ಹಾಲಿವುಡ್‌ ಗೂ ಭಗವದ್ಗೀತೆಗೂ ಏನು ಸಂಬಂಧ? ನಟ ವಿನ್‌ ಡೀಸೆಲ್‌ 'ಪ್ರತಿಫಲ ಬಯಸದೇ ಕರ್ತವ್ಯ ಮಾಡುʼ

By Suvarna News  |  First Published Dec 18, 2023, 5:52 PM IST

ಕೃಷ್ಣ ಪರಮಾತ್ಮ ಮಹಾಭಾರತದ ಯುದ್ಧಕ್ಕೂ ಮುನ್ನ ಗೀತೆಯ ಮೂಲಕ ಜೀವನದ ಕರ್ತವ್ಯದ ಬಗ್ಗೆ ಅರಿವು ಮೂಡಿಸಿದ್ದ. “ವಿರಕ್ತಿಯಿಂದ, ಪ್ರತಿಫಲ ಬಯಸದೇ ಕಾರ್ಯ ನಿಭಾಯಿಸುʼ ಎನ್ನುವ ವಾಕ್ಯವನ್ನು ಈ ಚಿತ್ರದಲ್ಲಿ, ಅಮೆರಿಕ- ಇರಾಕ್‌ ಯುದ್ಧಕ್ಕೂ ಮುನ್ನ ಪ್ರಸ್ತುತ ಮಾಡಿರುವುದು ವಿಶೇಷ ಸಂಗತಿ.


ಪಾಶ್ಚಾತ್ಯರಲ್ಲಿ ಭಾರತೀಯ ದರ್ಶನಗಳನ್ನು ಒಪ್ಪಿಕೊಂಡ ಅದೆಷ್ಟೋ ಮಹಾನುಭಾವರಿದ್ದಾರೆ. ಅವರು ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಭಾರತೀಯ ತತ್ವಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾರೆ. ಅವುಗಳ ಸಾಕ್ಷಾತ್ಕಾರವನ್ನು ಹುಡುಕಿಕೊಂಡು ಭಾರತಕ್ಕೆ ಆಗಮಿಸುತ್ತಾರೆ. ಇದೀಗ, ಹಾಲಿವುಡ್‌ ಗೂ ಭಗವದ್ಗೀತೆಗೂ ಇದೀಗ ನಂಟು ಬೆಸೆದಿದೆ. ಹಾಲಿವುಡ್‌ ಚಿತ್ರವೊಂದರಲ್ಲಿ ಕೃಷ್ಣ ಹಾಗೂ ವಿಷ್ಣು ದೇವರ ಪ್ರಸ್ತಾಪ, ಭಗವದ್ಗೀತೆಯ ಸಂದೇಶದ ಉಲ್ಲೇಖವಾಗಿರುವುದು ನಿಜಕ್ಕೂ ಮಹತ್ವದ ಸಂಗತಿ. ಹಾಲಿವುಡ್‌ ನಟ ವಿನ್‌ ಡೀಸೆಲ್‌ ಅವರ “ಬಿಲ್ಲಿ ಲಿನ್ಸ್‌ ಲಾಂಗ್‌ ಹಾಫ್‌ ಟೈಮ್‌ ವಾಕ್‌ʼ ಎನ್ನುವ ಚಿತ್ರದ ತುಣುಕೊಂದು ಈಗ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಚಿತ್ರದ ಈ ನಿಗದಿತ ಸನ್ನಿವೇಶದಲ್ಲಿ ಡೀಸೆಲ್‌ ಅವರು ೧೯ ವರ್ಷದ ಖಾಸಗಿ ಬಿಲ್ಲಿ ಲಿನ್‌ ಆಗಿ ಕಾಣಿಸಿಕೊಳ್ಳುವ ಜೋಯ್‌ ಅಲ್ವಿನ್‌ ಅವರಿಗೆ ಸಲಹೆ ನೀಡುವ ವಾಕ್ಯಗಳು ಮಹತ್ವದ್ದೆನಿಸುತ್ತವೆ. ಅದರಲ್ಲಿ ಅವರು ಭಗವದ್ಗೀತೆಯ ವಾಕ್ಯಗಳನ್ನು ಕೋಟ್‌ ಮಾಡುತ್ತಾರೆ. “ವಿರಕ್ತಿಯಿಂದ ನಿನ್ನ ಕಾರ್ಯ ಮಾಡು, ಯಾವುದೇ ಕೆಲಸ ಮಾಡುವುದಿದ್ದರೂ ಅದರಲ್ಲಿ ವಿರಕ್ತಿ ತುಂಬಿರಲಿ. ಹಾಗೂ ಎಲ್ಲ ಕ್ರಿಯೆಯನ್ನು ನನಗೆ ಅರ್ಪಿಸಿಬಿಡುʼ ಎಂದು ಹೇಳುತ್ತಾರೆ. ಬರೀ ಅಷ್ಟೇ ಅಲ್ಲ, ಮುಂದುವರಿದು, “ಕೃಷ್ಣ ಪರಮಾತ್ಮ ಈ ವಾಕ್ಯವನ್ನು ಯೋಧನಾಗಿದ್ದ ಅರ್ಜುನನಿಗೆ ಹೇಳುತ್ತಾನೆ. ಮಹಾಸಂಗ್ರಾಮ ಮಹಾಭಾರತದ ಹಿಂದಿನ ರಾತ್ರಿ ಅರ್ಜುನ ಭಯಪಟ್ಟ ಸಮಯದಲ್ಲಿ ಹೀಗೆ ಉಪದೇಶ ಮಾಡುತ್ತಾನೆʼ ಎಂದು ಹೇಳಿದಾಗ ಅಲ್ವಿನ್‌ ಕೃಷ್ಣನ ಕುರಿತು ಪ್ರಶ್ನಿಸುತ್ತಾನೆ. ಆಗ ನಟ ಡೀಸೆಲ್‌ ತಮ್ಮ ಪಾತ್ರದ ಮೂಲಕ “ಕೃಷ್ಣ, ಭಗವಾನ್‌ ವಿಷ್ಣುವಿನ ಅವತಾರ ಎನ್ನುವುದಾಗಿ ವಿವರಿಸುತ್ತಾನೆ. 

ಅಕಾಡೆಮಿ ಪ್ರಶಸ್ತಿ (Academy Awards) ಪುರಸ್ಕೃತ ನಿರ್ದೇಶಕ ಆಂಗ್‌ ಲೀ (Ang Lee) (ಲೈಫ್‌ ಆಫ್‌ ಪೈʼ ನಿರ್ದೇಶಕ) ಅವರು ಬೆಸ್ಟ್‌ ಸೆಲ್ಲಿಂಗ್‌ (Best Selling) ಕಾದಂಬರಿಯಾಗಿರುವ “ಬಿಲ್ಲಿ ಲಿನ್ಸ್‌ ಲಾಂಗ್‌ ಹಾಫ್‌ ಟೈಮ್‌ ವಾಕ್‌ʼʼ ಕೃತಿಯನ್ನು ಕ್ರಿಯಾಶೀಲವಾಗಿ ಪರದೆಗೆ ಅಳವಡಿಸಿದ್ದಾರೆ. ಇದರಲ್ಲಿ 19 ವರ್ಷದ ಬಿಲ್ಲಿ ಲಿನ್‌ (Billy Lynn) ಪಾತ್ರವನ್ನು ಜೋಯ್‌ ಅಲ್ವಿನ್‌ ನಿಭಾಯಿಸಿದ್ದಾರೆ. ಇದು ಇರಾಕ್‌ ಯುದ್ಧದ (Iraq War) ಸನ್ನಿವೇಶವನ್ನು ಒಳಗೊಂಡಿದೆ. ಲಿನ್‌ ಮತ್ತು ಆತನ ಕಾಮ್ರೇಡುಗಳು ಇರಾಕ್‌ ಯುದ್ಧವನ್ನು ಗೆದ್ದ ಬಳಿಕ ಹೀರೋಗಳ ಮಾನ್ಯತೆ ಪಡೆಯುತ್ತಾರೆ. ಯುದ್ಧಕ್ಕೂ ಮುನ್ನ ನಡೆದ ವಿವಿಧ ಘಟನೆಗಳ ಸರಣಿಯನ್ನೇ ಈ ಚಿತ್ರ ಹೊಂದಿದೆ. ಯುದ್ಧವನ್ನು ಎದುರಿಸಲು ಬೇಕಾದ ಮಾನಸಿಕತೆಯನ್ನೂ ಒಳಗೊಂಡಿದೆ. ಯುದ್ಧದ ಕಟುಸತ್ಯಗಳನ್ನು (Truth) ಬಿಂಬಿಸಿದೆ. 

Tap to resize

Latest Videos

 

Hollywood Actor Vin Diesel quotes from the Bhagavad Gita in his new film - Billy Lynn's Long Halftime Walk, clip goes viral pic.twitter.com/czomVrBNT0

— Megh Updates 🚨™ (@MeghUpdates)

ಹಾಲಿವುಡ್‌ ಚಿತ್ರದಲ್ಲಿ ಭಾರತದ (India) ಮಹಾಪುರಾಣಗಳ ಪಾತ್ರಗಳು, ದೇವತೆಗಳ (God) ಉಲ್ಲೇಖವಾಗುವುದು ವಿಶೇಷ ಸಂಗತಿ. ಇದರಿಂದ ಇಡೀ ಜಗತ್ತಿಗೆ ಒಂದು ವಿಶಿಷ್ಟ ಸಂದೇಶ (Message) ನೀಡಿದಂತಾಗುವುದರಲ್ಲಿ ಅನುಮಾನವಿಲ್ಲ.

 

ಕೋಳಿ ಅಂಗಡಿಯಾದ ಪಾಕಿಸ್ತಾನದ ಪ್ರಸಿದ್ಧ ರಾಮ-ಸೀತೆ ದೇವಸ್ಥಾನ!

ಅಷ್ಟಕ್ಕೂ, ಭಗವದ್ಗೀತೆಯ (Bhagavad Gita) ಸಂದೇಶ ಎಂದೆಂದಿಗೂ ಪ್ರಸ್ತುತ. ಆಧುನಿಕ ಜೀವನಕ್ಕೂ (Modern Life) ಗೀತಾಸಾರ ನೇರವಾಗಿ ಅನ್ವಯವಾಗುವಂಥದ್ದು. ಭಗವದ್ಗೀತೆಯನ್ನು ಆಳವಾಗಿ ಅಧ್ಯಯನ ಮಾಡಿದವರಿಗೆ ಸಂಸಾರದ ಸುಖ-ದುಃಖಗಳ ಭಾರ ಹೆಚ್ಚಾಗಿ ತಟ್ಟುವುದಿಲ್ಲ ಎಂದು ಹೇಳಲಾಗುತ್ತದೆ. ಭಗವದ್ಗೀತೆಯ ಖ್ಯಾತ ಸಂದೇಶದಲ್ಲಿ “ಮಾ ಫಲೇಷು ಕದಾಚನʼ ವೂ ಒಂದು. ಅಂದರೆ, “ನಿನ್ನ ಕರ್ತವ್ಯವನ್ನು ನೀನು ಮಾಡು, ಎಂದಿಗೂ ಪ್ರತಿಫಲ ನಿರೀಕ್ಷೆ (Expect) ಮಾಡಬೇಡʼ ಎಂದು. ಇಂದಿನ ಸಂಕುಚಿತ ಮನಸ್ಥಿತಿಯ (Mentality) ಬದುಕಿಗಂತೂ ಇದು ಹೆಚ್ಚು ಅನ್ವಯವಾಗುವ ಮಾತು.
ಬೀದಿ ಜಗಳ ಮನೆವರೆಗೂ ತರಬಾರದು ಅಂತಾರೆ..! ಮನೆಗೆ ತಂದ್ರೆ ಏನಾಗುತ್ತೆ ಗೊತ್ತಾ..?

ಪಾಲಕರಿಗೆ ಮಕ್ಕಳಿಂದ ವಿಪರೀತ ನಿರೀಕ್ಷೆ, ಮಕ್ಕಳಿಗೆ ಪಾಲಕರಿಂದ ಅತಿ ನಿರೀಕ್ಷೆ. ಇಷ್ಟೇ ಅಲ್ಲ, ಎಲ್ಲ ಸಂಬಂಧಗಳಲ್ಲೂ ನಿರೀಕ್ಷೆಯ ಮಹಾಪೂರ. ಹೀಗಾಗಿಯೇ ಈ ಸಮಯ ಅಷ್ಟೇ ನಿರಾಸೆ, ಹತಾಶೆಗಳಿಂದಲೂ ಕೂಡಿದೆ. ಅದಕ್ಕೆ ಪರಿಹಾರವೇ “ಮಾ ಫಲೇಷು ಕದಾಚನʼ. ಗೀತೆಯ ಇಂತಹ ಅದೆಷ್ಟೋ ಸಂದೇಶಗಳು ಮನಸ್ಸಿಗೆ ಸಮಾಧಾನ, ಶಾಂತಿ ನೀಡಿ, “ನಾವೇ ಎಲ್ಲ, ನಮ್ಮದೇ ಎಲ್ಲʼ ಎನ್ನುವ ಹೊಣೆಗಾರಿಕೆಯಿಂದ ನಮ್ಮನ್ನು ಮುಕ್ತಗೊಳಿಸಿ, ಬಿಡುಗಡೆ ನೀಡುತ್ತವೆ.  
 

click me!