ತಂದೆ ನಿಧನದ ಬೆನ್ನಲ್ಲೇ ಖ್ಯಾತ ಗಾಯಕಿ ತಪು ಮಿಶ್ರಾ ಕೊರೋನಾಗೆ ಬಲಿ!

By Suvarna NewsFirst Published Jun 20, 2021, 3:45 PM IST
Highlights
  • ಖ್ಯಾತ ಗಾಯತಿ ತಪು ಮಿಶ್ರಾ ಕೊರೋನಾದಿಂದ ನಿಧನ
  • 10 ದಿನದ ಅಂತರದಲ್ಲಿ ತಂದೆ-ಪುತ್ರಿ ಕೊರೋನಾಗೆ ಬಲಿ
  • 150ಕ್ಕೂ ಹೆಚ್ಚು ಸಿನಿಮಾ ಹಾಡಿಗೆ ಸ್ವರ ನೀಡಿದ್ದ ತಪು

ಭುವನೇಶ್ವರ(ಜೂ.20): ಕೊರೋನಾ ವಕ್ಕರಿಸಿದ ಮನಕಲುಕುವ ಘಟನೆಗಳು ಜನರಿಗೆ ಮತ್ತಷ್ಟು ಆಘಾತ ನೀಡುತ್ತಿದೆ. ತಂದೆ ನಿಧನರಾದ 10 ದಿನಕ್ಕೆ ಖ್ಯಾತ ಗಾಯಕಿ ತಪು ಮಿಶ್ರಾ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. 36 ವರ್ಷದ ಒಡಿಯಾ ಪ್ಲೇ ಬ್ಲಾಕ್ ಸಿಂಗರ್ ತಪು ಮಿಶ್ರಾ, ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ.

ಮ್ಯಾನ್‌ಹೋಲ್‌ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಯ್ತು: ಸಂಚಾರಿ ವಿಜಯ್ ಸ್ನೇಹಿತನ ಸ್ಪಷ್ಟನೆ!

ಕೊರೋನಾ ಕಾರಣ ತಪು ಮಿಶ್ರಾ ತೀವ್ರ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆ ದಾಖಲಾದ ಮಿಶ್ರಾಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ದಿಡೀರ್ ಆಕ್ಸಿಜನ್ ಪ್ರಮಾಣ ಕೂಡ ಕಡಿಮೆಯಾಗಿತ್ತು. ವೆಂಟಿಲೇಟರ್ ನೆರವು ನೀಡಲಾಗಿತ್ತು. ಆದರೆ ಆಮ್ಲಜನಕ ಪ್ರಮಾಣ 45ಕ್ಕೆ ಇಳಿದಿತ್ತು. ಪರಿಣಾಮ ಇಂದು(ಜೂ.20) ತಪು ಮಿಶ್ರಾ ನಿಧರಾಗಿದ್ದಾರೆ.

ಒಡಿಯಾದಲ್ಲಿ 150ಕ್ಕೂ ಹೆಚ್ಚು ಸಿನಿಮಾಗೆ ಸ್ವರ ನೀಡಿದ ತಪು, ಹಲವು ಭಕ್ತಿ ಗೀತೆ ಹಾಗೂ ಭಾವಗೀತೆಗಳ ಆಲ್ಬಮ್ ಅತ್ಯಂತ ಜನಪ್ರಿಯವಾಗಿತ್ತು. ಆಸ್ಪತ್ರೆ ದಾಖಲಾದ ತಪು ಮಿಶ್ರಾ ಚಿಕಿತ್ಸೆಗೆ ಒಡಿಶಾ ಸಂಸ್ಕೃತಿ ಇಲಾಖೆ 1 ಲಕ್ಷ ರೂಪಾಯಿ  ಬಿಡುಗಡೆ ಮಾಡಿತ್ತು. ಇನ್ನು ಒಡಿಯಾ ಸಿನಿ ರಂಗ ತಪು ಮಿಶ್ರಾ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸಿತ್ತು.

ದುಡಿಮೆ ಇಲ್ಲ, ಫೇಸ್‌ಬುಕ್ ಲೈವ್‌ನಲ್ಲಿ ನಟನ ಆತ್ಯಹತ್ಯೆ ಸುಳಿವು; ಪ್ರಾಣ ಉಳಿಸಿದ ಪೊಲೀಸ್!.

ತಪು ಮಿಶ್ರಾ ನಿಧನಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ.  ಗಾಯಕಿ ತಪು ಮಿಶ್ರಾ ನಿಧನ ವಾರ್ತೆ ಬೇಸರ ತಂದಿದೆ. ಅವರ ಸಮಧುರ ಕಂಠ, ಸಂಗೀತ ಜನಗತ್ತಿನ ಕೊಡಗೆ ಸದಾ ನೆನನಪಿನಲ್ಲಿ ಉಳಿಯುತ್ತದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪಟ್ನಾಯಕ್ ಹೇಳಿದ್ದಾರೆ.

click me!