿಯುವ ಮೂಲಕ ಜೀವನಪರ್ಯಂತ ಸ್ನೇಹಿತರಾಗಲಿರುವ ಈ ಜೋಡಿಯ ಕನಸುಗಳು ನನಸಾಗಲಿ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಒಬ್ಬರ ಬಲದಿಂದ ಮತ್ತೊಬ್ಬರು ಕಲಿಯುತ್ತಾ, ಜೀವನದ ಏರಿಳಿತಗಳಲ್ಲಿ ಸೃಜನಾತ್ಮಕ ಪಾಲುದಾರರಾಗಿ ಸಾಗಲಿ" ಎಂದು ಮೋದಿ ಅವರು ಹರಸಿದ್ದಾರೆ. ಪ್ರಧಾನಿಯವರ ಈ ಭಾವನಾತ್ಮಕ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉದಯಪುರದಲ್ಲಿ ಸಡಗರವೋ ಸಡಗರ!

ರಾಜಸ್ಥಾನದ ಉದಯಪುರದ ಐಷಾರಾಮಿ 'ಐಟಿಸಿ ಮೆಮೆಂಟೋಸ್' (Mementos by ITC Hotels) ಹೋಟೆಲ್‌ನಲ್ಲಿ ಮದುವೆಯ ಶಾಸ್ತ್ರಗಳು ಭರದಿಂದ ಸಾಗಿವೆ. ಈಗಾಗಲೇ ಸಂಗೀತ ಸಮಾರಂಭ ಮುಗಿದಿದ್ದು, ಇಂದು ಮಧ್ಯಾಹ್ನ ಅರಿಶಿನ ಶಾಸ್ತ್ರ (Haldi) ನೆರವೇರಲಿದೆ. ಸಂಜೆ ಹೊತ್ತಿಗೆ ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಮದುವೆಯ ಕಳೆ ಮನೆ ಮಾಡಿದೆ. ಕೇವಲ ಆಪ್ತ ಬಂಧುಗಳು ಮತ್ತು ಮಿತ್ರರಿಗಷ್ಟೇ ಈ ಮದುವೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಶ್ಮಿಕಾ ಮತ್ತು ವಿಜಯ್ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಒಂದಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಇವರಿಬ್ಬರ ಹೆಸರನ್ನು ಸೇರಿಸಿ 'ವಿರೋಶ್' ಎಂದು ಕರೆಯುತ್ತಿದ್ದು, ಅದೇ ಹೆಸರಿನಲ್ಲಿ ತಮ್ಮ ಮದುವೆಯನ್ನು 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಕರೆಯಲು ಈ ಜೋಡಿ ನಿರ್ಧರಿಸಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಇವರ ಅದ್ದೂರಿ ರಿಸೆಪ್ಷನ್‌ಗೆ ಚಿತ್ರರಂಗದ ಘಟಾನುಘಟಿಗಳು ಸಾಕ್ಷಿಯಾಗಲಿದ್ದಾರೆ. ಒಟ್ಟಿನಲ್ಲಿ ಸಿನಿಮಾದ ಕಥೆಯಂತೆ ಶುರುವಾದ ಇವರ ಪ್ರೇಮಾಯಣ ಈಗ ಪ್ರಧಾನ ಮಂತ್ರಿಗಳ ಶುಭ ಹಾರೈಕೆಯೊಂದಿಗೆ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rashmika Mandanna, Vijay Deverakonda ವಿವಾಹವಾಗುತ್ತಿರುವ ಲಕ್ಸುರಿ ರೆಸಾರ್ಟ್‌ ಬಾಡಿಗೆ ಎಷ್ಟು ? ಗೆಸ್ಟ್‌ಗಳ್ಯಾರು?
ವಿಜಯ್ ಜೊತೆ ಬಂಗಾರವೂ ಸಿಕ್ತು, ರಶ್ಮಿಕಾ ಫುಲ್ ಕಿಲಕಿಲ, ಮದ್ವೆಗೂ ಮೊದಲೇ ಅತ್ತೆಯ ಗಿಫ್ಟ್!