ಕೊರೋನಾ ಪ್ರಕರಣಗಳ ಹೆಚ್ಚಳ | ಫೋಟೋಗ್ರಫರ್‌ಗಳನ್ನು ನೋಡಿ ಹತ್ರ ಬರ್ಬೇಡಿ ಎಂದ ಸೈಫ್ ಮಗಳು
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಮುಂಬೈನ ಸಾಂತಕ್ರೂಜ್ ಪ್ರದೇಶದ ಜಿಮ್‌ಗೆ ಆಗಮಿಸುತ್ತಿದ್ದಾಗ ಪಾಪರಾಜಿಗಳು ಫೋಟೋ ತೆಗೆಯೋಕೆ ಧಾವಿಸಿ ಬಂದಿದ್ದಾರೆ. ಇದೀಗ ನಟಿ ಪಾಪ್ಪರಾಜಿಗಳಿಗೆ ಕೊಟ್ಟ ರಿಯಾಕ್ಷನ್ ವೈರಲ್ ಆಗಿದೆ.
'ಕೂಲಿ ನಂ 1' ನಟಿ ತನ್ನಿಂದ ದೂರವಿರಲು ಕ್ಯಾಮೆರಾಮೆನ್‌ಗಳನ್ನು ವಿನಂತಿಸುವುದನ್ನು ಫೋಟೋಗಳಲ್ಲಿ ಕಾಣಬಹುದು. ಆತಂಕಕ್ಕೊಳಗಾದ ಸಾರಾ ಅವರು ಯಾರೂ ಹತ್ತಿರ ಬರದಂತೆ ಹೇಳುತ್ತಿರುವುದು, ಕೈ ಸನ್ನೆಗಳು ಮಾಡುತ್ತಿರುವುದು ಕಂಡುಬರುತ್ತದೆ. ಸಾರಾ ಮಾಸ್ಕ್ ಧರಿಸದೆ ತನ್ನ ಕಾರಿನಿಂದ ಇಳಿಯುವುದನ್ನು ಕಾಣಬಹುದು.
undefined
ಕಿತ್ತಾಡ್ತಾ ಇದ್ದೋರು ಫ್ರೆಂಡ್ಸ್ ಆದ್ರಾ ? ಕಂಗನಾಳನ್ನು ಹೊಗಳಿದ ತಾಪ್ಸಿ
ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಸಹೋದರಿ ಮಾಸ್ಕ್ ಧರಿಸಮ್ಮಾ ಎಂದು ಕಮೆಂಟ್ ಮಾಡಿದ್ದಾರೆ. ನಟಿ ಮಾಸ್ಕ್ ಧರಿಸಲು ಜನರಿಗೆ ಹೇಳುತ್ತಾಳೆ ಎಂದು ಹೇಳಿದ್ದಾರೆ ಇನ್ನು ಕೆಲವರು. ಇನ್ನೂ ಕೆಲವರು ಅಕ್ಕಾ ನಿಮ್ಮ ಮಾಸ್ಕ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಒಂದೇ ದಿನ 8,938 ಪ್ರಕರಣಗಳು ಹೆಚ್ಚಾಗಿದೆ. ಗುರುವಾರ, ಮಹಾರಾಷ್ಟ್ರದಲ್ಲಿ 56,286 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ಪ್ರಕರಣಗಳ ತೀವ್ರ ಏರಿಕೆಯಿಂದಾಗಿ, ಮುಂಬಯಿಯ ಬಿಎಂಸಿ ಗುರುವಾರ ಮುಂದಿನ ಆದೇಶದವರೆಗೆ ನಗರದಲ್ಲಿ ವಾರಾಂತ್ಯದ ಲಾಕ್‌ಡೌನ್ ವಿಧಿಸಿದೆ.