
'ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್ ಚಿತ್ರ ಚಿತ್ರಮಂದಿರಗಳಿಂದ ನಾಗಾಲೋಟದಿಂದ ಓಡಿತು. ಈ ಚಿತ್ರದಲ್ಲಿ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ. ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಇದೇ ಡಿಸೆಂಬರ್ 1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗಿದೆ. ಇದರ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿಯ ಸಮೀಪವಾಗಿದೆ.
ಇದರ ಬೆನ್ನಲ್ಲೇ ಇದೀಗ ಓಟಿಟಿಯಲ್ಲಿ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಸಿನಿಮಾಗಳಲ್ಲಿ ಯಾವುದೇ ಮುಜುಗರ ಪಟ್ಟುಕೊಳ್ಳದೇ ಧಾರಾಳವಾಗಿ ದೇಹ ಪ್ರದರ್ಶನ ಮಾಡುವ, ಸ್ತನಗಳ ಗಾತ್ರಗಳನ್ನು ದೊಡ್ಡದಾಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಕೊಂಡು ಹೋದಲ್ಲಿ, ಬಂದಲ್ಲಿ ಅದರ ಪ್ರದರ್ಶನ ಮಾಡುವ ಬಹುತೇಕ ನಟಿಯರನ್ನು ಸೈಡ್ಗೆ ಹಾಕಿದ್ದಾರೆ ಅನಿಮಲ್ ತೃಪ್ತಿ ಡಿಮ್ರಿ. ಇದೆಲ್ಲಾ ಸಾಧ್ಯವಾಗಿಸಿದ್ದು ಸಂಪೂರ್ಣ ಬೆತ್ತಲೆ ದೃಶ್ಯ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ. ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯ, ತೃಪ್ತಿ ಡಿಮ್ರಿ ಮತ್ತು ರಣಬೀರ್ ಕಪೂರ್ ಬೆತ್ತಲೆ ದೃಶ್ಯ ನೋಡಿ ಹಲವರು ಬಾಯಿ ಚಪ್ಪರಿಸಿದ್ದು, ಚಿತ್ರವನ್ನು ಭರ್ಜರಿ ಯಶಸ್ವಿಗೊಳಿಸಿದ್ದಾರೆ.
ಇಷ್ಟು ಸಾಲದು ಎಂಬುದಕ್ಕೆ ಅನಿಮಲ್ ಪ್ರೇಮಿಗಳು ಓಟಿಟಿಯಲ್ಲಿ ಚಿತ್ರ ನೋಡಲು ಮುಗಿಬಿದ್ದಿದ್ದರು. ನಿನ್ನೆ ಅಂದರೆ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ‘ಅನಿಮಲ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರೂ ಹಾಗೂ ಈ ಎಲ್ಲಾ ಅಶ್ಲೀಲ, ದೌರ್ಜನ್ಯದ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಲಾಗದೇ ಬಹಳ ಮಿಸ್ ಮಾಡಿಕೊಂಡಿದ್ದ ಪ್ರೇಮಿಗಳು ಮನೆಯಲ್ಲಿ ಕುಳಿತು ವೀಕ್ಷಿಸುವ ಸಲುವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಹಲವರಿಗೆ ಈ ಚಿತ್ರ ನೋಡಿ ಬಹಳ ಬೇಜಾರು ಆಗಿದೆಯಂತೆ. ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದಕ್ಕೆ ಕಾರಣ, ಎಗ್ಗಿಲ್ಲದ ಅಶ್ಲೀಲತೆ, ಹೆಣ್ಣಿನ ಮೇಲೆ ದೌರ್ಜನ್ಯದ ದೃಶ್ಯಗಳ ಪೈಕಿ ಕೆಲವನ್ನು ಸೆನ್ಸಾರ್ ಮಂಡಳಿ ಕಿತ್ತು ಹಾಕಿತ್ತು. ಇದರ ಹೊರತಾಗಿಯೂ ತೃಪ್ತಿ ಡಿಮ್ರಿ ಮತ್ತು ರಶ್ಮಿಕಾ ಮಂದಣ್ಣನವರನ್ನು ನೋಡಿ ಸಿನಿ ಪ್ರಿಯರು ಬಹಳ ಖುಷಿಪಟ್ಟುಕೊಂಡಿದ್ದರು. ಇದಿಷ್ಟೂ ಅವರಿಗೆ ಸಾಕಾದಂತೆ ಕಾಣಿಸಲಿಲ್ಲ. ಸೆನ್ಸಾರ್ ಮಂಡಳಿ ಕತ್ತರಿ ಹಾಕಿರುವ ದೃಶ್ಯಗಳಲ್ಲಿಯೇ ಹೀಗಿರುವಾಗ ಯಾವುದೇ ಸೆನ್ಸಾರ್ ಇಲ್ಲದ ಓಟಿಟಿ ವೇದಿಕೆಯಲ್ಲಿ ಇನ್ನೆಷ್ಟು ದೃಶ್ಯಗಳನ್ನು ನೋಡಬಹುದು ಎಂದು ತಡೆದುಕೊಳ್ಳಲಾಗದೇ ಓಟಿಟಿ ಮೊರೆ ಹೋಗಿದ್ದರು. ಆದರೆ ಆ ದೃಶ್ಯಗಳನ್ನು ಓಟಿಟಿಯಲ್ಲಿಯೂ ಪ್ರಸಾರ ಮಾಡುವ ಗೋಜಿಗೆ ಹೋಗಲಿಲ್ಲ. ಇದರಿಂದ ಪ್ರೇಕ್ಷಕರು ಗರಂ ಆಗಿದ್ದಾರೆ.
ಈ ಚಿತ್ರದ ಅವಧಿ 3 ಗಂಟೆ 24 ನಿಮಿಷ ಇದ್ದು, ಓಟಿಟಿಯಲ್ಲಿಯೂ ಅಷ್ಟೇ ಇರುವುದನ್ನು ನೋಡಿಯೇ ಮೊದಲಿಗೆ ಸಿನಿ ಪ್ರಿಯರಿಗೆ ನಿರಾಸೆಯಾಗಿತ್ತು. ಆದರೂ ಆಸೆಗಣ್ಣುಗಳಿಂದ ನೋಡಿದರೆ, ಸೆನ್ಸಾರ್ ಮಂಡಳಿ ಕಟ್ ಮಾಡಿದ ದೃಶ್ಯಗಳು ಓಟಿಟಿಯಲ್ಲಿಯೂ ಸಿಗದೇ ಭಾರಿ ನಿರಾಸೆಯಾಗಿದ್ದಾರೆ. ಇದು ಒಂದೆಡೆಯಾದರೆ ರಣಬೀರ್ ಕಪೂರ್ ಹಾಗೂ ಬಾಬಿ ಡಿಯೋಲ್ ನಡುವಿನ ಕಿಸ್ ದೃಶ್ಯ ಸಹ ಚಿತ್ರದಲ್ಲಿ ಇತ್ತು, ಅದನ್ನು ಸೆನ್ಸಾರ್ ಮಂಡಳಿ ಡಿಲೀಟ್ ಮಾಡಿತ್ತು ಎನ್ನಲಾಗಿತ್ತು. ಅದು ಕೂಡ ಓಟಿಟಿಯಲ್ಲಿ ಕಾಣಿಸಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
'ಅನಿಮಲ್' ಯಶಸ್ಸು ಡೇಂಜರಸ್ ಎಂದ ಜಾವೇದ್ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.