
ಪ್ರತಿಯೊಬ್ಬರು ತಮ್ಮ ಬಾಲ್ಯದಲ್ಲಿ ತಾರೆ ಜಮೀನ್ ಪರ್ ಸಿನಿಮಾ ನೋಡಿರುತ್ತಾರೆ. ದರ್ಶೀಲ್ ಸಫಾರಿ ಮುಗ್ಧತೆಗೆ ಸೋತವರು ಒಬ್ರಾ ಇಬ್ರಾ? ಯಾವ ಸ್ಕೂಲ್, ಹಾಸ್ಟಲ್ ನೋಡಿದ್ದರೂ ಮಕ್ಕಳು ಇದೇ ಸಿನಿಮಾ ನೋಡುತ್ತಿದ್ದರು...ಆಗಲೇ ದರ್ಶೀಲ್ ದೊಡ್ಡ ಸ್ಟಾರ್ ಆಗುತ್ತಾನೆಂದು ಸಿನಿ ರಸಿಕರು ಗೆಸ್ ಮಾಡಿದ್ದರು. ಈಗ ಕ್ಯಾಪಿಟಲ್ ಎ ಸ್ಮಾಲ್ ಎ ಶಾರ್ಟ್ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅಮೆಜಾನ್ ಮಿನಿ ಟಿವಿಯಲ್ಲಿ ನವೆಂಬರ್ 17ರಿಂದ ಪ್ರಸಾರ ಅಗಲಿದ್ದು ದರ್ಶೀಲ್‌ಗೆ ಜೋಡಿಯಾಗಿ ರೇವತಿ ಪಿಲೈ ಅಭಿನಯಿಸಿದ್ದಾರೆ.
ದರ್ಶೀಲ್ ಸಫಾರಿ ಕಮ್ ಬ್ಯಾಕ್ ಎಲ್ಲರಿಗೂ ಬಿಗ್ ಸರ್ಪ್ರೈಸ್ ಎನ್ನಬಹುದು. ಹೀಗಾಗಿ ತಮ್ಮ ಜರ್ನಿ, ವಿದ್ಯಾಭ್ಯಾಸ ಮತ್ತು ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ. ಕ್ಯಾಪಿಟಲ್ ಎ ಮತ್ತು ಸ್ಮಾಲ್ ಎ ಸಿನಿಮಾದಲ್ಲಿ ಎದುರಿಸಿದ ದೊಡ್ಡ ಚಾಲೆಂಜ್ ಏನೆಂದರೆ ನಟ ಮತ್ತು ನಟಿ ಹೈಟ್. 'ಈ ಸಿನಿಮಾ ನಿರ್ದೇಶಕರಿಗೆ ದೊಡ್ಡ ಚಾಲೆಂಜ್ ಆಗಿತ್ತು ನನ್ನನ್ನು (ದರ್ಶೀಲ್) ಕುಳ್ಳನ ರೀತಿ ತೋರಿಸಬೇಕಿತ್ತು. ಬಗ್ಗಬೇಕು ಬಗ್ಗ ಬೇಕು ಎಂದು ಪದೇ ಪದೇ ಹೇಳುತ್ತಿದ್ದರು ಮೈಕೈ ಎಲ್ಲಾ ನೋವಾಗುತ್ತಿತ್ತು. ಯಾವ ಗಿಮಿಕ್ ಮಾಡಿಲ್ಲ ಏಕೆಂದರೆ ಎಲ್ಲವೂ ನಾಮರ್ಲ್ ಆಗಿ ಕಾಣಿಸಬೇಕಿತ್ತು. ಎಷ್ಟು ಮಜಾವಿತ್ತು ಅಷ್ಟೇ ಸ್ಟ್ರೆಸ್ ಇತ್ತು' ಎಂದು ದರ್ಶೀಲ್ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಜನರ ಮಾತುಗಳು ಮಾನಸಿಕವಾಗಿ ಎಷ್ಟು ಪರಿಣಾಮ ಬೀರುತ್ತದೆ ಎಂದು ತಿಳಿಸಿ ಕೊಡಲು ಈ ಸಿನಿಮಾ ಮಾಡಿರುವುದು. 10ನೇ ವಯಸ್ಸಿಗೆ ಸೂಪರ್ ಹಿಟ್ ಸಿನಿಮಾ ಮಾಡಿರುವ ದರ್ಶೀಲ್ ಪಬ್ಲಿಕ್ ಐ ಆಗಿದ್ದರು, ಇದರಿಂದ ಆತನ ಮಾನಸಿಕ ನೆಮ್ಮದಿ ಹೇಗಿತ್ತು ಈ ಸಿನಿಮಾದಲ್ಲಿ ಕನೆಕ್ಟ್ ಆಗಿ ಹೇಳಿಕೊಂಡಿದ್ದಾರೆ. 'ತುಂಬಾ ಸೂಕ್ಷ್ಮದ ವ್ಯಕ್ತಿ ನಾನು. ಸಣ್ಣ ಪುಟ್ಟ ವಿಚಾರವೂ ನನ್ನ ಮನಸ್ಸಿಗೆ ನೋವು ಕೊಡುತ್ತದೆ. ಕಲಾವಿದನಾಗಿ ಜನರಿಗೆ ಪರಿಚಯ ಆದ ಮೇಲೆ ಹೊರಗಿನಿಂದ ಬರುವ ಮಾತುಗಳನ್ನು ಕೇಳಿಸಿಕೊಳ್ಳುವುದು ಕಡಿಮೆ ಮಾಡಬೇಕು ಯಾವುದು ಸತ್ಯ ಯಾವುದು ಸುಳ್ಳು ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ದರ್ಶೀಲ್ ಸೋಂಬೆರೆ ಎಂದು ಹೇಳಿದ್ದರೆ ಅದನ್ನು ನಾನು ಒಪ್ಪಿಕೊಳ್ಳಬೇಕು ದರ್ಶೀಲ್‌ಗೆ ಸಿನಿಮಾ ಮಾಡಲು ಇಷ್ಟವಿಲ್ಲ ಎಂದು ಹೇಳಿದ್ದರೆ ಅದನ್ನು ನಾನು ಸುಳ್ಳು ಎಂದು ಸಾಬೀತು ಮಾಡಬೇಕು' ಎಂದು ದರ್ಶೀಲ್ ಹೇಳಿದ್ದಾರೆ.
ಹಲ್ಲುಬ್ಬು ಇದ್ದ ಕಾರಣ ಜನರು ಹೇಗೆ ಪರ್ಸನಲ್ ಆಗಿ ಕಾಮೆಂಟ್ ಮಾಡುತ್ತಿದ್ದರು ಎಂದು ಹಂಚಿಕೊಂಡಿದ್ದಾರೆ. 'ನನ್ನ ಪರ್ಸನಲ್ ಜೀವನ ನಟನೆಯಿಂದ ತುಂಬಾ ದೂರ ಅವಮಾನಗಳನ್ನು ಎದುರಿಸಿರುವೆ. ನನ್ನ ಹಲ್ಲುಗಳು 1 ಕಿಮೋಮೀಟರ್ ಬಾಯಿಂದ ಮುಂದೆ ಇತ್ತು. ಬೇಸರ ಮಾಡಿಕೊಂಡ ನನಗೆ ಅದೃಷ್ಟವಾಗಿ ಸಿಕ್ಕಿದ್ದು ತಾರೆ ಜಮೀನ್ ಪರ್ ಸಿನಿಮಾ. ನನ್ನ ಜೀವನದಲ್ಲಿ ದೊಡ್ಡ ಪಾಠ ಹೇಳಿಟ್ಟ ಸಿನಿಮಾ ಅದು. ಅಲ್ಲಿಂದ ಜನರು ನನ್ನ ಬಗ್ಗೆ ಏನೇ ಕಾಮೆಂಟ್ ಮಾಡಿದ್ದರೂ ನಾನು ಕೇರ್ ಮಾಡುತ್ತಿರಲಿಲ್ಲ' ಎಂದಿದ್ದಾರೆ.
'ತಾರೆ ಜಮೀನ್ ಪರ್' ನಟ ದರ್ಶೀಲ್ ಸಫಾರಿ ಹೀಗಾಗಿದ್ದಾರೆ ನೋಡಿ...
ತಾರೆ ಜಮೀನ್ ಪರ್ ಸಿನಿಮಾ ಬಿಡುಗಡೆಯಾಗಿ 15 ವರ್ಷಗಳು ಕಳೆದಿದೆ. ದರ್ಶೀಲ್‌ಗೆ ಈಗ 25 ವರ್ಷ ಈ ಅವಧಿಯಲ್ಲಿ ಸುಮಾರು ಟಿವಿ ಶೋ, ಮ್ಯೂಸಿಕ್ ವಿಡಿಯೋ ಮತ್ತು ಕಿರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಎಲ್ಲೇ ದರ್ಶೀಲ್ ಹೆಸರು ಹೇಳಿದ್ದರೂ ಮೊದಲು ಕೇಳಿ ಬರುವುದು ತಾರೆ ಜಮೀನ್ ಪರ್ ಸಿನಿಮಾ. 'ನಾನು ತಾರೆ ಜಮೀನ್ ಪರ್ ಸಿನಿಮಾದ ಬಗ್ಗೆ ಚಿಂತಿಸುವುದನ್ನು ಬಿಟ್ಟಿರುವೆ ಏಕೆಂದರೆ ಅದರ ಬಗ್ಗೆ ಪದೇ ಪದೇ ಯೋಚನೆ ಮಾಡಿದ್ದರೆ ತಲೆ ಕೆಡುತ್ತದೆ ಬೇಸರವಾಗುತ್ತೆ ಹಾಗು ಖುಷಿನೂ ಇದೆ. ನಾನು ಮಾಡಿರುವ ಸಿನಿಮಾವನ್ನು ಜನರು ಈಗಲೂ ಈ ಕ್ಷಣದಲ್ಲೂ ತಮ್ಮ ಪರ್ಸನಲ್ ಲೈಫ್‌ಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆ ಅಂದ್ರೆ ನಾನು ಒಳ್ಳೆಯ ಕೆಲಸವೇ ಮಾಡಿರುವೆ. ಒಂದು ನೆಗೆಟಿವ್ ಏನೆಂದರೆ ನನ್ನನ್ನು ಹಾಗೆ ನೋಡಿ ನೋಡಿ ಜನರು ಮತ್ತೊಂದು ಪಾತ್ರದಲ್ಲಿ ಒಪ್ಪಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಹೊಸ ಮುಖ ಹೊಸ ಪರಿಚಯದ ರೀತಿ ನೋಡಿ ಎಂದು ಪದೇ ಪದೇ ಕೇಳಿರುವೆ. ನನ್ನ ವಯಸ್ಸು ಮುಖ್ಯವಲ್ಲ ಯಾರು ಏನೇ ಹೇಳಲಿ ನಾನು ಸಿನಿಮಾ ಮಾಡುವೆ. ತಾರೆ ಜಮೀನ್ ಪರ್ ಸಿನಿಮಾದಿಂದ ಜನರ ಭಾವನೆ ಏನೆಂದು ಅರ್ಥ ಮಾಡಿಕೊಂಡಿರುವೆ. ನನ್ನ ತಾತ ಅಜ್ಜಿ ಬಂದು ಕಣ್ಣೀರಿಟ್ಟಿದ್ದಾರೆ. ಜನರು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತೆ ಸಿನಿಮಾ ಮಾಡಬೇಕು' ಎಂದು ದರ್ಶೀಲ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.