ಹಿರಿಯ ನಟ ಅಜಿತ್ ದಾಸ್ ಇನ್ನಿಲ್ಲ

By Suvarna NewsFirst Published Sep 14, 2020, 4:34 PM IST
Highlights

ಅನಾರೋಗ್ಯದಿಂದ ಕೊನೆ ಉಸಿರೆಳೆದ ಒಡಿಶಾ ಹಿರಿಯ ಕಲಾವಿದ  ಅಜಿತ್ ದಾಸ್ (71). ಕಂಬನಿ ಮಿಡಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಹಾಗೂ ಸಿನಿ ಗಣ್ಯರು. 

ಒಡಿಶಾ ಚಿತ್ರರಂಗದ ಹಿರಿಯ ಕಲಾವಿದ ಅಜಿತ್ ದಾಸ್‌ ಹಲವು ದಿನಗಳಿಂದ ಅನಾರೋಗ್ಯರಾಗಿದ್ದು, ಸೆ.14ರಂದು ಕೊನೆಯುಸಿರೆಳೆದಿದ್ದಾರೆ. ಸೆಪ್ಟೆಂಬರ್‌ 1ರಂದು ಕೋವಿಡ್‌19 ಎಂದು ದೃಢವಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೃತಪಟ್ಟಿರುವುದು ಕೊರೋನಾದಿಂದಾನಾ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 

ತಮಿಳು ಕಾಮಿಡಿ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ಸಾವು 

60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಹತ್ತಾರು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಾಸ್, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಟನಾ ತರಬೇತಿ  ಪಡೆದಿದ್ದರು. ಭುವನೇಶ್ವರದ NSD ನಾಟಕ ವಿಭಾಗದ ಮಾಜಿ ಮುಖ್ಯಸ್ಥರೂ ಹೌದು. 

1949ರಲ್ಲಿ ಜನಿಸಿದ ದಾಸ್‌ 1976ರಲ್ಲಿ ಸಿಂಧೂರ್‌ ಬಿಂದು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2018ರಲ್ಲಿ ತೆರೆ ಕಂಡ 'ಇಷ್ಕ್ ಪುನಿ ಥಾರೆ' ದಾಸ್ ಅವರ ಕೊನೆಯ ಸಿನಿಮಾ.

'ನಟ ಅಜಿತ್ ದಾಸ್ ನಿಧನ ಒಡಿಯಾ ಚಲನಚಿತ್ರೋದ್ಯಮಕ್ಕೆ ದೊಡ್ಡ ನಷ್ಟ.  ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಸಂಖ್ಯಾತ ಸಿನಿ ಪ್ರೇಮಿಗಳ ಹೃದಯಸಲ್ಲಿ ದಾಸ್‌ ಸದಾಕಾಲ ನೆಲೆಸಿರುತ್ತಾರೆ,' ಎಂದು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಟ್ಟೀಟ್ ಮಾಡಿದ್ದಾರೆ.

ಖ್ಯಾತ ಗಾಯಕಿ ಅನುರಾಧಾಗೆ ಪುತ್ರ ವಿಯೋಗ: ಕಿಡ್ನಿ ವೈಫಲ್ಯದಿಂದ ಮಗ ಆದಿತ್ಯ ಸಾವು

ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿರುವ ದಾಸ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಾಬಂಧುಗಳು ಹಾಗೂ ಅಭಿಮಾನಿಗಳು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

click me!