ಶಾರುಖ್ ಖಾನ್ ಮತ್ತು ಗೌರಿ ಅವರು ಮದುವೆಯಾಗಿ 32 ವರ್ಷ ಕಳೆದಿದೆ. ಇವರ ಮದುವೆಯ ರಿಸೆಪ್ಷನ್ ದಿನ ಶಾರುಖ್ ಗೌರಿಗೆ ಬುರ್ಖಾ ಹಾಕ್ಕೋ ಎಂದಿದ್ದರಂತೆ. ಅಷ್ಟಕ್ಕೂ ಆಗಿದ್ದೇನು?
ಸಿನಿ ಪ್ರಿಯರಿಗೆ ತಿಳಿದಿರುವಂತೆ ಕೆಲ ಸಿನಿಮಾ ನಟರಂತೆ ಶಾರುಖ್ ಖಾನ್ ಕೂಡ ಹಿಂದೂ ಹುಡುಗಿಯನ್ನೇ ಮದುವೆಯಾದವರು. ಆದರೆ ಒಂದೇ ವ್ಯತ್ಯಾಸವೆಂದರೆ ಇದು ಇವರಿಬ್ಬರಿಗೂ ಮೊದಲ ಮದುವೆ ಹಾಗೂ ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. 1991ರಲ್ಲಿ ವಿವಾಹವಾಗಿದ್ದ ಈ ಜೋಡಿ 32 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಅತ್ಯಂತ ಖುಷಿಯಿಂದ ನಡೆಸುತ್ತಿದ್ದಾರೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇರುವ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಶಾರುಖ್ ಖಾನ್ ವಯಸ್ಸು 57 ಆದರೂ ತರುಣರನ್ನೂ ನಾಚಿಸುವಂತೆ ಚಿತ್ರರಂಗದಲ್ಲಿ ನಾಯಕನಾಗಿಯೇ ಮಿಂಚುತ್ತಿದ್ದರೆ, ಅವರ ಪತ್ನಿ 52 ವರ್ಷದ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬಿಜಿ ಇದ್ದಾರೆ. ಕೆಲ ತಿಂಗಳ ಹಿಂದೆ ಇಂಟೀರಿಯರ್ ಡಿಸೈನ್ ಕುರಿತು ಗೌರಿ ಖಾನ್ ಅವರು ಬರೆದಿರುವ ಪುಸ್ತಕದ ಬಿಡುಗಡೆಯಾಗಿದೆ.
ಅಂದಹಾಗೆ, ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಅಂದಹಾಗೆ, ಆ ವೇಳೆ 'ರಾಜು ಬನ್ ಗಯಾ ಹೀರೋ' ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್‌ನಿಂದಲೇ ಸ್ಯೂಟ್ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ! 1997ರ ನವೆಂಬರ್‌ನಲ್ಲಿ ಆರ್ಯನ್ ಖಾನ್‌ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್‌ರಾಮ್ ಎಂದು ಹೆಸರಿಟ್ಟಿದ್ದಾರೆ. ಒಟ್ಟು ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ.
undefined
ಶಾರುಖ್ ಖಾನ್ ಮೈ ಪರಿಮಳ ಎಂದ್ರೆ ಹೆಂಗಸರಿಗೆ ಇಷ್ಟವಂತೆ! ನಟಿಯರೇನು ಹೇಳಿದ್ರು ಕೇಳಿ
ಇದೀಗ ಈ ಹಿಂದೂ-ಮುಸ್ಲಿಂ ಮದುವೆಯ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷ್ಯ ಹೊರಬಂದಿದೆ. ಅದನ್ನು ಖುದ್ದು ಶಾರುಖ್ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದು, ಅದೀಗ ಪುನಃ ವೈರಲ್ ಆಗುತ್ತಿದೆ. ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗುವಾಗ ಏನೆಲ್ಲಾ ನಡೆಯಬಹುದು ಎಂದು ಕೆಲವೊಮ್ಮೆ ಊಹಿಸುವುದೂ ಕಷ್ಟ. ಅಂಥದ್ದೇ ಒಂದು ಪರಿಸ್ಥಿತಿಯನ್ನು ತಾವು ಎದುರಿಸಿರುವುದಾಗಿ ಶಾರುಖ್ ಹೇಳಿಕೊಂಡಿದ್ದಾರೆ.
ಅದನ್ನು ಅವರ ಮಾತಿನಲ್ಲಿಯೇ ಕೇಳಿ: ನಾನು ಮತ್ತು ಗೌರಿ ತುಂಬಾ ವರ್ಷ ಲವ್ ಮಾಡಿದ ಬಳಿಕ ಮದುವೆಗೆ ನಿರ್ಧರಿಸಿದೆವು. ಗೌರಿ ಮನೆಯವರು ತುಂಬಾ ಸಂಪ್ರದಾಯಸ್ಥರು. ಅವರ ಕುಟುಂಬ ಮತ್ತು ಸಂಪ್ರದಾಯವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದರೆ ಮುಸ್ಲಿಂ ಯುವಕನನ್ನು ಮದುವೆಯಾಗುವುದು ಆಕೆಯ ಕುಟುಂಬಸ್ಥರು ಮತ್ತು ಹಲವರಿಗೆ ಹಿಡಿಸಿರಲಿಲ್ಲ. ಅದು ರಿಸೆಪ್ಷನ್ ದಿನವಾಗಿತ್ತು. ಅಂದು ಅಲ್ಲಿ ನೆರೆದಿದ್ದ ಹಲವರಿಗೆ ನಾನು ಮುಸ್ಲಿಂ ಎಂದು ಅಂದೇ ಗೊತ್ತಾಗಿತ್ತು. ಅದನ್ನು ನೋಡಿ ಗುಸುಗುಸು ಶುರುಮಾಡಿದರು. ಅರೆ ಈತ ಮುಸ್ಲಿಂ ಯುವಕನಾ? ಮುಗಿಯಿತು ಗೌರಿ ಕಥೆ ಅಂದರು. ಗೌರಿ ಹೆಸರನ್ನು ಈಗಲೇ ಚೇಂಜ್ ಮಾಡ್ತಾನಾ ಅಥವಾ ಕೊನೆಗೆ ಮಾಡ್ತಾನಾ ಎಂದೆಲ್ಲಾ ಮಾತನಾಡಲು ಶುರು ಮಾಡಿದರು. ನನ್ನ ಕಿವಿಗೆ ಅವರ ಮಾತು ಕೇಳಿತು. ತಕ್ಷಣ ಒಂದು ತಮಾಷೆ ಮಾಡೋಣ ಎನ್ನಿಸಿತು. ಆಗಿದ್ದು ಆಗಲಿ ಎಂದು ಆಯ್ತು ಗೌರಿ, ಎದ್ದೇಳು. ಬುರ್ಖಾ ಹಾಕಿಕೊ, ಬಾ ಇಬ್ಬರೂ ಸೇರಿ ನಮಾಜ್ ಮಾಡ್ವಾ ಎಂದೆ. ಅಷ್ಟು ಹೇಳುತ್ತಿದ್ದಂತೆಯೇ ಅಲ್ಲಿದ್ದವರು ಒಹೊ ಈಗ್ಲೇಶುರು ಹಚ್ಕೊಂಡನಾ ಅಂತ ಗುಸುಗುಸು ಶುರು ಮಾಡಿದರು. ಇನ್ನು ಗೌರಿ ಜೀವನ ಮುಗಿದು ಹೋಯ್ತು. ಅವಳು ಇನ್ನು ಸದಾ ಬುರ್ಖಾದಲ್ಲಿಯೇ ಇರ್ಬೇಕು, ಮನೆಯಿಂದ ಹೊರಕ್ಕೆ ಹೆಜ್ಜೆ ಇಡುವಂತಿಲ್ಲ. ಗೌರಿ ಕಥೆ ಅಷ್ಟೇ. ಗೌರಿ ಹೆಸ್ರನ್ನು ಆಯೇಷಾ ಅಂತ ಮಾಡ್ತಾರೆ, ಇವಳ ಜೀವನ ಇಲ್ಲಿಗೇ ಕಥಮ್ ಎಂದೇ ಆಡಿಕೊಂಡರು ಎಂದ ಶಾರುಖ್, ಎಲ್ಲರೂ ಅವರವರ ಧರ್ಮವನ್ನು ಪ್ರೀತಿಸಿ ಆದರೆ ಧರ್ಮ ಎಂದಿಗೂ ಪ್ರೀತಿಗೆ ಅಡ್ಡವಾಗಬಾರದು ಎಂದು ಹೇಳಿದರು. ಇದಕ್ಕೆ ನಮ್ಮಿಬ್ಬರ ಪ್ರೀತಿಯೇ ಸಾಕ್ಷಿ ಎಂದ ಶಾರುಖ್, ಈಗ ನಿಜವಾಗಿಯೂ ಹೇಳಬೇಕೆಂದರೆ, ಗೌರಿಯ ತವರಿನವರು ಅವಳಿಗಿಂತಲೂ ನನಗೇ ಹೆಚ್ಚು ಪ್ರೀತಿಸುತ್ತಾರೆ ಎಂದರು.
ರಣವೀರ್ಗೂ ಮೊದ್ಲು ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!