Viral Video: ಕಾವಾಲಯ್ಯ ಹಾಡಿಗೆ ಸೊಂಟ ಬಳುಕಿಸಿದ ಗೋರಿಲ್ಲಾ- ನಟಿಯರಿಗಿಂತ್ಲೂ ಇದೇ ಸೂಪರ್‌ ಎಂದ ನೆಟ್ಟಿಗರು!

Published : Sep 26, 2023, 12:54 PM ISTUpdated : Sep 27, 2023, 09:48 AM IST
Viral Video: ಕಾವಾಲಯ್ಯ ಹಾಡಿಗೆ ಸೊಂಟ ಬಳುಕಿಸಿದ ಗೋರಿಲ್ಲಾ- ನಟಿಯರಿಗಿಂತ್ಲೂ ಇದೇ ಸೂಪರ್‌ ಎಂದ ನೆಟ್ಟಿಗರು!

ಸಾರಾಂಶ

ಜೈಲರ್​ ಚಿತ್ರದ ಕಾವಾಲಯ್ಯ ಹಾಡಿಗೆ ಈಗ ಗೋರಿಲ್ಲಾ ಸೊಂಟ ಬಳುಕಿಸಿ ಡ್ಯಾನ್ಸ್​ ಮಾಡಿದ್ದು, ಇದರ ಮುಂದೆ ಯಾವ ನಟಿಯರೂ ಲೆಕ್ಕಕ್ಕೇ ಇಲ್ಲ ಅಂತಿದ್ದಾರೆ ನೆಟ್ಟಿಗರು.  

ಕಾಲಿವುಡ್​​ ಸಿನಿಮಾ ‘ಜೈಲರ್’ (Jailer) ಚಿತ್ರ ಹಲವಾರು ದಾಖಲೆ ಬರೆದು  ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಕಳೆದ ಆಗಸ್ಟ್​ 9ರಂದು  ಬಿಡುಗಡೆಯಾಗಿದ್ದ ಈ ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳಲ್ಲಿಯೇ ಭರ್ಜರಿ ಕಲೆಕ್ಷನ್​ ಮಾಡಿತ್ತು.  ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಯೂ ಇದು ಇಂದಿಗೂ ಸಕತ್​ ಸದ್ದು ಮಾಡುತ್ತಿದೆ.  ಎರಡು ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.  ಆರಂಭದಲ್ಲಿಯೇ  ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್‌ ಬುಕಿಂಗ್‌ ಮಾಡಲಾಗಿತ್ತು. ನೆಲ್ಸನ್‌ ದಿಲೀಪ್‌ಕುಮಾರ್‌ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್‌ ನಿವೃತ್ತ ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದಾರೆ.   
 
 ಜೈಲರ್​ ಚಿತ್ರ ಬಿಡುಗಡೆಯಾಗುವ ಮುನ್ನವೇ ಹವಾ ಸೃಷ್ಟಿಸಿದ್ದು ಅದರ ಕಾವಲಾಯ್ಯ ಹಾಡು. ಒಂದೆಡೆ (Rajinikanth) ಅವರ ಅಭಿನಯಕ್ಕೆ ಜನ ಸೋತಿದ್ದರೆ, ಇನ್ನೊಂದೆಡೆ ಕಾವಾಲ ಹಾಡು ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ ಜುಲೈ 6ರಂದು ಈ ಬಿಡುಗಡೆಯಾಗಿತ್ತು.  ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿರುವುದು ಇತಿಹಾಸ. ಈಗಲೂ ಈ ಹಾಡಿನ ಹವಾ ನಿಂತಿಲ್ಲ.  ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಲೇ ಸಾಗಿದೆ. 

ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್​: ಉಫ್​ ಎಂದ ಫ್ಯಾನ್ಸ್​!

ಫೇಸ್​ಬುಕ್, ಇನ್‌ಸ್ಟಾಗ್ರಾಮ್​, ವಾಟ್ಸಪ್‌ ಸ್ಟೇಟಸ್‌ನಲ್ಲೂ ಇದೇ ಈಗ ಟ್ರೆಂಡಿಂಗ್‌ನಲ್ಲಿದೆ. ಮಕ್ಕಳಿಂದ ಹಿಡಿದು ಅಜ್ಜಿಯರವರೆಗೆ, ಕಿರುತೆರೆ ಕಲಾವಿದರಿಂದ ಹಿಡಿದು ಬೇರೆ ಬೇರೆ ನಟಿಯರೂ ಈ ಹಾಡಿಗೆ ಡಾನ್ಸ್​ ಮಾಡಿ ಮೋಡಿ ಮಾಡುತ್ತಿದ್ದಾರೆ. ಈಚೆಗೆ ಕಿರುತೆರೆ ನಟಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಪುಟ್ಟಕ್ಕನ ಮಕ್ಕಳು ನಾಯಕಿ ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ, ಜಪಾನಿನ ರಾಯಭಾರಿ ಭರ್ಜರಿ ಸ್ಟೆಪ್ ಹಾಕಿದ್ದರು.  ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಬಿಂದಾಸ್ ಆಗಿ ಕುಣಿದು ಮಿಲ್ಕಿ ಬ್ಯೂಟಿ ಫ್ಯಾನ್ಸ್​ ಹೃದಯಕ್ಕೆ ಲಗ್ಗೆ ಇಟ್ಟುಬಿಟ್ಟಿದ್ದಾರೆ. ರೀಲ್ಸ್​ನಲ್ಲಿ ಪ್ರವೀಣರಾದವರ ಪೈಕಿ ಬಹುತೇಕ ಯುವತಿಯರಿಗಂತೂ ಈ ಹಾಡು ಅಚ್ಚುಮೆಚ್ಚಾಗಿದ್ದು, ಸಕತ್​ ಲೈಕ್ಸ್​ ಕೂಡ ಬರುತ್ತಿವೆ. ಒಟ್ಟಿನಲ್ಲಿ ಈ ಡಾನ್ಸ್​ (Dacne) ಇಂಟರ್‌ನೆಟ್‌ನಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಿದೆ. 

ಈ ಹಾಡಿಗೆ ಅರುಣರಾಜ ಕಾಮರಾಜ್ ಸಾಹಿತ್ಯವಿದೆ.  ಅನಿರುದ್ಧ್ ಮ್ಯೂಸಿಕ್, ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಕೇಳುಗರಿಗೆ ಆಪ್ತವಾಗಿದೆ.  ತಮನ್ನಾ ಭಾಟಿಯಾ ಅವರ ಡ್ಯಾನ್ಸ್​ ಅಂತೂ ಮೋಡಿ ಮಾಡುತ್ತಿದೆ. ಹಲವರಿಗೆ ಈ ಹಾಡು, ನೃತ್ಯ ಎಲ್ಲವೂ ಹುಚ್ಚೇ ಹಿಡಿಸಿದೆ. ಇಷ್ಟು ದಿನ ನಟಿಯರು, ನಟರು ಸೇರಿದಂತೆ ಹಿರಿಯರು, ಕಿರಿಯರು ಎಲ್ಲರೂ ಸ್ಟೆಪ್​ ಹಾಕಿದ್ದಾಯ್ತು. ಈಗ ಅವರೆಲ್ಲರನ್ನೂ ನಾಚಿಸುವಂತೆ ಗೋರಿಲ್ಲಾ ಭರ್ಜರಿ ಸ್ಟೆಪ್​ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಸೊಂಟ ಬಳುಕಿಸಿ ಕುಣಿದ ಈ ಡ್ಯಾನ್ಸ್​ ನೋಡಿದ ನೆಟ್ಟಿಗರು ಗೋರಿಲ್ಲಾಕೆ ಫಿದಾ ಆಗಿ ಬಿಟ್ಟಿದ್ದಾರೆ. ಇದರ ಮುಂದೆ ಯಾವ ನಟಿಯರೂ ಲೆಕ್ಕಕ್ಕೇ ಇಲ್ಲ ಎನ್ನುತ್ತಿದ್ದಾರೆ. ಸೀರೆಯುಟ್ಟ ಗೋರಿಲ್ಲಾ ಡ್ರೆಸ್‌ಗೂ ನೆಟ್ಟಿಗರು ಫಿದಾ ಆಗಿದ್ದಾರೆ.

'ಜೈಲರ್'​ ಕಾವಾಲಾ ಹಾಡಿಗೆ ಜಪಾನಿನ ರಾಯಭಾರಿಯಿಂದ ಭರ್ಜರಿ ಡ್ಯಾನ್ಸ್​

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?
ಚಿಂದಿ ಬಟ್ಟೆ ಧರಿಸಿ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ Toxic ನಟಿ: ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಾ!