ನಾನಿನ್ನು 'ಅಗ್ಗ' ಅಲ್ಲ: ಐಟಿ ರೇಡ್‌ ಬಗ್ಗೆ ತಾಪ್ಸಿ ವ್ಯಂಗ್ಯ!

Published : Mar 07, 2021, 07:38 AM ISTUpdated : Mar 07, 2021, 07:45 AM IST
ನಾನಿನ್ನು 'ಅಗ್ಗ' ಅಲ್ಲ: ಐಟಿ ರೇಡ್‌ ಬಗ್ಗೆ ತಾಪ್ಸಿ ವ್ಯಂಗ್ಯ!

ಸಾರಾಂಶ

ನಾನಿನ್ನು ಅಗ್ಗ ಅಲ್ಲ: ಐಟಿ ರೇಡ್‌ ಬಗ್ಗೆ ತಾಪ್ಸಿ ವ್ಯಂಗ್ಯ!| 2013ರ ಐಟಿ ರೇಡ್‌ ಬಗ್ಗೆ ಹೇಳಿದ ಸಚಿವೆ ನಿರ್ಮಲಾಗೆ ಟಾಂಗ್‌

ಮುಂಬೈ(ಮಾ.07): ಕೆಲ ದಿನಗಳ ಹಿಂದೆ ತಮ್ಮ ಮೇಲೆ ನಡೆದ ಆದಾಯ ತೆರಿಗೆ (ಐಟಿ) ದಾಳಿ ಕುರಿತು ಮೌನ ಮುರಿದಿರುವ ಬಾಲಿವುಡ್‌ ನಟಿ ತಾಪ್ಸಿ ಪನ್ನು ಹಾಗೂ ನಿರ್ದೇಶಕ ಅನುರಾಗ್‌ ಕಶ್ಯಪ್‌ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.

ತಾಪ್ಸಿ ಪನ್ನು ಅವರು ‘ಗಮನಿಸಿ, ನಾನಿನ್ನು ಅಗ್ಗ ಅಲ್ಲ’ ಎಂದು ವ್ಯಂಗ್ಯವಾಗಿ 3 ಟ್ವೀಟ್‌ ಮಾಡಿದ್ದಾರೆ. ಇನ್ನು ಚಿತ್ರೀಕರಣಕ್ಕೆ ಮರಳಿರುವ ಕಶ್ಯಪ್‌, ‘ನನ್ನ ಟೀಕಾಕಾರರಿಗೆ ವಂದನೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ತಾಪ್ಸಿ ಪನ್ನು ಹೇಳಿಕೆ ನೀಡಿ, ‘3 ದಿನಗಳ ವ್ಯಾಪಕ ತಪಾಸಣೆ ನಡೆಸಿದ್ದು ಇದರ ಬಗ್ಗೆ: 1.ಪ್ಯಾರಿಸ್‌ನಲ್ಲಿ ನಾನು ಹೊಂದಿದ್ದೇನೆ ಎನ್ನಲಾದ ಬಂಗಲೆಯ ಕೀ ಬಗ್ಗೆ. ಏಕೆಂದರೆ ಬೇಸಿಗೆ ರಜೆ ಹತ್ತಿರ ಬರುತ್ತಿದೆ. 2.ನಾನು ಪಡೆದುಕೊಂಡಿದ್ದೇನೆ ಎನ್ನಲಾದ 5 ಕೋಟಿ ರು. ಬಗ್ಗೆ. ಏಕೆಂದರೆ ಈ ಹಿಂದೆ ಆ ಹಣವನ್ನು ನಾನು ನಿರಾಕರಿಸಿದ್ದೆ. 3.ಗೌರವಾನ್ವಿತ ಹಣಕಾಸು ಮಂತ್ರಿಗಳ ಪ್ರಕಾರ ಈ ಹಿಂದೆ 2013ರಲ್ಲೂ ನನ್ನ ಮೇಲೆ ನಡೆದಿತ್ತು ಎನ್ನಲಾದ ಐಟಿ ದಾಳಿಯ ಕುರಿತು ನನಗಿರುವ ನೆನಪಿನ ಬಗ್ಗೆ. ಗಮನಿಸಿ: ನಾನಿನ್ನು ಮೊದಲಿನಂತೆ ಅಗ್ಗ (ಸಸ್ತಾ) ಅಲ್ಲ’ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ‘ಈ ನಟರ ಮೇಲೆ 2013ರಲ್ಲೂ ಐಟಿ ದಾಳಿ ನಡೆದಿತ್ತು. ಆಗ ಯಾರೂ ಗದ್ದಲ ಮಾಡಿರಲಿಲ್ಲ’ ಎಂದು ಹೇಳಿದ್ದರು. ಅದಕ್ಕೆ ತಾಪ್ಸಿ ತಿರುಗೇಟು ನೀಡಿದ್ದಾರೆ. ಮಾ.3ರಂದು ತಾಪ್ಸಿ ಹಾಗೂ ಬಾಲಿವುಡ್‌ ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಆ ವೇಳೆ 650 ಕೋಟಿ ರು.ಗಿಂತ ಹೆಚ್ಚು ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ ಎನ್ನಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!