
ಮುಂಬೈ (ಜೂ.28) ನಟಿ ಶೆಫಾಲಿ ಜರಿವಾಲ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬ ಈ ನೋವಿನಲ್ಲಿ ಒದ್ದಾಡುತ್ತಿದೆ. ಇದರ ನಡುವೆ ಶೆಫಾಲಿ ಸಾವು ಹೃದಯಾಘಾತದಿಂದ ಆಗಿದ್ದೇ? ಅಥವಾ ಇನ್ಯಾವುದೇ ಕಾರಣಗಳಿತ್ತಾ ಅನ್ನೋದರ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಆದರೆ 10 ತಿಂಗಳ ಹಿಂದೆ ಶೆಫಾಲಿ ಜರಿವಾಲ ಎದುರೇ ಈಕೆಯ ಕುಂಡಲಿ ಭವಿಷ್ಯ ನುಡಿಯಲಾಗಿತ್ತು. ಚಂದ್ರ, ಬುಧ ಹಾಗೂ ಕೇತು ಸ್ಥಾನಗಳ ಕುರಿತು ಹೇಳಿದ್ದು ಮಾತ್ರವಲ್ಲ, ಈ ಕುಂಡಲಿ ಹಠಾತ್ ನಿಧನವನ್ನು ಸೂಚಿಸುತ್ತದೆ ಎಂದು ಭವಿಷ್ಯ ನುಡಿಯಲಾಗಿತ್ತು. ಈ ಭವಿಷ್ಯವನ್ನು ಆಕೆಯ ಎದುರಲ್ಲೇ ಹೇಳಲಾಗಿತ್ತು. ಇದೀಗ 10 ತಿಂಗಳ ಬಳಿಕ ಈ ಭವಿಷ್ಯ ನಿಜವಾಗಿದೆ.
ಪರಾಸ್ ಚಬ್ರಾ ಪಾಡ್‌ಕಾಸ್ಟ್‌ನಲ್ಲಿ ಶಾಕಿಂಗ್ ಕುಂಡಲಿ ಭವಿಷ್ಯ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಶೇಫಾಲಿ ಜರಿವಾಲ ಹಾಗೂ ಪರಾಸ್ ಛಬ್ರಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪರಾಸ್ ಬಳಿಕ ಪಾಡ್‌ಕಾಸ್ಟ್ ಮೂಲಕ ಮಿಂಚುತ್ತಿದ್ದಾರೆ. ಪರಾಸ್ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ಶೆಫಾಲಿ ಜರಿವಾಲ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಪ್ರಶ್ನೆಗಳನ್ನು ಕೇಳುತ್ತಿದ್ದ ಪರಾಸ್ ಛಬ್ರಾ ಇದರ ನಡುವೆ ಕುಂಡಲಿ ಕುರಿತು ಮಾತನಾಡಿದ್ದಾರೆ. ಈ ವೇಳೆ ಪರಾಸ್ ಛಬ್ರ ನಿಮ್ಮ ಕುಂಡಲಿಯಲ್ಲಿ ಹಠಾತ್ ನಿಧನ ಅಥವಾ ತೀವ್ರ ಸಂಕಷ್ಟದ ಸೂಚನೆಗಳು ನೀಡುತ್ತಿದೆ ಎಂದಿದ್ದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಚಂದ್ರ, ಬುಧ ಹಾಗೂ ಕೇತು ನೀಡಿದ ಸೂಚನೆ
ಪರಾಸ್ ಛಬ್ರಾ ಶೆಫಾಲಿಗೆ ಕುಂಡಲಿ ಕುರಿತು ಹೇಳಿದ್ದಾರೆ. ನಿಮ್ಮ ಕುಂಡಲಿ ನಾನು ಗಮನಿಸಿದ್ದೇನೆ. ಇದರಲ್ಲಿ 8ನೇ ಸ್ಥಾನದಲ್ಲಿ ಚಂದ್ರ, ಬುಧ ಹಾಗೂ ಕೇತು ಕುಳಿತುಕೊಂಡಿದೆ. ಇದರಲ್ಲಿ ಚಂದ್ರ ಹಾಗೂ ಬುಧ ಸಂಯೋಗ ಅತ್ಯಂತ ಕೆಟ್ಟಕಾಲ ಸೂಚಿಸುತ್ತದೆ. ಇಷ್ಟೇ ಅಲ್ಲ 8ನೇ ಸ್ಥಾನ ಕೂಡ ಕೆಟ್ಟ ಸಮಯ ಸೂಚಿಸುತ್ತಿದೆ. ಇದರ ಪರಿಣಾಣ ಎಂದರೆ ಹಠಾತ್ ನಿಧನ, ಅಥವಾ ಜನಪ್ರಿಯತೆ ಕುಗ್ಗುವುದು, ವ್ಯಕ್ತಿತ್ವಕ್ಕೆ ಕಳಂಕ ಎದುರಾಗುವುದು, ಆಘಾತಕಾರಿ ಸೇರಿದಂತೆ ಹಲವು ಸಂಕಷ್ಟಗಳನ್ನು ಕುಂಡಲಿ ಸೂಚಿಸುತ್ತದೆ. 8ನೇ ಸ್ಥಾನದಲ್ಲಿ ಚಂದ್ರ, ಬುಧ ಹಾಗೂ ಕೇತು ಸಂಯೋಗ ಯಾವತ್ತೂ ಕೆಟ್ಟ ಸಮಯ ಸೂಚಿಸುತ್ತದೆ. ಆತಂಕ ಹಾಗೂ ನರ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಪರಾಸ್ ಛಬ್ರ ಹೇಳಿದ್ದಾರೆ.
ಪರಾಸ್ ಕುಂಡಲಿ ಭವಿಷ್ಯ ಕೇಳಿಸಿಕೊಂಡಿದ್ದ ಶೆಫಾಲಿ
ಪಾಡ್‌ಕಾಸ್ಟ್ ಶೋನಲ್ಲಿ ಪರಾಸ್ ಹೇಳುತ್ತಿದ್ದ ಕುಂಡಲಿಯನ್ನು ಶೆಫಾಲಿ ಜರಿವಾಲ ಕೇಳಿಸಿಕೊಂಡಿದ್ದರು. ಆದರೆ ಈ ವಿಚಾರವನ್ನು ಶೆಫಾಲಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಷ್ಟೇ ಅಲ್ಲ ಈ ರೀತಿ ಕುಂಡಲಿ ಭವಿಷ್ಯ ನುಡಿದ ಪರಾಸ್ ವಿರುದ್ಧ ಟೀಕೆಗಳು ಕೇಳಿಬಂದಿತ್ತು. ಪಾಡ್‌ಕಾಸ್ಟ್ ಮಾಡುವ ಬದಲು ಕುಂಡಲಿ ಭವಿಷ್ಯ ನುಡಿಯುತ್ತಿದ್ದಾನೆ ಎಂದು ಹಲವರು ಟೀಕಿಸಿದ್ದರು.
ಶೆಫಾಲಿ ನಿಧನದ ಬೆನ್ನಲ್ಲೇ ವೈರಲ್ ಆಗುತ್ತಿದೆ ಈ ವಿಡಿಯೋ
ಶೆಫಾಲಿ ಜರಿವಾಲ ಹಠಾತ್ ನಿಧನದಿಂದ ಪರಾಸ್ ಹೇಳಿದ ಕುಂಡಲಿ ಭವಿಷ್ಯ ವೈರಲ್ ಆಗುತ್ತಿದೆ. ಅಂದು ಟೀಕಿಸಿದ್ದ, ಟ್ರೋಲ್ ಮಾಡಿದ ಹಲವರು ಈತ 10 ತಿಂಗಳ ಹಿಂದೆ ಭವಿಷ್ಯ ನುಡಿದಿದ್ದ. ಕುಂಡಲಿ ನೀಡುತ್ತಿರುವ ಅಪಾಯದ ಸೂಚನಯೆನ್ನು ಶೆಫಾಲಿಗೆ ತಿಳಿಸಿದ್ದ ಎಂದು ಹಲವರು ಇದೀಗ ವಿಡಿಯೋ ಹಂಚಿಕೊಂಡು ಕಮೆಂಟ್ ಮಾಡುತ್ತಿದ್ದಾರೆ.
ಶೆಫಾಲಿ ಜರಿವಾಲ ಸಾವು ಆರೋಗ್ಯ ಕುರಿತು ಆತಂಕ ಹೆಚ್ಚಿಸುತ್ತಿದೆ. ಹಾಸನದಲ್ಲಿ ನಡೆಯುತ್ತಿರುವ ಸರಣಿ ಹೃದಯಾಘಾತ ಪ್ರಕರಣಗಳು, ಇದೀಗ ಫಿಟ್ ಆ್ಯಂಡ್ ಫೈನ್ ಆಗಿದ್ದ ಶೆಫಾಲಿ ಜರಿವಾಲ ಸೇರಿದಂತೆ ಸೆಲೆಬ್ರೆಟಿಗಳ ಸಾವು ಆರೋಗ್ಯದ ಕುರಿತು ಆತಂಕ ಇಮ್ಮಡಿಗೊಳಿಸುತ್ತಿದೆ. ಇತ್ತ ಶೆಫಾಲಿ ಸಾವಿನ ಸುತ್ತ ಕೆಲ ಅನುಮಾನಗಳು ಹುಟ್ಟಿಕೊಂಡಿದೆ. ಸಾವಿನ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.