ಪಠಾಣ್ ಚಿತ್ರದ ಬೇಶರಮ್ ರಂಗ್ ಹಾಡಿನ ಹುಕ್ ಸ್ಟೆಪ್‌ಗಳನ್ನು ಮರುಸೃಷ್ಟಿ ಮಾಡಿ ಕಡಲತೀರದಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾಳೆ ಪ್ಲಸ್ ಸೈಜ್ ತನ್ವಿ.
ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿರುವ 'ಪಠಾಣ್' ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಹಳೆಯ ವಿಷ್ಯ. ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕನಿ ತೊಟ್ಟು, ಶಾರುಖ್ ಜೊತೆ ಸ್ವಲ್ಪ ಅತಿಯಾಗಿಯೇ ಬೋಲ್ಡ್ ಆಗಿ ನಟಿಸಿ 'ಬೇಶರಮ್ ರಂಗ್' ಎಂದು ಹಾಡುವ ಮೂಲಕ ವಿವಾದ ಮೈಮೆಲೆ ಎಳೆದುಕೊಂಡಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಇದಾಗಲೇ ಈ ಚಿತ್ರ ಬೈಕಾಟ್ ಬಿಸಿಯನ್ನೂ ಅನುಭವಿಸುತ್ತಿದೆ.
ಅದೇನೇ ಇದ್ದರೂ, ಜೀರೋ ಸೈಜ್ (Zero Size) ದೀಪಿಕಾ ಪಡುಕೋಣೆಯ ಬಿಕನಿ ಡ್ರೆಸ್ ಮತ್ತೆಮತ್ತೆ ನೋಡಿ ಖುಷಿ ಪಡುತ್ತಿರುವವರಿಗೇನೂ ಕಮ್ಮಿ ಇಲ್ಲ ಎನ್ನಿ.
Shah Rukh Khan; ನಾನು ರಾತ್ರಿ ಬ್ಯಾಟ್‌ಮ್ಯಾನ್ ಬೆಳಗ್ಗೆ ಸೂಪರ್‌ಮ್ಯಾನ್; 'ಪಠಾಣ್' ಸ್ಟಾರ್ ಹೇಳಿಕೆ ವೈರಲ್
ಆದರೆ ಇಲ್ಲಿ ಹೇಳ್ತಿರೋದು ಜೀರೋ ಸೈಜ್ ದೀಪಿಕಾ ಬಗ್ಗೆ ಅಲ್ಲ, ಬದಲಿಗೆ ಡಬಲ್ ಪ್ಲಸ್ ಸೈಜ್ (plus size) ಯುವತಿಯ ಬಗ್ಗೆ. ಹೌದು! ಇದೇ ಬೇಶರಮ್ ರಂಗ್ ಹಾಡಿಗೆ ಪ್ಲಸ್ ಸೈಜ್ ಯುವತಿ ತನ್ವಿ ಗೀತಾ ರವಿಶಂಕರ್, ದೀಪಿಕಾಳಂತೆ ಬಿಕನಿ (Bikani) ತೊಟ್ಟು ಕಡಲ ತೀರದ ಬಳಿ ಮೈ ಚಳಿ ಬಿಟ್ಟು ನರ್ತಿಸಿದ್ದಾರೆ. ತನ್ನ ಈ ಅಮೋಘ ನೃತ್ಯವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ಜನರ ಟೀಕೆಗೂ ಗುರಿಯಾಗುತ್ತಿದ್ದಾರೆ.
ಬೇಶರಮ್ ರಂಗ್ (Besharam Rang) ಹುಕ್ ಸ್ಟೆಪ್‌ಗಳನ್ನು ತನ್ವಿ ಮರುಸೃಷ್ಟಿದ್ದಾರೆ. ಇದರ ನೃತ್ಯ ಮಾಡುತ್ತಾ ಎಲ್ಲರನ್ನೂ ಮೋಡಿ ಮಾಡಿದ್ದು ಸುಳ್ಳಲ್ಲ, ಈ ಪ್ಲಸ್ ಸೈಜ್ ಫ್ಯಾಷನ್ ಇನ್‌ಫ್ಲುಯೆನ್ಸರ್. ತಾನೇನು ದೀಪಿಕಾ ಪಡುಕೋಣೆಗಿಂತ ಕಮ್ಮಿ ಇಲ್ಲ ಎಂದುಕೊಂಡೇ ಮೈ ಚಳಿ ಬಿಡುವಂತೆ ಸ್ಟೆಪ್ ಹಾಕಿರುವ ತನ್ವಿ, ಸೊಂಟ ಬಳುಕಿಸುತ್ತಾ ತಮ್ಮ ಅಂಗಾಂಗ ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಕಸಿದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಕಾಮೆಂಟ್‌ಗಳೂ ವಿಭಿನ್ನವಾಗಿ ಬರುತ್ತಿದೆ.
ತನ್ವಿ ಇನ್‌ಸ್ಟಾಗ್ರಾಂನಲ್ಲಿ (Instagram) ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದು, ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ವಿಡಿಯೋದಲ್ಲಿ ಇವರು ದೀಪಿಕಾರಂತೆಯೇ ವೇಷಭೂಷಣ ತೊಟ್ಟಿದ್ದಾಳೆ. ನೇರಳೆ ಬಣ್ಣದ ಬಿಕಿನಿ ಟಾಪ್ ಧರಿಸಿ, ಸೊಂಟ ಬಳಕಿಸುತ್ತಾ ನೃತ್ಯ ಮಾಡಿದ್ದಾರೆ. ಇಲ್ಲಿ ಹೀರೋ ಇಲ್ಲ ಎನ್ನುವ ಕೊರತೆ ಬಿಟ್ಟರೆ ತನ್ವಿ ಯಾವ ಹೀರೋಯಿನ್ಗೂ ಕಮ್ಮಿ ಇಲ್ಲ ಎನ್ನುವಂತೆಯೇ ನರ್ತಿಸಿದ್ದಾರೆ.
ಬೇಶರಂ ರಂಗ್ ನಂತರ ಮತ್ತೊಂದು ಹಾಡಿನ ಗದ್ದಲ; ಬೆಂಕಿ ಹಂಚಿದ ದೀಪಿಕಾ ಶಾರುಖ್ ಡ್ಯಾನ್ಸ್ ಮೂವ್ಸ್!
ಇದಕ್ಕೊಂದು ಖುದ್ದು ಶೀರ್ಷಿಕೆಯನ್ನೂ ತನ್ವಿಯೇ ಕೊಟ್ಟಿದ್ದಾರೆ. ಅದೇನೆಂದರೆ “ಬೇಶರಮ್ ಆಗಿರಿ. ನೀವು ಇಷ್ಟಪಡುವುದನ್ನು ಮಾಡಿ, ಇಷ್ಟಪಡುವುದನ್ನು ಧರಿಸಿ. ನೀವು ಬಯಸಿದ ಜೀವನವನ್ನು ನಡೆಸಿ. ಮತ್ತೊಬ್ಬರಿಗಾಗಿ ಬದುಕಬೇಡಿ. ನಿಮ್ಮನ್ನು ನೀವು ಇನ್ನೊಬ್ಬರ ದೃಷ್ಟಿಯಲ್ಲಿ 'ಬೇಶರಂ' (Besharam) ಆಗಿ ಮಾಡಿದರೆ, ಅದು ಸಂಪೂರ್ಣವಾಗಿ ಒಳ್ಳೆಯದೇ ಅಂದುಕೊಳ್ಳಿ. ನಾವು 2023 ಕ್ಕೆ ಪ್ರವೇಶಿಸುತ್ತಿದ್ದೇವೆ. ಈ ಕ್ಷಣವನ್ನು ಎಂಜಾಯ್ ಮಾಡಿ" ಎಂದಿದ್ದಾರೆ ತನ್ವಿ.
ಇವರ ಈ ಬೋಲ್ಡ್ ನೃತ್ಯಕ್ಕೆ ಹಲವರು ಫಿದಾ ಆಗಿದ್ದಾರೆ. ಇದ್ದರೆ ಹೀಗೆ ಇರಬೇಕು, ಯಾರಿಗೂ ಡೋಂಟ್ ಕೇರ್ ಅನ್ನಬೇಕು. ಆತ್ಮವಿಶ್ವಾಸ ಎಂದರೆ ಇದೇ ಎಂದಿದ್ದಾರೆ. ಪ್ಲಸ್ ಸೈಜ್ (Plus Size) ಮಹಿಳೆಯರು ಹೆಚ್ಚಾಗಿ ಈಕೆಯ ಈ ವಿಡಿಯೋ ಶೇರ್ ಮಾಡುತ್ತಿದ್ದಾರೆ. ನೀವೇ ನಮಗೆ ಸ್ಫೂರ್ತಿ ಎನ್ನುತ್ತಿದ್ದಾರೆ. ಆದರೆ ಕೆಲವರು ಮಾತ್ರ ಈ ಅವತಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿಯರನ್ನು ನೋಡಲು ಸಾಲದು ಎಂದರೆ ಈಗ ಅವರಿಂದ ಪ್ರೇರೇಪಿತರಾಗಿ ಸಾಮಾನ್ಯ ಜನರೂ ಬೇಶರಮ್ ಆಗುತ್ತಿರುವುದು ಶೋಚನೀಯ ಎಂದಿದ್ದಾರೆ.
ಅಂದಹಾಗೆ, ಬೇಶರಮ್ ರಂಗ್ ಹಾಡನ್ನು ಶಿಲ್ಪಾ ರಾವ್ ಹಾಡಿದ್ದಾರೆ ಮತ್ತು ವಿಶಾಲ್ ಮತ್ತು ಶೇಖರ್ ಸಂಯೋಜಿಸಿದ್ದಾರೆ. ಇದು 163 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.