Parineeti Chopra@35: 4 ಲಕ್ಷದ ಉಂಗುರ ತೋರಿಸ್ತಲೇ ಅಮ್ಮನಾಗುವ ವಿಷಯ ಮಾತಾಡಿದ ಪರಿಣಿತಿ!

Published : Oct 22, 2023, 05:28 PM IST
Parineeti Chopra@35: 4 ಲಕ್ಷದ ಉಂಗುರ ತೋರಿಸ್ತಲೇ ಅಮ್ಮನಾಗುವ ವಿಷಯ ಮಾತಾಡಿದ ಪರಿಣಿತಿ!

ಸಾರಾಂಶ

ನಟಿ ಪರಿಣಿತಿ ಚೋಪ್ರಾ ಅವರು ತಮ್ಮ ಎಂಗೇಜ್​ಮೆಂಟ್​ ಉಂಗುರ 4 ಲಕ್ಷ ಬೆಲೆ ಬಾಳುವುದಾಗಿ ಹೇಳಿಕೊಂಡಿದ್ದು, ಇದೇ ಸಂದರ್ಭದಲ್ಲಿ ಮಕ್ಕಳನ್ನು ದತ್ತು ಪಡೆಯುವ ಕುರಿತು ಮಾತನಾಡಿದ್ದಾರೆ.   

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​  ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಸದ್ಯ ಹನಿಮೂನ್​ ಮೂಡ್​ನಲ್ಲಿದ್ದಾರೆ. ಕಳೆದ ತಿಂಗಳ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.  ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ  ಮದುವೆ ನಡೆದಿದೆ.  ಒಂದು ವಾರದ ಸುದೀರ್ಘ ಮದುವೆಯ ಸಂಭ್ರಮದ ಬಳಿಕ ಸದ್ಯ ರಿಲ್ಯಾಕ್ಸ್​ ಆಗಿರುವ ಜೋಡಿ ಸಂತಸದಲ್ಲಿ ತೇಲಾಡುತ್ತಿದೆ.  ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ  ಮದುವೆಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದರು.  ಎಂಗೇಜ್​ಮೆಂಟ್​ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ,  ಜೋಡಿ ಮಾತ್ರ   ಇದರ ಬಗ್ಗೆ ತುಟಿಕ್​ ಪಿಟಿಕ್​ ಎಂದಿರಲಿಲ್ಲ.  ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಅದರ ವಿಡಿಯೋಗಳು ಹಂತ ಹಂತವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮದುವೆಯ ದಿನ ಮೊಬೈಲ್‌ ಫೋನ್‌ ಬ್ಯಾನ್‌ ಮಾಡಿದ್ದರಿಂದ ಮದುವೆಯ ದಿನವೇ ಫೋಟೋ, ವಿಡಿಯೋಗಳು ವೈರಲ್‌ ಆಗಿರಲಿಲ್ಲ. ಇದೀಗ ಮದುವೆ ಮುಗಿದ ಮೇಲೆ ಒಂದೊಂದೇ ವಿಡಿಯೋಗಳು ಬರುತ್ತಿವೆ.

ಇದಾದ ಬಳಿಕ ನಟಿ  ಮಾಲ್ಡೀವ್ಸ್‌ಗೆ ಹಾರಿದ್ದರು. ಎಲ್ಲರೂ ಇದನ್ನು ಹನಿಮೂನ್​ ಎಂದುಕೊಂಡಿದ್ದರು. ಆದರೆ ಇದು ಹನಿಮೂನ್​ ಅಲ್ಲ, ಬದಲಿಗೆ  ಗರ್ಲ್‌ಗ್ಯಾಂಗ್‌ ಜೊತೆ ಟ್ರಿಪ್‌ ಹೋಗಿರುವುದಾಗಿ ಹೇಳಿದ್ದರು.  ಇಂತಿಪ್ಪ ನಟಿ ಇಂದು ಅಂದರೆ ಅಕ್ಟೋಬರ್​ 22ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 35ನೇ ವಸಂತ ಮುಗಿಸಿ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ನಟಿ ಪರಿಣಿತಿ. ಈ ಸಂದರ್ಭದಲ್ಲಿ ಅವರು ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದಾರೆ. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದಾರೆ.  

ಅಬ್ಬಾ! ನನ್ನ ಮಗು ಗಾಜಾದಲ್ಲಿ ಹುಟ್ಟಿದ್ರೆ ಏನಾಗ್ತಿತ್ತು? ಅಲ್ಲಿಯ ಮಕ್ಕಳಿಗಾಗಿ ಸ್ವರಾ ಭಾಸ್ಕರ್‌ ಕಣ್ಣೀರು- ಭಾವುಕ ಪೋಸ್ಟ್‌

ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದಾರೆ. 

ಇದೇ ಸಂದರ್ಭದಲ್ಲಿ ತಮ್ಮ ಗಂಡ ಹೇಗಿರಬೇಕು ಎಂದು ಅವರು ಹೇಳಿದ್ದ ಹಳೆಯ ವಿಡಿಯೋ ವೈರಲ್​ ಆಗಿದೆ. ತಾವೆಂದೂ ರಾಜಕಾರಣಿಯನ್ನು ಮದ್ವೆಯಾಗಲ್ಲ ಎಂದಿದ್ದ ನಟಿ, ತಮ್ಮ ಗಂಡನಾಗುವವ ತಮ್ಮ ಮೂರು ಅಗತ್ಯಗಳನ್ನು ಪೂರೈಸಬೇಕು ಎಂಬ ಬಗ್ಗೆ ಹೇಳಿಕೊಂಡಿದ್ದರು. ನನ್ನನ್ನು ಮೊದಲು ಆಕರ್ಷಿಸುವ ವಿಷಯ ಹಾಸ್ಯಪ್ರಜ್ಞೆ. ನಾನು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದ್ದೇನೆ. ಅವನು ನನ್ನನ್ನು ನಗಿಸಿದರೆ ನಾನು ಅವನ್ನತ್ತ ಆಕರ್ಷಿತಳಾಗುವೆ. ಎರಡನೆಯಾಗಿ, ನಾನು ನಾನಾಗಿರಲು ಬಿಡಬೇಕು. ಜನರು ನನಗೆ ಏನು ಮಾಡಬೇಕು ಎಂದು ಹೇಳುವುದು ಇಷ್ಟವಾಗುವುದಿಲ್ಲ. ನಾನು ಹೇಗಿರಬೇಕು, ಹೇಗೆ ಕುಳಿತುಕೊಳ್ಳಬೇಕು, ಏನು ಧರಿಸಬೇಕು ಎಂದು ಯಾರಾದರೂ ಹೇಳುವಂತಿಲ್ಲ ಎಂದಿರೋ ನಟಿ,  ಮೂರನೆಯದಾಗಿ ಆತ ತುಂಬ ಉತ್ತಮ ಸ್ಮೈಲ್‌ ಹೊಂದಿರಬೇಕು. ಆತ, ಉತ್ತಮ ಸುಗಂಧ ದ್ರವ್ಯ ಹಾಕದೆ ಇದ್ದರೆ ಆತ ನನ್ನಿಂದ ದೂರ ಹೋಗಬಹುದು ಎಂದಿದ್ದರು. ಈಗ ರಾಘವ್​ ಚಡ್ಡಾ ಅವರು ಹೇಗಿದ್ದಾರೆ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ. 

ವಿಡಿಯೋ ಮಾಡಿ ಬಿಕ್ಕಿಬಿಕ್ಕಿ ಅತ್ತ ಸೀತಾರಾಮ ಸೀರಿಯಲ್​ ಪ್ರಿಯಾ: ಧೈರ್ಯವಾಗಿರಿ ಮೇಡಂ ಅಂದ ಫ್ಯಾನ್ಸ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!