
ನಟಿ, ರಾಜಕಾರಣಿ ಜಯಾ ಬಚ್ಚನ್ ತಮ್ಮ 73 ನೇ ಹುಟ್ಟುಹಬ್ಬವನ್ನು ಏಪ್ರಿಲ್ 9 ರಂದು ಆಚರಿಸುತ್ತಿದ್ದಾರೆ. ವಿಶೇಷ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಅಪರೂಪದ ಥ್ರೋಬ್ಯಾಕ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಾಯಿಗೆ ಶುಭ ಹಾರೈಸಿದ್ದಾರೆ.
ಜನ್ಮದಿನದ ಶುಭಾಶಯಗಳು ಮಾ। ಲವ್ ಯು ಎಂದು ಅವರು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಅಭಿಷೇಕ್ ಮತ್ತು ಇಡೀ ಬಚ್ಚನ್ ಕುಟುಂಬದೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿರುವ ಹೃತಿಕ್ ರೋಷನ್ ಕೂಡ ಕಾಮೆಂಟ್ ವಿಭಾಗದಲ್ಲಿ ಜಯಾಗೆ ಶುಭ ಹಾರೈಸಿದರು. ಅವರು 2 ಅಪ್ಪುಗೆಯ ಎಮೋಜಿ ಜೊತೆಜನ್ಮದಿನದ ಶುಭಾಶಯಗಳು, ಜಯ ಆಂಟಿ ಎಂದು ಬರೆದಿದ್ದಾರೆ.
ಬೇಸಗೆಯ ಬಿಸಿ ಮತ್ತಷ್ಟು ಏರಿಸುತ್ತಿದ್ದಾರೆ ಜಾಹ್ನವಿ..! ಮಾಲ್ಡೀವ್ಸ್‌ನಲ್ಲಿ ಹಾಟೆಸ್ಟ್ ಲುಕ್
ಅಮಿತಾಬ್ ಬಚ್ಚನ್ ಮತ್ತು ಜಯಾ ಅವರ ಮೊಮ್ಮಗಳು ನವ್ಯಾ ನವೆಲಿ ಅವರು ಕಾಮೆಂಟ್ ವಿಭಾಗದಲ್ಲಿ ಹೃದಯಗಳನ್ನು ಪೋಸ್ಟ್ ಮಾಡಿದ್ದಾರೆ. ನೀತು ಕಪೂರ್, ಇಶಾ ಡಿಯೋಲ್ ಮತ್ತು ಫರಾಹ್ ಖಾನ್ ಕೂಡಾ ಶುಭಶಾಯ ತಿಳಿಸಿದ್ದಾರೆ.
1963 ರಲ್ಲಿ ಬಿಡುಗಡೆಯಾದ ಸತ್ಯಜಿತ್ ರೇ ಅವರ ಮಹಾನಗರದಲ್ಲಿ ಜಯಾ ಬಚ್ಚನ್ ಹದಿಹರೆಯದವರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜಂಜೀರ್, ಶೋಲೆ, ಚುಪ್ಕೆ ಚುಪ್ಕೆ, ಸಿಲ್ಸಿಲಾ ಮುಂತಾದ ಟಾಪ್ ಚಿತ್ರಗಳಲ್ಲಿ ಅವರು ಅನೇಕ ಸ್ಮರಣೀಯ ಪಾತ್ರಗಳನ್ನು ಮಾಡಿದ್ದಾರೆ. ತಮ್ಮ ಕಾಲದ ಪ್ರಮುಖ ತಾರೆಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು ಜಯಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.