ನಟ ಸಲೀಮ್ ಅಂತಿಮ ನಮನಕ್ಕಾದರೂ ದಾರಿ ಬಿಡಿ, ಪಾಪಾರಾಜಿ ವರ್ತನೆಗೆ ಸಹನೆ ಕಳೆದುಕೊಂಡ ಮಗ

Published : Jun 07, 2026, 09:00 PM IST
Chandu

ಸಾರಾಂಶ

ರಾಷ್ಟ್ರ ಪ್ರಶಸ್ತಿ ವಿಜೇತನ ನಟ ಸಲೀಂ ಕುಮಾರ್ ಅಂತ್ಯಕ್ರಿಯೆ ವೇಳೆ ನೋವಿನ ಘಟನೆ ನಡೆದಿದೆ. ಕುಟುಂಬಕ್ಕೆ ಅಂತಿಮ ನಮನ ಸಲ್ಲಿಸಲು ಪಾಪರಾಜಿಗಳು ಬಿಡದೆ ಮುಗಿಬಿದ್ದ ಘಟನೆ ನಡೆದಿದೆ. ಇದರಿಂದ ಸಲೀಂ ಮಗ ಸಹನೆ ಕಳೆದುಕೊಂಡು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಎರ್ನಾಕುಳಂ (ಜೂ.07) ರಾಷ್ಟ್ರಪಶಸ್ತಿ ವಿಜೇತ ಕಾಮಿಡಿ ನಟ ಸಲೀಂ ಕುಮಾರ್ ತೀವ್ರ ಅನಾರೋಗ್ಯದಿಂದ ನಿಧರಾಗಿದ್ದಾರೆ. ಸಲೀಂ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಲೀಂ ಕುಮಾರ್ ಅಂತ್ಯಸಂಸ್ಕಾರದ ವೇಳೆ ನೋವಿನ ಘಟನೆ ನಡೆದಿದೆ. ಸಲೀಂ ಕುಮಾರ್ ಅಂತಿಮ ವಿಧಿವಿಧಾನದ ನೆರವೇರಿಸಲು ಕುಟುಂಬಸ್ಥರಿಗೆ ಸ್ಥಳ ಹಾಗೂ ದಾರಿ ಇಲ್ಲದಂತೆ ಪಾಪರಾಜಿಗಳು ಮುಗಿಬಿದ್ದಿದ್ದರು. ಫೋಟೋ, ವಿಡಿಯೋ ತೆಗೆಯಲು ಮುಗಿಬಿದ್ದ ಪಾಪರಾಜಿಗಳ ವರ್ತನೆಗೆ ಸಹನೆ ಕಳೆದುಕೊಂಡ ಮಗ ಚಂದು ಸಲೀಂ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ತಂದೆ ಅಗಲಿಕೆ ನೋವಿನಲ್ಲೇ ಕಹಿ ಘಟನೆ

ತಂದೆ ಸಾವಿನ ನೋವಿನಲ್ಲಿದ್ದ ಮಗ ಹಾಗೂ ನಟ ಚಂದು ಸಲೀಂ ಕುಮಾರ್ ಪಾಪರಾಜಿಗಳ ವಿರುದ್ಧ ಹರಿಹಾಯ್ದಿದ್ದಾರೆ. ತಂದೆಗೆ ಅಂತಿಮ ನಮನ, ಅಂತ್ಯಸಂಸ್ಕಾರಕ್ಕಾದರೂ ಕುಟುಂಬಸ್ಥರಿಗೆ ದಾರಿ ಬಿಡಿ. ಎಲ್ಲರೂ ಹಿಂದೆ ಹೋಗಿ ಎಂದರೂ ಪಾಪರಾಜಿಗಳು ಫೋಟೋ, ವಿಡಿಯೋ, ಯೂಟ್ಯೂಬ್ ಲೈವ್‌ನಲ್ಲೇ ನಿರತರಾಗಿದ್ದರು. ಇದರಿಂದ ಕೋಪಗೊಂಡ ಚಂದು ಆಕ್ರೋಶದಿಂದಲೇ ಪಾಪರಾಜಿಗಳ ಸ್ಥಳವಕಾಶ ಮಾಡಿಕೊಡಲು ಹಿಂದಕ್ಕೆ ಸರಿಯುವಂತೆ ಗದರಿದ್ದಾರೆ.

ಫೋಟೋ, ವಿಡಿಯೋ ಲೈವ್‌ಗಾಗಿ ಪಾಪರಾಜಿಗಳ ಪ್ರಯತ್ನ

ಕುಟುಂಬಸ್ಥರು, ಆಪ್ತರು, ಸಿನಿಮಾ ರಂಗದ ಪ್ರಮುಖರು, ಸರ್ಕಾರದ ಮಂತ್ರಿಗಳು ಸೇರಿದಂತೆ ಹಲವು ಸಲೀಂ ಕುಮಾರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಲೀಂ ಕುಮಾರ್ ಅಂತ್ಯಕ್ರಿಯೆ ಎರ್ನಾಕುಲಂ ಜಿಲ್ಲೆಯ ನಾರ್ತ್ ಪರವೂರ್‌ನಲ್ಲಿರುವ ಅವರ ನಿವಾಸದಲ್ಲಿ ನಡೆದಿದೆ. ಈ ವೇಳೆ ಪಾಪಾರಾಜಿಗಳು ವಿಪರೀತ ಸಂಖ್ಯೆಯಲ್ಲಿ ಆಗಮಿಸಿ ಸ್ಥಳ ಆಕ್ರಮಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರು ಸೇರಿದ್ದರು. ಪಾಪಾರಾಜಿಗಳಿಂದ ಅಂತಿಮ ವಿಧಿವಿಧಾನಕ್ಕೂ ಅಡ್ಡಿಯಾಗಿತ್ತು. ತಂದೆ ಅಗಲಿಕೆ ನೋವಿನಲ್ಲಿದ್ದ ಚಂದು ಆಕ್ರೋಶ ಹೊರಹಾಕಿದ್ದಾರೆ.

ಫೋಟೋ, ವಿಡಿಯೋ, ಲೈವ್‌ಗಾಗಿ ಎಲ್ಲರೂ ಮುಂದೆ ಬಂದರೆ ಅಂತಿಮ ವಿಧಿವಿಧಾನ ನೆರವೇರಿಸುವುದು ಹೇಗೆ? ದಯವಿಟ್ಟು ಪಾಪರಾಜಿಗಳು ಹಿಂದಕ್ಕೆ ಸರಿಯಬೇಕು ಎಂದು ಆರಂಭದಲ್ಲಿ ಮನವಿ ಮಾಡಿದ್ದರು. ಆದರೆ ಈ ಮಾತನ್ನು ಕಿವಿಗೆ ಹಾಕಿಕೊಳ್ಳದ ಮತ್ತೆ ಮತ್ತೆ ಮುಂದೆ ಬಂದು ಕುಟುಂಬಸ್ಥರಿಗೆ ದಾರಿ ಬಿಡದಂತೆ ವರ್ತಿಸಿದ್ದರು. ಇದರಿಂದ ಚಂದು ಸಲೀಂ ಕುಮಾರ್ ತಾಳ್ಮೆ ಕಳೆದುಕೊಂಡಿದ್ದಾರೆ.

ಸ್ಥಳದಲ್ಲಿ ಹಲವರು ಚಂದು ಸಲೀಂ ಕುಮಾರ್ ಸಮಾಧಾನ ಪಡಿಸಿದ್ದಾರೆ. ಇದೇ ವೇಳೆ ಪಾಪಾರಾಜಿಗಳಲ್ಲಿ ಮನವಿ ಮಾಡಿ ಹಿಂದಕ್ಕೆ ಸರಿಯುವಂತೆ ಸೂಚಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಸಲೀಂ ಕುಮಾರ್ ಅಂತ್ಯಕ್ರಿಯೆ ನಡೆದಿದೆ. ಸಿನಿಮಾ ರಂಗದ ಹಲವರು, ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಸೇರಿದಂತೆ ಹಲವರು ಗೌರವ ನಮನ ಸಲ್ಲಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Peddi Piracy: HD ಕ್ವಾಲಿಟಿಯಲ್ಲಿ 'ಪೆದ್ದಿ' ಪೈರಸಿ.. ರಿಲೀಸ್ ಆದ 3ನೇ ದಿನಕ್ಕೆ ರಾಮ್ ಚರಣ್ ಟೀಮ್‌ಗೆ ಶಾಕ್!
ತ್ರಿಷಾ ಅಲ್ಲ, ರಾಘವ ಲಾರೆನ್ಸ್.. ತಿರುಚ್ಚಿ ಪೂರ್ವ ಉಪಚುನಾವಣೆ ಬಗ್ಗೆ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಬಿಸಿಬಿಸಿ ಚರ್ಚೆ!