ಬೆಳ್ಳಂಬೆಳಗ್ಗೆ ಮುಖಕ್ಕೆ ಎಂಜಲು ಹಚ್ಚಿಕೊಂಡರೆ ಕಾಂತಿ ಹೆಚ್ಚುತ್ತದೆ: ನಟಿ ತಮನ್ನಾ

By Suvarna News  |  First Published Jun 20, 2021, 10:54 AM IST

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ನಟಿ ತಮನ್ನಾ ಮಾಡಿದ ವಿಚಿತ್ರ ಪ್ಲ್ಯಾನ್. ವರ್ಕ್ ಆಗದಿದ್ದರೆ ಎಂದು ಪ್ರಶ್ನಿಸಿದ ನೆಟ್ಟಿಗರು.
 


ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ರಂಗನ್ನು ಹೆಚ್ಚಿಸಿದ ನಟಿ ತಮನ್ನಾ ಭಾಟಿಯಾ ಈವರೆಗೂ ತಮ್ಮ ತ್ವಚೆಯ ಆರೈಕೆ ಬಗ್ಗೆ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಸಣ್ಣ ಪುಟ್ಟ ಸಿಂಪಲ್ ಟಿಪ್‌ಗಳನ್ನು ನೀಡಿ ಸುಮ್ಮನಾಗುತ್ತಿದ್ದರು. ಆದರೀಗ ಯಾರಿಗೂ ತಿಳಿಯದ ವಿಚಿತ್ರ ಹ್ಯಾಕ್ ಬಗ್ಗೆ ರಿವೀಲ್ ಮಾಡಿದ್ದಾರೆ. 

ದಕ್ಷಿಣ ಭಾರತ ಚಿತ್ರರಂಗದ ಮಿಲ್ಕ್‌ ಬ್ಯೂಟಿ ತಮನ್ನಾ ಪಿಂಕ್‌ವಿಲ್ಲ ಸಂದರ್ಶನದಲ್ಲಿ ಈ ಬ್ಯೂಸಿ ಹ್ಯಾಕ್ ಬಗ್ಗೆ ಹೇಳಿದ್ದಾರೆ. 'ನಾನು ಅಷ್ಟೇನು ವಿಚಿತ್ರವಾಗಿ ಮುಖಕ್ಕೆ ಮೇಲೆ ಪ್ರಯೋಗ ಮಾಡುವುದಿಲ್ಲ. ಒಂದು ಸಲ earth-clay ಮತ್ತು ಸೇಬು ಸೈಡರ್ ವಿನೆಗರ್ ಬಳಸಿ ಹಚ್ಚಿದೆ.  ನಾನು ಯಾಕೆ ಇದೆಲ್ಲಾ ಪ್ರಯೋಗ ಮಾಡಲು ಒಪ್ಪಿಕೊಂಡೆ ಗೊತ್ತಿಲ್ಲ ಆದರೆ ಉಪಯೋಗ ಆಗಿದ್ದು ನಿಜ' ಎಂದು ತಮನ್ನಾ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

ಹಾಲಿನ ಬಣ್ಣವಿರುವ ನಟಿ ದುಬಾರಿ ಫೇಸ್‌ ಪ್ಯಾಕ್ ಅಥವಾ ಬೇರೆ ಏನಾದರೂ ಪ್ರಯೋಗ ಮಾಡಬಹುದು ಎಂದು ನೆಟ್ಟಿಗರು ಯೋಚಿಸುತ್ತಿದ್ದರೆ ತಮನ್ನಾ ಕೊಟ್ಟ ಉತ್ತರ ಕೇಳಿ ಶಾಕ್ ಆಗಿದ್ದಾರೆ. ಕೆಲವರು ನಾವೂ ಪ್ರಯೋಗ ಮಾಡಿದ್ದೀವಿ ಉಪಯೋಗ ಆಗಿದೆ ಎಂದು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಮಿಲ್ಕ್ ಬ್ಯೂಟಿ ಒಂದು ಸಿಂಪಲ್ ಮತ್ತು ವಿಚಿತ್ರ ಸ್ಕಿನ್ ಕೇರ್ ಹೇಳಿಕೊಟ್ಟರು. 

ಕಿರುತೆರೆಗೆ 'ಮಿಲ್ಕಿ ಬ್ಯೂಟಿ' ಎಂಟ್ರಿ; ಅಡುಗೆ ಕಾರ್ಯಕ್ರಮಕ್ಕೆ ನಟಿ ತಮನ್ನಾ ನಿರೂಪಕಿ! 

'ಇನ್ನೂ ವಿಚಿತ್ರ ಪ್ರಯೋಗದ ಬಗ್ಗೆ ನೀವು ಪ್ರಶ್ನೆ ಮಾಡಿದ್ದರೆ ನಾನು ಹೇಳೋದು ಒಂದೇ. ನನ್ನ ಮುಖಕ್ಕೆ ನಾನು ಪ್ರಯೋಗ ಮಾಡಿದ ವಿಚಿತ್ರ ವಸ್ತು ಅಂದ್ರೆ ನನ್ನ ಎಂಜಲು. ಮುಖ್ಯವಾಗಿ ಬೆಳಗಿನ ಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಂಡಿದ್ದೇನೆ. ಬೆಳಗ್ಗಿನ ಎಂಜಲುಗೆ ಮುಖದ ಮೊಡವೆಗಳನ್ನು ಒಣಗಿಸುವ ಸಾಮರ್ಥ್ಯವಿದೆ.  ಕೇಳಲು ನಿಮಗೆ ವಿಚಿತ್ರ ಅನಿಸಬಹುದು ಆದರೆ ತುಂಬಾ ಪರಿಣಾಮಕಾರಿಯಾಗಿದೆ' ಎಂದು ತಮನ್ನಾ ಹೇಳಿದ್ದಾರೆ.

click me!