Kalpana Patowary: ಮಗಳು ಬೇಕಂದ್ರೆ ಹಿಂದೂವಾಗು ಅಂದ್ರೆ, ಅಳಿಯ ಮಾಡಿದ್ದೇನು?

By Suvarna NewsFirst Published Jun 18, 2023, 11:54 AM IST
Highlights

ಮುಸ್ಲಿಂ ಯುವಕನನ್ನು ಮದುವೆಯಾದ ಖ್ಯಾತ ಬಾಲಿವುಡ್‌ ಗಾಯಕಿ ಕಲ್ಪನಾ ಪಟ್ವಾರಿಯ ಇಂಟರೆಸ್ಟಿಂಗ್‌ ಲವ್‌ ಸ್ಟೋರಿ ಇಲ್ಲಿದೆ.
 

ಇತ್ತೀಚಿನ ದಿನಗಳಲ್ಲಿ ಮುಸ್ಲಿ-ಹಿಂದೂ  ಮದುವೆಗಳ  ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಇವುಗಳಲ್ಲಿ ಹೆಚ್ಚಿನವು ವಿವಾದದ ಸುದ್ದಿಗಳೇ ಆಗಿರುತ್ತವೆ. ಆದರೆ ಇದಾಗಲೇ ಬಾಲಿವುಡ್‌ ಸೇರಿದಂತೆ ಸಿನಿ ಕ್ಷೇತ್ರದ ಹಲವು ಹಿಂದೂ ನಟಿಯರು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಅಪ್ಪನ ವಯಸ್ಸಿನ ನಟನ ಜೊತೆ ಮದ್ವೆಯಾದ ನಟಿಯರೂ ಇದ್ದಾರೆ, 2-3ನೇ ಪತ್ನಿಯಾಗಿ ಹೋದವರೂ ಇದ್ದಾರೆ. ಬಹುತೇಕ ಎಲ್ಲರೂ ಹೀಗೆ ಮದುವೆಯಾದ ಮೇಲೆ ಮುಸ್ಲಿಂ ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ. ಇವರ ಪೈಕಿ ಕೆಲವು ನಟಿಯರು  ಸುಖ ಸಂಸಾರ ನಡೆಸುತ್ತಿದ್ದಾರೆ. ಇದು ನಟಿಯರ ವಿಷಯವಾದರೆ, ಕೆಲವು ಖ್ಯಾತನಾಮ ನಟರು ಹಿಂದೂ ಯುವತಿಯರನ್ನೇ ಮದುವೆಯಾಗಿ ಆದರ್ಶ ಜೀವನ ನಡೆಸುತ್ತಿದ್ದಾರೆ. ಇಂಥದ್ದೇ ಇನ್ನೊಂದು ಕುತೂಹಲದ ಲವ್‌ ಸ್ಟೋರಿ ಖ್ಯಾತ ಬಹುಭಾಷಾ ಗಾಯಕಿ ಕಲ್ಪನಾ ಪಟ್ವಾರಿ (Kalpana Patowary) ಅವರದ್ದು. ಸದ್ಯ ಭೋಜ್‌ಪುರಿ ಉದ್ಯಮದಲ್ಲಿ ಗುರುತಿಸಿಕೊಂಡಿರುವ ಕಲ್ಪನಾ ಅವರದ್ದು ಬಲು ರೋಚಕ ಕಥೆ.

ಅಂದಹಾಗೆ ಹಿರಿಯ ಗಾಯಕಿ ಕಲ್ಪನಾ ಪಟ್ವಾರಿ ಅವರು ಭೋಜ್‌ಪುರಿ (Bhojpuri) ಜವಾರ್‌ನಲ್ಲಿ ಮಾತ್ರವಲ್ಲದೆ ಅಸ್ಸಾಮಿ, ಬಂಗಾಲಿ ಭಾಷೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅದರೆ ಇವರಿಗೆ ಹೆಸರು ತಂದುಕೊಟ್ಟದ್ದು  ಬಾಲಿವುಡ್ ಗಾಯಕಿಯಾಗಿದೆ.   'ರಾಜಕುಮಾರ' ಚಿತ್ರದ 'ಗಂದಿ ಬಾತ್' ನಿಂದ 'ಸ್ವಾಗತ'ದ 'ಉಂಚಾ ಲಂಬಾ ಖಾಡ್' ವರೆಗೆ ಬಾಲಿವುಡ್‌ನಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ ಕಲ್ಪನಾ ಪಟ್ವಾರಿ. ಕಲ್ಪನಾ ಪಟ್ವಾರಿ ಅವರ ವೃತ್ತಿಪರ ಜೀವನವು ತುಂಬಾ ಶ್ರೀಮಂತವಾಗಿದೆ, ಆದರೆ ಕೆಲವೇ ಜನರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಿದೆ. ಇದು ತುಂಬಾ ಇಂಟರೆಸ್ಟಿಂಗ್‌ ಆಗಿದ್ದು, ಇದು ಕೂಡ ಮುಸ್ಲಿಂ-ಹಿಂದೂ ಧರ್ಮದ ಮದುವೆಯಾಗಿದೆ.

ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು

ಹೌದು! ಕಲ್ಪನಾ ಅವರು ಮದುವೆಯಾದದ್ದು ಮುಸ್ಲಿಂ ವ್ಯಕ್ತಿಯನ್ನು. ಇದಕ್ಕಾಗಿ ಮನೆಯವರನ್ನೇ ದೂರ ಮಾಡಿಕೊಂಡರು, ಮಾತ್ರವಲ್ಲದೇ ತಮ್ಮ ಗುರುವೂ ಆಗಿರುವ ತಂದೆಯ ದ್ವೇಷ ಕಟ್ಟಿಕೊಂಡರು! ಕಲ್ಪನಾ ಪಟ್ವಾರಿ ಅಸ್ಸಾಂ ನಿವಾಸಿ. ಅವರ ತಂದೆ ಬಿಪಿನ್ ನಾಥ್ ಪಟ್ವಾರಿ ಕೂಡ ಪ್ರಸಿದ್ಧ ಗಾಯಕ. ತಂದೆಯೇ ಇವರ ಗುರು. ಕಲ್ಪನಾ ಅವರು ತಮ್ಮ  ತಂದೆಯೊಂದಿಗೆ ಸ್ಟೇಜ್ ಶೋಗಳಿಗೆ ಹೋಗುತ್ತಿದ್ದರು. ಆದ್ದರಿಂದ ಇವರ  ನಡುವಿನ ಸಂಬಂಧವು ಗುರು ಮತ್ತು ಶಿಷ್ಯರ ಸಂಬಂಧ.  ನಂತರ ಕಲ್ಪನಾ ಅವರು ಪರ್ವೇಜ್ ಖಾನ್ (Pravez  Khan) ಎನ್ನುವವರನ್ನು ವರಿಸಿದ್ದರು. ಇವರು ತಮ್ಮ ಕನಸಿನ ರಾಜಕುಮಾರ ಎಂದರು.

ಆದರೆ ಅಂತರ್‌ ಧರ್ಮದ ಕಾರಣದಿಂದಾಗಿ ಮನೆಯವರು ಈ ಮದುವೆಯನ್ನು ಒಪ್ಪಲಿಲ್ಲ. ಆದರೆ ಅವರನ್ನೇ ಮದುವೆಯಾಗುವುದಾಗಿ ಕಲ್ಪನಾ ಒತ್ತಾಯಪಡಿಸಿದಾಗ, ಕಲ್ಪನಾ ತಂದೆ ಭಾವಿ ಅಳಿಯನಿಗೆ ಒಂದು ಷರತ್ತು ವಿಧಿಸಿದರು. ಅದೇನೆಂದರೆ ಫಿರೋಜ್ ಖಾನ್ ಧರ್ಮ ಬದಲಿಸಿ ಹಿಂದೂ ಧರ್ಮ ಸ್ವೀಕರಿಸಿದರೆ ಮದುವೆಗೆ ಸಿದ್ಧ ಎಂದರು. ಆದರೆ ಇಲ್ಲಿಯೇ ಗಲಾಟೆ ಶುರುವಾಯಿತು. ಕೊನೆಗೆ ಕಲ್ಪನಾ ಅವರೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಬಿಟ್ಟರು. 19 ನೇ ವಯಸ್ಸಿನಲ್ಲಿ ಫಿರೋಜ್ ಖಾನ್ ಅವರನ್ನು ವಿವಾಹವಾಗಿ  ಕಲ್ಪನಾ ಪಟ್ವಾರಿ ಕಲ್ಪನಾ ಪರ್ವೇಜ್ ಖಾನ್ ಆದರು. ತಂದೆ-ಮಗಳ ಸಂಬಂಧ ದೂರವಾಯಿತು.

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

ಇದೀಗ ಕಲ್ಪನಾ ಪಟ್ವಾರಿ ಮತ್ತು ಪರ್ವೇಜ್ ಖಾನ್ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅರಿಸ್ಟಾಟಲ್ ಪಿ ಖಾನ್ ಮತ್ತು ಅರ್ಶ್ಮಿದ್ ಪಿ ಖಾನ್. ಇಬ್ಬರಿಗೂ ಹಾಡುವ ಆಸಕ್ತಿ ಇದ್ದು, ಕಲ್ಪನಾ ಅವರಿಗೂ ಹಾಡುವುದನ್ನು ಕಲಿಸುತ್ತಾರೆ. ದಿ ಕೇರಳ ಸ್ಟೋರಿ ಬಳಿಕ ಹಿಂದೂ-ಮುಸ್ಲಿಂ (Hindu- muslim) ಸಂಬಂಧದ ಕುರಿತು ಸಾಕಷ್ಟು ವಿಷಯಗಳು ಮುನ್ನೆಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕಲ್ಪನಾ ಅವರ ಕಥೆಯೂ ಮುನ್ನೆಲೆಗೆ ಬಂದಿದೆ.

click me!